ಬೆಂ.ಗ್ರಾ.ಜಿಲ್ಲೆ: ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಅಧಿನಿಯಮ 4(2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ (Nelamangala Municipal Council) ಏಳು ಸದಸ್ಯರನ್ನು ಅನರ್ಹಗೊಳಿಸಿ (Disqualified) ಜಿಲ್ಲಾಧಿಕಾರಿ ಎ.ಬಿ. ಬಸವರಾಜು (A.B. Basavaraju) ಅವರು ಆದೇಶಿಸಿದ್ದಾರೆ.
ದಿನಾಂಕ 13.2.2025 ರಂದು ನೆಲಮಂಗಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಪ್ರತಿಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದರಿಂದ ಪಕ್ಷವು ಮನ್ನಿಸದ ಕಾರಣ ಅನರ್ಹಗೊಳಿಸಲಾಗಿದೆ.
ಅನರ್ಹರಾದವರು: ಆನಂದ ಜಿ, ಶಾರದಾ ಉಮೇಶ್, ದಾಕ್ಷಾಯಿಣಿ ರವಿಕುಮಾರ್, ಪದ್ಮನಾಭ ಪ್ರಸನ್ನ – ಸ್ಥಾಯಿ ಸಮಿತಿ ಅಧ್ಯಕ್ಷರು, ಭಾರತಿ ಬಾಯಿ, ನರಸಿಂಹಮೂರ್ತಿ, ಲತಾ ಹೇಮಂತ್ ಕುಮಾರ್ ಪ್ರಸ್ತುತ ಉಪಾಧ್ಯಕ್ಷರು.