ದೊಡ್ಡಬಳ್ಳಾಪುರ: ಮಾರ್ಚ್ 3ರಂದು ಚಂದ್ರ ಗ್ರಹಣದ ಹಿನ್ನಲೆಯಲ್ಲಿ ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವನ್ನು (Ghati temple) ಬಂದ್ ಮಾಡಲಾಗುತ್ತದೆ.
ಮಾ.3 ರಂದು ಸ್ವಾಮಿಯವರಿಗೆ ಬೆಳಗ್ಗೆ 7.30 ಗಂಟೆಗೆ ಅಭಿಷೇಕ ಪ್ರಾರಂಭವಾಗಿ 8.30 ಗಂಟೆಗೆ ಯವರೆಗೆ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
ನಂತರ ಬೆಳಗ್ಗೆ 10 ಗಂಟೆಗೆ ದೇವಾಲಯ ಮುಚ್ಚಲಾಗುವುದು. ಅನ್ನದಾಸೋಹ ಸೇವೆ ಸಹ 10 ಗಂಟೆಯವರೆಗೆ ನೆರವೇರುತ್ತದೆ.
ಮತ್ತೆ ರಾತ್ರಿ 7.45 ಗಂಟೆಗೆ ದೇವಾಲಯ ತೆರೆಯಲಾಗುವುದು ಎಂದು ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.