ಸರ್ಕಾರದ ಅನುಮತಿಗಾಗಿ ಕಾದಿರುವ ಗಣೇಶ ಮೂರ್ತಿ ತಯಾರಕರು: ಡಿ.ಶ್ರೀಕಾಂತ

ದೊಡ್ಡಬಳ್ಳಾಪುರ: ಪ್ರತಿವರ್ಷ ಗಣೇಶ ಚತುರ್ಥಿ ಒಂದು ತಿಂಗಳಿರುವಂತೆಯೇ ಗಣೇಶ ಮೂರ್ತಿಗಳ  ತಯಾರಿಕೆ ಕಾರ್ ಬಿರುಸಾಗಿ ಸಾಗುವುದು ಸಾಮಾನ್ಯ. ಆದರೆ ಬಾರಿ ಕೊವಿಡ್19 ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ವಿಸಲಾಗುತ್ತಿರುವ ಲಾಕ್ಡೌನ್ ಹಾಗೂ ಹಬ್ಬ ಉತ್ಸವಗಳಿಗೆ ಬ್ರೇಕ್ ಬಿದ್ದಿರುವುದರಿಂದ, ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ವಿಗ್ರಹ ತಯಾರಕರು ಎದುರು ನೋಡುತ್ತಿದ್ದಾರೆ.

ಪಾರಂಪರಿಕ ಮಣ್ಣಿನ ಗಣಪ:

ತಾಲೂಕಿನ ಕಂಟನಕುಂಟೆ, ಗುಂಡುಮಗೆರೆ, ಲಘುಮೇನಹಳ್ಳಿಗಳಲ್ಲಿ ಪಾರಂಪರಿಕ ಕುಂಬಾರ ವೃತ್ತಿ ಮಾಡುವ ಮಂದಿ ಗಣೇಶ ವಿಗ್ರಹಗಳ ತಯಾರಿಕೆ ಮಾಡುತ್ತಾರೆ. ಹಿಡಿಯಷ್ಟು ಚಿಕ್ಕ ಗಣಪನಿಂದ ಹಿಡಿದು 5 ಅಡಿ ಎತ್ತರದ ಗಣೇಶ ವಿಗ್ರಹಗಳು ಇಲ್ಲಿ ತಯಾರಾಗುತ್ತವೆ. ನೈಸರ್ಗಿಕ ಬಣ್ಣಗಳಿಂದ ಮೂರ್ತಿಗಳು ಹಾಗೂ ಬಣ್ಣರಹಿತ ಗಣಪನ ಮೂರ್ತಿಗಳೂ ತಯಾರಾಗುತ್ತವೆಗಣೇಶ ಹಬ್ಬ ಒಂದು ತಿಂಗಳಿದ್ದಂತೆ ಸಗಟು ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಆರಂಭಿಸುತ್ತಾರೆ. ಗಣೇಶನ ವಿಗ್ರಹಗಳಿಗೆ ಮುಂಗಡ ನೀಡಿ, ಇವರಿಂದ ಮಾರಾಟಗಾರರು ಖರೀದಿಸುತ್ತಾರೆ. ಆದರೆ ಇನ್ನೂ ಯಾವುದೇ ವ್ಯಾಪಾರ ಆರಂಭವಾಗಿಲ್ಲ. ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡದಿರುವುದು ಬಹುತೇಕ ಖಚಿತ. ಇನ್ನು ಮನೆಗಳಲ್ಲಿ ಯಾವ ರೀತಿ ಹಬ್ಬ ಆಚರಿಸಬೇಕು ಎನ್ನುವ ಮಾರ್ಗಸೂಚಿ ಪ್ರಕಟವಾಗಿಲ್ಲ. ಹೀಗಾಗಿ ಗಣೇಶ ಮೂರ್ತಿಗಳನ್ನು ಎಷ್ಟು ತಯಾರು ಮಾಡುವುದು ಎನ್ನುವ ಗೊಂದಲದಲ್ಲಿದ್ದಾರೆ.

ಪ್ರತಿವರ್ಷ ಎಂದಿನಂತೆ ತಯಾರಿಸುವಷ್ಟು ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆ. ಆದರೆ 2.5 ಅಡಿಗಿಂತ ಎತ್ತರದ ಮೂರ್ತಿಗಳನ್ನು ಹೊಸದಾಗಿ ತಯಾರು ಮಾಡಿಲ್ಲ. ಹಿಂದಿನ ವರ್ಷದ ದೊಡ್ಡ ಮೂರ್ತಿಗಳು ಸಹ ಇವೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಮಾರಾಟಗಾರರು ಮುಂಗಡ ನೀಡಿ ಖರೀದಿಸುತ್ತಿದ್ದರು. ಈಗ ಕರೊನಾ ಕಾರಣವೊಡ್ಡಿ ಯಾರೂ ಮುಂದೆ ಬಂದಿಲ್ಲ. ವರಲಕ್ಷ್ಮೀ ಹಬ್ಬದ ನಂತರ ಮುಂದೇನು ಎನ್ನುವ ನಿರ್ಧಾರ ಮಾಡುತ್ತೇವೆ. ಈಗಾಗಲೇ ಕುಂಬಾರ ಕಸುಬು ಸಂಕಷ್ಟದಲ್ಲಿದೆ. ಕರೊನಾ ಲಾಕ್ಡೌನ್ನಿಂದಾಗಿ, ಮಡಿಕೆ, ಕುಂಡಗಳು, ಸೇರಿದಂತೆ ಮಣ್ಣಿನ ಉತ್ಪನ್ನಗಳು ಸಹ ಮಾರಾಟವಾಗಿಲ್ಲ. ಸರ್ಕಾರ ಸಾರ್ವಜನಿಕ ಉತ್ಸವಕ್ಕೆ ಅನುಮತಿ ನೀಡದಿದ್ದರೂ ಕನಿಷ್ಟ ಮನೆಗಳಲ್ಲಿ ಗಣೇಶ ಮೂರ್ತಿ ಕೂಡಿಸಲು ಅನುಮತಿ ನೀಡಿ, ಮೂರ್ತಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯ ಕುಂಬಾರ ಸಂಘದಿಂದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದ್ದು, ಈವೆರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರಾದ ಕಂಟನಕುಂಟೆಯ ಶಿವಾನಂದ್.

 ಮನೆಗಳಲ್ಲಾದರೂ ಗಣಪತಿ ಮೂರ್ತಿ
ಇಡಲು ಅವಕಾಶ
ನೀಡಿ

ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇತರೆ ಸಮುದಾಯಗಳಿಗೆ ಬಿಡುಗಡೆ ಆದಂತೆ ಕುಂಬಾರ ಸಮುದಾಯಕ್ಕೆ ನೆರವು ಬಂದಿಲ್ಲ.ಗಣಪತಿ ಮೂರ್ತಿಗಳನ್ನು ಇಡಲು ಅವಕಾಶ ನೀಡದಿದ್ದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.ಹೀಗಾಗಿ ಕನಿಷ್ಠ ಮನೆಗಳಲ್ಲಾದರೂ ಇಡಲು ಅವಕಾಶ ನೀಡಬೇಕು ವೆಂಕಟಾಚಲಯ್ಯ, ಕುಂಬಾರರ
ಸಂಘದ ಬೆಂಗಳೂರು
ಗ್ರಾಮಾಂತರ ಜಿಧ್ಯಕ್ಷ.

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ..!: 20 ಪ್ರಯಾಣಿಕರ ದುರ್ಮರಣ| Video

ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ..!: 20 ಪ್ರಯಾಣಿಕರ ದುರ್ಮರಣ| Video

ಹೈದರಾಬಾದ್‌ನಿಂದ (Hyderabad) ಬೆಂಗಳೂರಿಗೆ (Bangalore) ಬರುತ್ತಿದ್ದ ಖಾಸಗಿ ಬಸ್ಸೊಂದು ಆಂಧ್ರಪ್ರದೇಶದ (Andhra Pradesh) ಕರ್ನೂಲು (Kurnool) ಜಿಲ್ಲೆಯ ಚಿನ್ನ ಟೆಕೂರು ಬಳಿ ನಡೆದ ಭೀಕರ ಅಗ್ನಿ (fire) ದುರಂತದಲ್ಲಿ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದಾರೆ.

[ccc_my_favorite_select_button post_id="115273"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!