ಹನೂರು, (ಆಗಸ್ಟ್ 11): ನಗರದ ಪೋಲಿಸ್ ಕ್ವಾಟರ್ಸ್ ಸಮೀಪ ಚಲಿಸುತ್ತಿದ್ದಂತಹ ದ್ವಿಚಕ್ರ ವಾಹನದ ಟೈರ್ ಸ್ಪೋಟಿಸಿದ ಪರಿಣಾಮ ಸವಾರನೋರ್ವ ಸ್ಥಳದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಮೃತ ದುರ್ದೈವಿಯನ್ನು ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ 53 ವರ್ಷದ ರಾಮಸ್ವಾಮಿ ಎಂದು ಗುರುತಿಸಲಾಗಿದೆ.
ಈತ ಕಾರ್ಯ ನಿಮಿತ್ತ ಯಳಂದೂರಿ ನಿಂದ ಹನೂರಿನತ್ತ ಆಗಮಿಸುತ್ತಿದ್ದಂತಹ ಸಂದರ್ಭದಲ್ಲಿ ಹನೂರು ಪಟ್ಟಣದ ಪೋಲಿಸ್ ಕ್ವಾಟರ್ಸ್ ಬಳಿ ಆಚಾನ್ ಕ್ಕಾಗಿ ತನ್ನ ದ್ವಿಚಕ್ರ ವಾಹನದ ಟೈರ್ಬ್ಲಾಸ್ಟ್ ಆಗಿ ಸಮೀಪದ ಹಳ್ಳದತ್ತ ಪಲ್ಟಿಯಾಗಿದೆ.
ಇದರ ಪರಿಣಾಮ ರಾಮಸ್ವಾಮಿ ತಲೆಗೆ ತೀವ್ರ ಪೆಟ್ಟಾಗಿ ಅಸುನೀಗಿದ್ದಾನೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಹನೂರು ಪೋಲಿಸರು ಕೂಡ ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….