ಬೆಂಗಳೂರು, (ಆಗಸ್ಟ್. 11): ನಗರದ ನಿಮಾನ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿರುವ 157ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ ಆರಂಭವಾಗಿದೆ.
ಸ್ಪರ್ಧೆಯ ಉದ್ಘಾಟನೆಯನ್ನು ಅಬಾಕಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಆನಂದ್ ಸುಬ್ರಮಣಿಯಂ ಅವರು ಉದ್ಘಾಟಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥೆ ವಿ.ಎ.ಪುಷ್ಪ ನೇತೃತ್ವದಲ್ಲಿ ನಗರದ ಪ್ರತಿಷ್ಠಿತ ಎಂಎಸ್ವಿ ಪಬ್ಲಿಕ್ ಸ್ಕೂಲ್, ಶ್ರೀ ದೇವರಾಜ ಅರಸ್ ಅಂತರಾಷ್ಟ್ರೀಯ ವಸತಿ ಶಾಲೆ, ಅಕ್ಷರ ಪಬ್ಲಿಕ್ ಸ್ಕೂಲ್ ಸೇರಿದಂತೆ ವಿವಿಧ ಶಾಲೆಗಳ 103 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಶಸ್ತಿಗಾಗಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕಿನ ಇತರೆ ಕೇಂದ್ರಗಳ ಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಸ್ಪರ್ಧೆಯಲ್ಲಿ ಬೆಳಗಾವಿ, ತಿಪಟೂರು, ನಾಗರಬಾವಿ, ತುಮಕೂರು, ಬಟ್ವಾಡಿ, ಗೋಣಿಕೊಪ್ಪಲು, ತಿಲಕವಾಡಿ, ದೊಡ್ಡಬೆಳವಂಗಲ, ಮೈಸೂರು ಸಿದ್ಧಾರ್ಥ ಲೇಔಟ್, ಸದಾಶಿವ ನಗರ, ಮೈಸೂರು, ವಿಜಯನಗರ, ಮಂಗಳೂರು, ಮುದ್ಗಲ್, ಸಿಂಧನೂರು, ಲಿಂಗಸುಗೂರು, ಕಲಬುರಗಿ, ಗೌರಿಬಿದನೂರು, ಗುಬ್ಬಿ, ಮಡಿಕೇರಿ, ಬಾಗಲಕೋಟೆ, ರಾಯಚೂರು, ಮೈಸೂರು ಕುವೆಂಪು ನಗರ ಕೇಂದ್ರಗಳ ಸಾವಿರಾರು ಮಕ್ಕಳು ಭಾಗವಹಿಸಿದ್ದಾರೆ.
ಈ ವೇಳೆ ತಾಂತ್ರಿಕ ನಿರ್ದೇಶಕ ಆರುಳ್ ಸುಬ್ರಮಣಿಯಂ, ಹಾಗೂ ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ ನೀಲ್ ಕಮಲ್ ಇದ್ದಾರೆ.
ಫಲಿತಾಂಶ ಇಂದು ಸಂಜೆ ಪ್ರಕಟವಾಗಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….