ಹೊಸದಿಲ್ಲಿ, (ಡಿ.16); ಸಂಸತ್ತಿನ ಮೇಲೆ ನಡೆದ ಕಲರ್ ಸ್ಕೋಕ್ ದಾಳಿಗೆ ಮುಖ್ಯವಾದ ಕಾರಣ ನಿರುದ್ಯೋಗ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, “ಇದು ಏಕೆ ಸಂಭವಿಸಿತು? ದೇಶದ ಪ್ರಮುಖ ಸಮಸ್ಯೆ ಎಂದರೆ ನಿರುದ್ಯೋಗ ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಮತ್ತು ಇದಕ್ಕೆ ಕಾರಣವೇನು? ಘಟನೆಗೆ ನಿಜವಾದ ಕಾರಣ ನಿರುದ್ಯೋಗ ಮತ್ತು ಹಣದುಬ್ಬರ” ಎಂದು ಹೇಳಿದ್ದಾರೆ.
ನಿರುದ್ಯೋಗ, ಹಣದುಬ್ಬರ, ಮೋದಿ ಸರ್ಕಾರದ ನೀತಿಯಿಂದ ಬೇಸತ್ತು ಆರೋಪಿಗಳು ಸಂಸತ್ತಿನ ಮೇಲೆ ದಾಳಿ ಮಾಡಿದರು. ಸರ್ಕಾರದ ನೀತಿಯಿಂದಾಗಿ ಈ ಘಟನೆ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವ ವೇಳೆ, ಇಬ್ಬರು ಯುವಕರು ಸಂಸತ್ ಒಳಗೆ ಪ್ರವೇಶಿಸಿ ಕಲ ಸೋಕ್ ಸಿಡಿಸಿದ್ದರು. ಇನ್ನಿಬ್ಬರು ಸಂಸತ್ತಿನ ಆವರಣದಲ್ಲಿ ಕಲರ್ ಸೋಕ್ ಸಿಡಿಸಿ ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಸಂಸತ್ತಿನ ಮೇಲಿನ ದಾಳಿಯ ನಂತರ ಎಂಟು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….