ಹರಿತಲೇಖನಿ ದಿನಕ್ಕೊಂದು ಕಥೆ; ಬುರುಡೆ ಕಥೆ

ಒಂದು ಹಳ್ಳಿಯಲ್ಲಿ ಮಲ್ಲಯ್ಯ ಎಂಬ ವಯಸ್ಸಾದ ವ್ಯಕ್ತಿಯಿದ್ದ. ಮಲ್ಲಯ್ಯನಿಗೆ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಇದ್ದರು. ಹೆಂಡತಿ ತೀರಿ ಹೋಗಿದ್ದಳು. ಮಲ್ಲಯ್ಯ ಮಕ್ಕಳು ತಂದುಹಾಕಿದ್ದನ್ನು ತಿಂದುಂಡು ಹಾಯಾಗಿ ಕಾಲ ಕಳೆಯುತ್ತಿದ್ದ.

ದಿನವೂ ಕಟ್ಟೆಯ ಮೇಲೆ ಕುಳಿತುಕೊಂಡು ಅವರಿವರ ಬಗ್ಗೆ ಮಾತನಾಡುವುದು, ಹರಟೆ ಹೊಡೆಯುವುದು ಮಲ್ಲಯ್ಯನ ಹವ್ಯಾಸವಾಗಿತ್ತು. ಸ್ನೇಹಿತರ ಮಧ್ಯೆ, ಅತ್ತೆ– ಸೊಸೆಯಂದಿರ ಮಧ್ಯೆ, ಅಣ್ಣ– ತಮ್ಮಂದಿರ ಮಧ್ಯೆ, ಅಕ್ಕಪಕ್ಕದವರ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡುವುದು ಮಲ್ಲಯ್ಯನ ಕೆಟ್ಟ ಚಾಳಿಯಾಗಿತ್ತು.

ಒಮ್ಮೆ ಊರಿನವರೆಲ್ಲಾ ಸೇರಿ ಮಲ್ಲಯ್ಯನ ಮಕ್ಕಳ ಬಳಿ ಹೋಗಿ ಅವನ ಬಗ್ಗೆ ದೂರು ಹೇಳಿದರು. ಮಕ್ಕಳು ಬೇಸರದಿಂದ ‘ಅಯ್ಯೋ ಅವನೊಬ್ಬ ಹುಚ್ಚ, ಅವನ ಮಾತಿಗೆಲ್ಲ ತಲೆಕೆಡಿಸಕೊಳ್ಳಬೇಡಿ. ತಂದೆ ಎಂಬ ಗೌರವದಿಂದ ಅವನಿಗೆ ಮೂರು ಹೊತ್ತು ಊಟ ಹಾಕುತ್ತಿದ್ದೇವೆ. ದಯವಿಟ್ಟು ನೀವು ಯಾರೂ ಬೇಜಾರು ಮಾಡಿಕೊಳ್ಳಬೇಡಿ’ ಎಂದು ಸಮಾಧಾನ ಹೇಳಿ ಕಳುಹಿಸಿದರು.

ಊರಿನವರ ಕೃತ್ಯದಿಂದ ಸಿಟ್ಟಿಗೆದ್ದ ಮಲ್ಲಯ್ಯನು, ‘ನನ್ನ ಬಗ್ಗೆ ನನ್ನ ಮಕ್ಕಳ ಬಳಿ ಚಾಡಿ ಹೇಳುತ್ತೀರಾ, ನಾನು ಸಾಯುವುದರೊಳಗೆ ಈ ಹಳ್ಳಿಯ ನೂರು ಮನೆಗಳನ್ನಾದರೂ ಹಾಳು ಮಾಡುತ್ತೇನೆ’ ಎಂದು ಶಪಥ ಮಾಡುತ್ತಾನೆ.

ಅಂತೆಯೆ ಅವರಿವರ ಮಧ್ಯೆ ತಂದಿಡುವುದು. ಯಾವುದಾದರು ಒಳ್ಳೆ ಕೆಲಸ ನಡೆಯುತ್ತಿದ್ದರೆ ಅದನ್ನು ಹಾಳು ಮಾಡುವುದು. ಇದೇ ರೀತಿ ತೊಂಬತ್ತೊಂಬತ್ತು ಮನೆಗಳನ್ನು ಹಾಳು ಮಾಡುತ್ತಾನೆ. ಅಷ್ಟರಲ್ಲಿ ಅವನ ಪಾಪದ ಕೊಡ ತುಂಬಿ ಅನಾರೋಗ್ಯದಿಂದ ಮಲ್ಲಯ್ಯ ಸತ್ತು ಹೋಗುತ್ತಾನೆ. ಊರಿನ ಜನರೆಲ್ಲಾ, ‘ಅಬ್ಬಾ, ಸದ್ಯ ಇನ್ನಾದರೂ ಊರಿನವರೆಲ್ಲ ನಿಶ್ಚಿಂತೆಯಿಂದ ಇರಬಹುದು’ ಎಂದು ನೆಮ್ಮದಿಯಿಂದ ಉಸಿರಾಡ ತೊಡಗಿದರು.

ಇತ್ತ ಮಲ್ಲಯ್ಯನ ಮಕ್ಕಳು ಶಾಸ್ತ್ರಬದ್ಧವಾಗಿ ಮಲ್ಲಯ್ಯನ ಅಂತ್ಯ ಸಂಸ್ಕಾರವನ್ನೆಲ್ಲ ಮುಗಿಸಿದರು. ಆದರೆ ಮಲ್ಲಯ್ಯನ ಆತ್ಮಕ್ಕೆ ನೆಮ್ಮದಿ ಸಿಗಲಿಲ್ಲ. ‘ನೂರು ಮನೆಗಳನ್ನು ಹಾಳು ಮಾಡುವುದಾಗಿ ನಾನು ಊರವರ ಮುಂದೆ ಶಪಥ ಮಾಡಿದ್ದೆ. ಇನ್ನೊಂದು ಮನೆ ಬಾಕಿ ಉಳಿದು ಬಿಟ್ಟಿತಲ್ಲ’ ಎಂದು ಮಲ್ಲಯ್ಯನ ಆತ್ಮ ಕೊರಗುತ್ತಿತ್ತು.

ಹೀಗೆಯೇ ಒಂದು ವರ್ಷ ಕಳೆದು ಹೋಯಿತು. ಮಲ್ಲಯ್ಯನ ಆತ್ಮಕ್ಕೆ ನೆಮ್ಮದಿಯೇ ಇರಲಿಲ್ಲ. ಮಲ್ಲಯ್ಯನನ್ನು ಅವನ ಹೊಲದಲ್ಲಿಯೇ ಮಣ್ಣು ಮಾಡಲಾಗಿತ್ತು. ಒಂದು ದಿನ ಸುರಿದ ಭಾರೀ ಮಳೆಯಿಂದಾಗಿ ಅವನನ್ನು ಮಣ್ಣು ಮಾಡಿದ್ದ ಜಾಗ ಸವೆದು, ಮಲ್ಲಯ್ಯನ ತಲೆ ಬುರುಡೆ ಹೊರಗೆ ಕಾಣಿಸಿಕೊಂಡಿತು.

ಮಲ್ಲಯ್ಯನ ಆತ್ಮವು ‘ಹಾ… ಈಗ ನನ್ನ ಆಸೆ ನೆರವೇರುವ ಕಾಲ ಬಂತು’ ಎಂದು ಸಂತಸಪಟ್ಟಿತು. ಊರಿನವರು ಯಾರಾದರು ತನ್ನ ಬರುಡೆಯ ಕಡೆ ಬರುವುದನ್ನೇ ಕಾಯುತ್ತಿತ್ತು.

ಮಳೆಯಿಂದಾಗಿ ಭೂಮಿಯು ಹದವಾಗಿತ್ತು. ರೈತರೆಲ್ಲಾ ಹೆಗಲ ಮೇಲೆ ನೇಗಿಲುಗಳನ್ನು ಇಟ್ಟುಕೊಂಡು ಉಳಲು ತಮ್ಮ ಹೊಲಗಳತ್ತ ಹೊರಟರು. ಅದೇ ಹಳ್ಳಿಯಲ್ಲಿ ವಾಸವಾಗಿದ್ದ ರಂಗಣ್ಣನೂ ತನ್ನ ಹೊಲದತ್ತ ಹೊರಟಿದ್ದ. ದಾರಿಯ ಮಧ್ಯೆ ಅವನಿಗೆ ಮಲ್ಲಯ್ಯನ ಬುರುಡೆ ಕಾಣಿಸಿತು. ಮಲ್ಲಯ್ಯನ ಬುರುಡೆಯು, ‘ನನಗೆ ನೂರನೇ ಮಿಕ ಸಿಕ್ಕಿತು’ ಎಂದು ಖುಷಿಪಟ್ಟಿತು. ರಂಗಣ್ಣನನ್ನು ನೋಡಿದ ಕೂಡಲೇ ಮಲ್ಲಯ್ಯನ ಬುರುಡೆಯು, ‘ಏನಪ್ಪ, ಎಲ್ಲಿಗೆ ಹೊರಟೆ’ ಎಂದು ಕೇಳಿತು.

ರಂಗಣ್ಣನಿಗೆ ಆಶ್ಚರ್ಯದ ಜೊತೆಗೆ ಭಯವೂ ಆಗಿ, ‘ಅಯ್ಯೊ ಬುರುಡೆ ಮಾತನಾಡುತ್ತಿದೆ’ ಎಂದು ಜೋರಾಗಿ ಕೂಗಲು ಪ್ರಾರಂಭಿಸಿದ. ಬುರುಡೆಯು, ‘ಹೆದರಬೇಡ ನಾನು ಒಬ್ಬ ಹಿರಿಯ. ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತೇನೆ. ನನ್ನ ಒಳ್ಳೆಯ ಗುಣಗಳನ್ನು ನೋಡಿ ದೇವರು, ಸತ್ತ ಮೇಲೂ ಮಾತನಾಡುವ ಶಕ್ತಿಯನ್ನು ನನಗೆ ಕೊಟ್ಟಿದ್ದಾನೆ. ನನ್ನ ಮಾತು ಒಳ್ಳೆಯವರಿಗೆ ಮಾತ್ರ ಕೇಳಿಸುವುದು. ನಿನಗೆ ಕೇಳಿಸುತ್ತಿದೆ ಎಂದರೆ ನೀನು ಒಳ್ಳೆಯವನೇ ಇರಬೇಕು’ ಎಂದಿತು. ರಂಗಣ್ಣನಿಗೆ ಸಮಾಧಾನವಾಯಿತು.

ಆನಂತರ ‘ಹಾ… ಈಗ ಹೇಳು ಎಲ್ಲಿಗೆ ಹೊರಟಿರುವೆ’ ಎಂದಿತು ಬುರುಡೆ. ರಂಗಣ್ಣನು ‘ರಾತ್ರಿ ಚೆನ್ನಾಗಿ ಮಳೆ ಆಗಿದೆಯಲ್ಲ ಅದಕ್ಕೆ ಹೊಲ ಉಳಲು ಹೋಗುತ್ತಿದ್ದೇನೆ’ ಎಂದ. ಅದಕ್ಕೆ ಮಲ್ಲಯ್ಯನ ಬುರುಡೆ, ‘ಅಯ್ಯೋ ಮೂಢ, ಈ ಮಳೆಗೆಲ್ಲ ಉಳಲು ಹೋಗುತ್ತಿದ್ದೀಯಲ್ಲ. ಇದು ಒಂದು ದಿನದ ಮಳೆ ಅಷ್ಟೇ. ಮತ್ತೆ ಮಳೆ ಬರುವುದಿಲ್ಲ ಸುಮ್ಮನೆ ಶ್ರಮಪಡಬೇಡ ಮನೆಗೆ ಹೋಗು ಎಂದಿತು.

‘ಮತ್ತೆ, ಅವರೆಲ್ಲ ಉಳುತ್ತಿದ್ದಾರಲ್ಲ’ ಎಂದು ರಂಗಣ್ಣ ಪ್ರಶ್ನಿಸಿದ. ಅದಕ್ಕೆ ‘ಅವರೆಲ್ಲ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನೀನು ಮಾತ್ರ ನನ್ನ ಮಾತು ಕೇಳು’ ಎಂದಿತು ಬುರುಡೆ. ಹಿರಿಯರು ಹೇಳಿದ್ದನ್ನು ಪಾಲಿಸುವುದೇ ಸರಿ ಎಂದು ರಂಗಣ್ಣ ಭೂಮಿಯನ್ನು ಉಳುಮೆ ಮಾಡದೆ ಮನೆಗೆ ಹಿಂದಿರುಗಿದ.

ಒಂದು ವಾರದ ನಂತರ ಮತ್ತೆ ಮಳೆಯಾಯಿತು. ಹೊಲಗಳನ್ನು ಉತ್ತಿದ್ದ ರೈತರೆಲ್ಲ ರಾಗಿಯನ್ನು ಬಿತ್ತಲು ಹೊರಟರು. ರಂಗಣ್ಣನಿಗೆ ಕಳವಳ ಶುರುವಾಯಿತು. ನಾನು ಅಂದೇ ಹೊಲವನ್ನು ಉಳಬೇಕಿತ್ತು. ಈ ಬಾರಿಯಾದರೂ ಉಳೋಣವೆಂದು ಮತ್ತೆ ನೇಗಿಲು ಹಿಡಿದು ಹೊರಟ. ದಾರಿಯಲ್ಲಿ ಮಲ್ಲಯ್ಯನ ಬುರುಡೆ ಎದುರಾಯಿತು.

‘ಇದೇನಿದು ನೇಗಿಲು ಹಿಡಿದು ಹೊರಟೆ’ ಎಂದಿತು. ರಂಗಣ್ಣ, ‘ನಿನ್ನ ಮಾತು ಕೇಳಿ ಆವತ್ತು ಹೊಲ ಉಳದೆ ಮನೆಗೆ ಹೋದೆ. ಎಲ್ಲರೂ ಇವತ್ತು ರಾಗಿ ಬಿತ್ತಲು ಹೋಗುತ್ತಿದ್ದಾರೆ ನಾನು ಮಾತ್ರ ಇನ್ನು ಉತ್ತೇ ಇಲ್ಲ’ ಎಂದ. ಅದಕ್ಕೆ ಬುರುಡೆ, ‘ಅಯ್ಯೊ! ಹುಚ್ಚಪ್ಪ ಅವರು ಬಿತ್ತಲಿ. ಬೀಜವು ಮೊಳಕೆಯೊಡೆದು ಪೈರು ಬರಲು ಮಳೆ ಬೇಕಲ್ಲವೇ? ಬೇಕೆಂದರೆ ನೀನೇ ನೋಡು ಅವರೆಲ್ಲ ಮಳೆ ಬರದೆ ಅಯ್ಯೊ ಯಾಕಾದರೂ ಬಿತ್ತನೆ ಮಾಡಿದೆವೋ, ಮಳೆ ಇಲ್ಲದೆ ಎಲ್ಲ ಹಾಳಾಯಿತು ಎಂದುಕೊಂಡು ಗೋಳಾಡುತ್ತಾರೆ. ಆಗ ನೀನು ಅಬ್ಬ, ನಾನು ಬಚಾವಾದೆ ಎಂದುಕೊಳ್ಳುತ್ತೀಯಾ’ ಎಂದಿತು. ಬುರುಡೆಯ ಮಾತು ಕೇಳಿ ಈ ಬಾರಿಯೂ ರಂಗಣ್ಣ ಮನೆಗೆ ಹೋದ. ಮಿಕ್ಕವರೆಲ್ಲ ಬಿತ್ತನೆ ಮಾಡಿ ಬಂದರು.

ಹದಿನೈದು ದಿನಗಳ ನಂತರ ಮತ್ತೆ ಮಳೆಯಾಯಿತು. ಕೆಲ ದಿನಗಳ ನಂತರ ಎಲ್ಲರ ಹೊಲಗಳಲ್ಲೂ ರಾಗಿಯ ತೆನೆಗಳು ಹಸಿಹಸುರಾಗಿ ತೂಗಾಡಿದವು. ತೆನೆ ಬಲಿತು ಕೊಯಿಲಿಗೂ ಬಂತು. ಎಲ್ಲರೂ ಸಂತಸದಿಂದ ಬೆಳೆಯನ್ನು ಕಟಾವು ಮಾಡಲು ಕುಡುಗೋಲುಗಳನ್ನು ಹಿಡಿದು ಹೊರಟರು.

ಪಾಪ! ರಂಗಣ್ಣ ಮಾತ್ರ, ‘ಅಯ್ಯೊ ಬುರುಡೆ ಮಾತು ನಂಬಿ ಕೆಟ್ಟೆನಲ್ಲಪ್ಪ’ ಎಂದು ತಲೆಯ ಮೇಲೆ ಕೈಇಟ್ಟು ಕುಳಿತ. ಮಲ್ಲಯ್ಯನ ಬುರುಡೆ ಉದ್ದೇಶ ನೂರು ಜನರನ್ನು ಹಾಳು ಮಾಡುವುದು. ಆ ನೂರನೆಯವನಾಗಿ ಈ ರಂಗಣ್ಣ ಬಲಿಯಾದ. ನೂರು ಮನೆಗಳನ್ನು ಹಾಳು ಮಾಡಿದ ತೃಪ್ತಿ ಮಲ್ಲಯ್ಯನ ಆತ್ಮಕ್ಕೆ ಲಭಿಸಿತು.

ಅವರಿವರ ಮಾತುಗಳನ್ನು ಹೇಳಿ ಕೆಡಬಾರದು, ತಮ್ಮ ಸ್ವಂತ ಬುದ್ಧಿಯನ್ನು ಬಳಸಿ ಜೀವನ ನಡೆಸಬೇಕೆಂಬ ಸತ್ಯವು ಈ ಘಟನೆಯಿಂದಾಗಿ ರಂಗಣ್ಣನಿಗೆ ಅರ್ಥವಾಯಿತು.

ಕೃಪೆ: ಕಿಶೋರ್.ಎಂ.ಎನ್

ರಾಜಕೀಯ

ಆದಿಚುಂಚನಗಿರಿಯಲ್ಲಿ ವಿಜ್ಜಾನಿ ಡಾ. ಸೂರಪ್ಪ ಅವರಿಗೆ ‘ವಿಜ್ಞಾತಂ 2026’ ಪ್ರಶಸ್ತಿ ಪ್ರಧಾನ

ಆದಿಚುಂಚನಗಿರಿಯಲ್ಲಿ ವಿಜ್ಜಾನಿ ಡಾ. ಸೂರಪ್ಪ ಅವರಿಗೆ ‘ವಿಜ್ಞಾತಂ 2026’ ಪ್ರಶಸ್ತಿ ಪ್ರಧಾನ

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಪರಸ್ಪರ ಟೀಕೆ, ದೋಷಾರೋಪ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ನಾವೆಲ್ಲರೂ ಸೇರಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯೋಣ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="119645"]
20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ

[ccc_my_favorite_select_button post_id="119504"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರ ಮೇಲೆ ಗುಂಡು ಹಾರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="119595"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಖಾಸಗಿ ಕಾರ್ಖಾನೆಯ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ (Accident), ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಇಂದು ಸಂಜೆ

[ccc_my_favorite_select_button post_id="119492"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!