113 ಕೋಟಿ ರೂ. ಒಡೆಯ ನಿಖಿಲ್ ಕುಮಾರಸ್ವಾಮಿ: ಸಾಲ ಎಷ್ಟು ಗೊತ್ತಾ..?

ಚನ್ನಪಟ್ಟಣ: ತೀವ್ರ ಕುತೂಹಲ ಕೆರಳಿಸಿರುವ ಹೈವೊಲೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಚನ್ನ ಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರ ಸಲ್ಲಿಸಿದರು.

ನಗರದ ತಾಲೂಕು ಕಚೇರಿಗೆ ಅಪಾರಬೆಂಬಲಿಗರೊಂದಿಗೆ ಶುಕ್ರವಾರ ಮಧ್ಯಾಹ್ನ1.30ಕ್ಕೆ ಆಗಮಿಸಿದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮೂರು ಪ್ರತ್ಯೇಕ ಪ್ರತಿಗಳೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂಸದಾನಂದಗೌಡ, ಸಂಸದ ಬಿ.ವೈ. ರಾಘವೇಂದ್ರ, ಪತ್ನಿ ರೇವತಿ ಅವರೊಂದಿಗೆ ಒಂದು ಪ್ರತಿ ನಾಮಪತ್ರ, ಸಂಸದ ಡಾ.ಮಂಜುನಾಥ್, ರಾಜ್ಯ ಸಭೆ ಸದಸ್ಯ ಲೆಹರ್ ಸಿಂಗ್‌, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್, ಮುಖಂಡ ಪ್ರಸನ್ನ ಪಿ.ಗೌಡ, ಅವರೊಂದಿಗೆ ಎರಡನೇ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರು ದೊಡ್ಡಜಯರಾಮು, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಹಾಪ್‌ಕಾಮ್ಸ್‌ ದೇವರಾಜು ಅವರೊಂದಿಗೆ ಮೂರನೇ ಪ್ರತಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಚನ್ನಪಟ್ಟಣಕ್ಕೆ ಆಗಮಿಸುವ ಈ ಮುನ್ನ ಬೆಂಗಳೂರಿನ ಜೆ.ಪಿ.ನಗರದ ಶ್ರೀ ತಿರುಮಲಗಿರಿ ವೆಂಕಟರಮಣ ದೇವಸ್ಥಾನದಲ್ಲಿ ಪತ್ನಿ ಯೊಂದಿಗೆ ಪೂಜೆ ಸಲ್ಲಿಸಿದ ನಿಖಿಲ್, ತಾತಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ನಂತರ ಚನ್ನಪಟ್ಟಣಕ್ಕೆ ಆಗಮಿಸಿದ ಅವರು, ತಂದೆ ಕುಮಾರಸ್ವಾಮಿ ಹಾಗೂ ಪತ್ನಿಯೊಂದಿಗೆ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಶಕ್ತಿ ಪ್ರದರ್ಶನ: ನಿಖಿಲ್ ನಾಮಪತ್ರ ಸಲ್ಲಿಕೆಗೆ ಮುನ್ನ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಕೆಂಗಲ್ ಆಂಜನೇಯಸ್ವಾಮಿ ದೇವ ಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಶೇರ್ವಾ ಹೋಟೆಲ್ ಬಳಿಯಿಂದ ಅದ್ದೂರಿ ಮೆರವಣಿಗೆ ನಡೆಸುವ ಮೂಲಕ ಎನ್‌ಡಿಎ ಶಕ್ತಿ ಪ್ರದರ್ಶನ ನಡೆಸಿತು.

113.4 ಕೋಟಿ ರೂ ಒಡೆಯ; ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರ ಸ್ವಾಮಿ ಕುಟುಂಬ 113.4 ಕೋಟಿ ರೂ. ಮೌಲ್ಯದ ಚರಾಸ್ತಿ – ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ.

2019ರ ಲೋಕಸಭಾ ಚುನಾ ವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ (ನಿಖಿಲ್ ಮದು ವೆಗು ಮುನ್ನ) 75 ಕೋಟಿ ಹಾಗೂ 2023ರ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಯಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿ ಡೆವಿಟ್‌ನಲ್ಲಿ 104.96 ಕೋಟಿ ಆಸ್ತಿ ಹೊಂದಿದ್ದ ನಿಖಿಲ್ ಕುಟುಂಬ, 2024ರ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ 113.4 ಕೋಟಿ ಆಸ್ತಿ ಘೋಷಿಸಿದೆ. ಕೇವಲ ಒಂದೂವರೆ ವರ್ಷದಲ್ಲಿ 8.44 ಕೋಟಿ ರೂ. ಆಸ್ತಿ ವೃದ್ಧಿಯಾಗಿದೆ.

ನಿಖಿಲ್ ಅವರ ಚರಾಸ್ತಿ ಮೌಲ್ಯ 29.34 ಕೋಟಿ ರೂ. ಸ್ಥಿರಾಸ್ತಿ ಮೌಲ್ಯ 78.14 ಕೋಟಿ
ರೂ. ಸೇರಿ ಒಟ್ಟು 107.48 ಕೋಟಿ ರೂ. ಹಾಗೂ ಪತ್ನಿ ರೇವತಿ ಬಳಿ 43.43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು 5.49 ಕೋಟಿ ರೂ. ಮೌಲ್ಯದ ಚರಾಸ್ತಿ ಸೇರಿ ಒಟ್ಟು 5.92 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಿಖಿಲ್ ಮತ್ತು ರೇವತಿ ಕುಟುಂಬದ ಒಟ್ಟು ಚರಾಸ್ತಿ – ಸ್ಥಿರಾಸ್ತಿ ಮೌಲ್ಯ 113.4 ಕೋಟಿ ರೂ.ಗಳಾಗಿದೆ.

2021-2200 ವಾರ್ಷಿ ಕ 4.27 ಕೋಟಿ ರು. ಆದಾಯ ಘೋಷಿಸಿದ್ದರೆ, 2022-23ನೇ ಸಾಲಿನಲ್ಲಿ 2.38 ಕೋಟಿ ರೂ., ಈಗ ಸಲ್ಲಿಸಿರುವ ಆಸ್ತಿ ವಿವರಣೆಯಲ್ಲಿ 2023-24 ನೇ ಸಾಲಿನಲ್ಲಿ 1.69 ಕೋಟಿ ರೂ. ಗಳಿವೆ ಎಂದು ಹೇಳಿಕೊಂಡಿದ್ದಾರೆ.

ನಿಖಿಲ್ ಅವರ ಬಳಿ ಸದ್ಯ ನಗದು 27,760 ರೂ. ಇದ್ದರೆ, ಪತ್ನಿ ಬಳಿ 3.53 ಲಕ್ಷ ರೂ.ಇದೆ. ನಿಖಿಲ್ ಮಾಲೀಕತ್ವದ ಚನ್ನಾಂ ಬಿಕ ಫಿಲಂಸ್ 4.38 ಲಕ್ಷ ರೂ.ಇದೆ. ವಿವಿಧ ಬ್ಯಾಂಕು ಗಳಲ್ಲಿ ವೈಯಕ್ತಿಕ 24.23 ಕೋಟಿ ರೂ. ಇದೆ. ಎನ್‌.ಕೆ. ಎಂಟರ್ಟೈನ್ವೆಂಟ್ಸ್ ಹೆಸರಿನ ಖಾತೆಯಲ್ಲಿ 20.48 ಲಕ್ಷ ರೂ. ಇದೆ.

ಚನ್ನಾಂಬಿಕ ಫಿಲಿಮ್ಸ್‌ ಹೆಸರಿನ ಖಾತೆಗಳಲ್ಲಿ 5, ಮೌಲ್ಯ 92 ಲಕ್ಷ ರೂ.ಇದೆ. ಕಸ್ತೂರಿ ಮೀಡಿಯಾ ಪ್ರೈ.ಲಿನಲ್ಲಿ ಹೂಡಿಕೆ 76 ಲಕ್ಷ ರೂ. ಹಾರಿ ಜಾನ್‌ ರಿಯಾಲಿಟಿ ಸಂಸ್ಥೆಯಲ್ಲಿ 60 ಲಕ್ಷ ರೂ., ನಾರ್ಥ ಆರ್ಕ್ ಸಂಸ್ಥೆಯಲ್ಲಿ 30 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ನಿಖಿಲ್ ಬಳಿ 39.84 ಲಕ್ಷ ರೂ. ಮೌಲ್ಯದ ಇನ್ನೋವಾ ಹೈಕ್ರಾಸ್ ಕೃಷಿಯೇ ಕಾರಿದೆ. ಇವರ ಮಾಲೀಕತ್ವದ ಎನ್.ಕೆ.ಎಂಟ ರ್ಟೈನೆಂಟ್ ಸಂಸ್ಥೆಯಿಂದ ಖರೀದಿಸಿರುವ ರೇಂಜ್ ರೋವರ್‌ ಕಾರು, ವ್ಯಾನಿಟಿ ವ್ಯಾನ್ (ಜಿಮ್), ಇನ್ನೋವ ಕ್ರಿಸ್ಟ ಕಾರು, ವ್ಯಾನಿಟಿ ವ್ಯಾನ್ (ಕ್ಯಾರವಾನ್) ವಾಹನಗಳಿವೆ. 2023ರಲ್ಲಿ ಘೋಷಿಸಿಕೊಂಡಿದ್ದ ಲ್ಯಾಂಬೊಗ್ನಿ ವೆಂಟೋರ್‌ ಕಾರು ಈ ಬಾರಿಯ ಆಸ್ತಿ ಘೋಷ ಣೆಯಲ್ಲಿ ನಮೂದಾಗಿಲ್ಲ.

ನಿಖಿಲ್ ಬಳಿ 1488.44 ಗ್ರಾಂ ಚಿನ್ನಾಭರಣದ ಸದ್ಯದ ನಲ್ಲಿ ಒದ ಮಾರುಕಟ್ಟೆ ಮೌಲ್ಯ 1.96 ಕೋಟಿ ರೂ., 16 ಕೆ.ಜಿ ಬೆಳ್ಳಿ ಆಭರಣಗಳ ಮೌಲ್ಯ 15.55 ಲಕ್ಷ ರೂ.ಗಳಾಗಿದೆ. ಪತ್ನಿ ರೇವತಿ ಬಳಿ 1411.96 ಗ್ರಾಂ ಚಿನ್ನವಿದ್ದು, ಇದರ ಮೌಲ್ಯ 1.04ಕೋಟಿ ರೂ.ಗಳಾದರೆ, 32.56 ಲಕ್ಷ ರೂ. ಮೌಲ್ಯದ ಬ್ಯಾಂಕು ಬೆಳ್ಳಿ ಆಭರಣ, 12.59 ಕ್ಯಾರೆಟ್ ವಜ್ರದ ಮೌಲ್ಯ 12.46 ಲಕ್ಷ ರೂ.ಗಳಾಗಿದೆ.

ಸ್ಥಿರಾಸ್ತಿ ವಿವರ: 2023ರಲ್ಲಿ ನಿಖಿಲ್ ಹೆಸರಿನಲ್ಲಿ ಕೃಷಿ ಭೂಮಿ ಇರಲಿಲ್ಲ. ಈ ಬಾರಿ ಬಿಡದಿ ಹೋಬಳಿಯಲ್ಲಿ 4 ಎಕರೆ ಕೃಷಿ ಭೂಮಿ ಕೊಂಡಿರುವುದಾಗಿ ತಿಳಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 1.34 ಕೋಟಿ ರೂ. ಕೃಷಿಯೇತರ ಭೂಮಿ ಇಲ್ಲ.

ಬೆಂಗಳೂರಿನ ರಿಚಮಂಡ್‌ ಟೌನ್‌ನಲ್ಲಿ 21500 ಚದರಡಿಯ ವಾಣಿಜ್ಯ ಕಟ್ಟಡವಿದೆ. 2014ರಲ್ಲಿ ಇವರು ಈ ಆಸ್ತಿಯನ್ನು 5.47 ಕೋಟಿ ರೂ.ಗಳಿಗೆ ಖರೀದಿ ಸಿದ್ದರು. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 38 ಕೋಟಿ ರೂ., ತಮ್ಮ ಬಳಿ ವಸತಿ ಕಟ್ಟಡಗಳು ಇಲ್ಲ.

ಪತ್ನಿ ರೇವತಿ ತಮಗೆ ಕೊಡುಗೆಯಾಗಿ ಬಂದಿರುವ ಬೆಂಗಳೂರು ಅತ್ತಿಗುಪ್ಪೆಯಲ್ಲಿರುವ ತಿರುಮಲ ಲಕ್ಟೋರಿಯಾ ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲಾಟ್ ಇದ್ದು, ಇದರ ಮೌಲ್ಯ 43.43 ಲಕ್ಷ ರೂ. ಎಂದು ತಿಳಿಸಿದ್ದಾರೆ.

ನಿಖಿಲ್ ತಾಯಿ ಅನಿತಾ ಅವರಿಗೆ 4.65 ಕೋಟಿ, ತಂದೆ ಕುಮಾರಸ್ವಾಮಿಗೆ 9.18 ಲಕ್ಷ ರೂ. ಸಾಲ ಬಾಕಿ ಕೊಡಬೇಕಿದೆ. ನಿಖಿಲ್ ಬ್ಯಾಂಕುಗಳು ಸೇರಿದಂತೆ ಒಟ್ಟು 70.44 ಕೋಟಿ ಸಾಲ ಕೊಡಬೇಕಾಗಿದೆ.

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.

[ccc_my_favorite_select_button post_id="115546"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women's ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

[ccc_my_favorite_select_button post_id="115495"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident), ಸುಮಾರು 11 ವರ್ಷದ ಬಾಲಕ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

[ccc_my_favorite_select_button post_id="115509"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!