ಹರಿತಲೇಖನಿ ದಿನಕ್ಕೊಂದು ಕಥೆ: ಚಾಡಿಕೋರ ನರಿ

A story: ಕಾಡಿನಲ್ಲಿದ್ದ ಮೃಗರಾಜ ಸಿಂಹಕ್ಕೆ ಆರೋಗ್ಯ ತುಂಬಾ ಹದಗೆಟ್ಟಿತ್ತು. ಅದು ಬೇಟೆಯಾಡುವುದಿರಲಿ ತನ್ನ ಗುಹೆಯಿಂದ ಹೊರಗೆ ಕೂಡ ಬರಲಾರದಷ್ಟು ನಿತ್ರಾಣಗೊಂಡಿತ್ತು.

ಹಾಗಾಗಿ ಅನಾರೋಗ್ಯ ಪೀಡಿತ ಮೃಗರಾಜ ಸಿಂಹಕ್ಕೆ ಆಹಾರ ಕೊಡುವುದರಿಂದ ಹಿಡಿದು ಅದರ ಬೇಕು-ಬೇಡಗಳನ್ನೆಲ್ಲಾ ನರಿಯೊಂದು ನೋಡಿಕೊಳ್ಳುತ್ತಿತ್ತು. ಮೃಗರಾಜನ ಅನಾರೋಗ್ಯದ ವಿಷಯ ಇಡೀ ಕಾಡಿಗೆ ಗೊತ್ತಾಗಿತ್ತು.

‘ನಮ್ಮ ರಾಜನಿಗೆ ಆರೋಗ್ಯ ಸರಿಯಿಲ್ಲವಂತೆ. ಬನ್ನಿ ಬನ್ನಿ ನಾವೆಲ್ಲಾ ನೋಡಿಕೊಂಡು ಬರೋಣ. ಏನಾಗಿದೆ ಎಂದು ವಿಚಾರಿಸೋಣ. ಸಾಧ್ಯವಾದರೆ ನಮ್ಮ ರಾಜನನ್ನು ಗುಣಪಡಿಸುವ ದಾರಿ ಹುಡುಕೋಣ’ ಎನ್ನುತ್ತಾ ಕಾಡಿನ ಇತರ ಪ್ರಾಣಿಗಳೆಲ್ಲಾ ಸಿಂಹದ ಗುಹೆಯತ್ತ ಧಾವಿಸಿ ಬರುತ್ತಿದ್ದವು. ಹೀಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಮೃಗರಾಜನನ್ನು ನೋಡಿಕೊಂಡು ಅದರ ಆರೋಗ್ಯ ವಿಚಾರಿಸಿ ಹೋಗುತ್ತಿದ್ದವು. ಕೆಲವು ಪ್ರಾಣಿಗಳು ತಮಗೆ ತಿಳಿದಮಟ್ಟಿಗೆ ಸಲಹೆ ನೀಡುತ್ತಿದ್ದವು.

ಸಿಂಹವನ್ನು ನೋಡಿಕೊಳ್ಳುತ್ತಿದ್ದ ನರಿಗೆ ಅದೇ ಕಾಡಿನಲ್ಲಿದ್ದ ಕರಡಿಯನ್ನು ಕಂಡರೆ ಆಗುತ್ತಿರಲಿಲ್ಲ. ಕರಡಿ ಬಗ್ಗೆ ಮೃಗರಾಜನಲ್ಲಿ ಚಾಡಿ ಹೇಳಲು ಒಳ್ಳೆಯ ಸಮಯಕ್ಕಾಗಿ ನರಿ ಕಾಯುತ್ತಿತ್ತು. ಅಂತಹ ಸಮಯ ಈಗ ನರಿಗೆ ತಾನೇ ತಾನಾಗಿ ಒದಗಿ ಬಂದಿತ್ತು.

ಎಲ್ಲ ಪ್ರಾಣಿಗಳೂ ಮೃಗರಾಜನನ್ನು ನೋಡಿಕೊಂಡು ಹೋಗಲು ಗುಹೆಯ ಬಳಿ ಬಂದಿದ್ದವು. ಆದರೆ ಕರಡಿ ಮಾತ್ರ ಬಂದಿರಲಿಲ್ಲ. ನರಿಗೆ ಇದಿಷ್ಟು ಸಾಕಾಗಿತ್ತು ಕರಡಿ ಮೇಲೆ ಚಾಡಿ ಹೇಳಲು. ಕೂಡಲೇ ಅದು ಮೃಗರಾಜನ ಬಳಿ ಹೋಗಿ ಅದರ ಕಿವಿಯಲ್ಲಿ ತನ್ನ ಮೂತಿಯನ್ನಿಟ್ಟು ಹೇಳಿತು, ‘ನೋಡು ಮೃಗರಾಜ, ಕರಡಿಗೆ ರಾಜಭಕ್ತಿಯಿಲ್ಲ. ನಿಮ್ಮ ಬಗ್ಗೆ ಭಯವಂತೂ ಇಲ್ಲವೇ ಇಲ್ಲ. ಮೇಲಾಗಿ ಗೌರವವನ್ನಂತೂ ಕರಡಿಯಿಂದ ಬಯಸಲೇಬೇಡಿ. ಇದೆಲ್ಲಾ ಅದಕ್ಕೆ ಇದ್ದಿದ್ದರೆ ನಿಮ್ಮನ್ನು ನೋಡಲು ಬಂದೇ ಬರುತ್ತಿತ್ತು’ ಎಂದು ಒಂದೇ ಸಮನೆ ಕರಡಿಯ ಬಗ್ಗೆ ಚಾಡಿ ಹೇಳಿತು.

ಜೊತೆಗೆ, ‘ಮೃಗರಾಜ ಸಿಂಹದ ಆರೋಗ್ಯ ಕೆಟ್ಟಿದ್ದು ಅದಕ್ಕೆ ವಯಸ್ಸೂ ಆಗಿದೆ. ಅದರ ಕೈನಲ್ಲಿ ಈಗ ಏನೂ ಆಗುವುದಿಲ್ಲ. ಆದ್ದರಿಂದ ಈ ಕಾಡಿನ ರಾಜನಾಗಿ ಎಲ್ಲರನ್ನೂ ರಕ್ಷಿಸಲು ತಾನೇ ಸೂಕ್ತ ಎಂದು ಕರಡಿಯು ಕಾಡಿನಲ್ಲೆಲ್ಲಾ ಹೇಳಿಕೊಂಡು ತಿರುಗುತ್ತಿದೆ…’ ಎಂದು ಸಿಂಹಕ್ಕೆ ಕೋಪ ಬರುವ ರೀತಿಯಲ್ಲಿ ಇಲ್ಲ ಸಲ್ಲದ್ದನ್ನೆಲ್ಲಾ ಹೇಳಿತು ನರಿ.

ಮೃಗರಾಜ ಇತರರು ಹೇಳಿದ್ದನ್ನೆಲ್ಲ ನಂಬುವ ಪ್ರಾಣಿಯಾಗಿತ್ತು. ಹಾಗಾಗಿ, ನರಿಯ ಮಾತನ್ನೂ ತಕ್ಷಣಕ್ಕೆ ನಂಬಿತು. ಕೋಪೋದ್ರೇಕದಿಂದ ‘ಎಲೈ ಕೇಡಿ ಕರಡಿಯೇ, ರಾಜದ್ರೋಹಿಯಾದ ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ’ ಎಂದು ಕುಂತಲ್ಲೇ ಗುಹೆ ನಡುಗುವಂತೆ ಘರ್ಜಿಸಿತು.

ಮರೆಯಲ್ಲಿ ನಿಂತಿದ್ದ ಕರಡಿ

ಅಷ್ಟರಲ್ಲಿ ಕರಡಿ ಅಲ್ಲಿಗೆ ಬಂದಿತ್ತು. ಹಾಗೆಯೇ ಮರೆಯಲ್ಲಿ ನಿಂತು ನರಿಯ ಮಾತುಗಳನ್ನು ಕೇಳಿಸಿಕೊಂಡಿತ್ತು. ತನ್ನ ಮೇಲೆ ಮೃಗರಾಜನಿಗೆ ಬಂದಿರುವ ಕೋಪವನ್ನೂ ಅದು ಗಮನಿಸಿತ್ತು. ಆದರೂ ಕರಡಿ ಯಾವ ಭಯವನ್ನೂ ತೋರಿಸದೆ ಮೃಗರಾಜನ ಹತ್ತಿರ ಹೋಗಿ ಆರೋಗ್ಯ ವಿಚಾರಿಸಿತು.

ಜೊತೆಗೆ ಚಾಡಿಕೋರ ನರಿಯ ಮಾತು ಕೇಳಿ ತನ್ನ ಮೇಲೆ ಮುನಿಸಿಕೊಂಡಿರುವ ಮೃಗರಾಜನನ್ನು ಸಮಾಧಾನಪಡಿಸುತ್ತಾ ಕರಡಿ ಹೇಳಿತು, ‘ಮೃಗರಾಜ, ನಿಮ್ಮ ಬಗ್ಗೆ ನನಗಿರುವಷ್ಟು ರಾಜಭಕ್ತಿ ಮತ್ತು ಪ್ರೀತಿ ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಇಲ್ಲ. ಬಹಳ ದೂರ ಹೋಗಿ ಕಾಡು-ಮೇಡು ಅಲೆದು ನಿಮ್ಮ ಅನಾರೋಗ್ಯಕ್ಕೆ ಸೂಕ್ತ ಮದ್ದನ್ನು ತಿಳಿದುಕೊಂಡು ಬಂದಿರುವೆ. ಇದರಿಂದಾಗಿ ನಿಮ್ಮ ಬಳಿಗೆ ನಾನು ಬರಲು ಇಷ್ಟು ತಡವಾಯಿತು’ ಎಂದಿತು.

ಕರಡಿ ಬಾಯಲ್ಲಿ ತನ್ನ ರೋಗ ನಿವಾರಣೆಗಾಗಿ ‘ಮದ್ದು’ ಎಂಬ ಮಾತು ಬಂದದ್ದೇ ತಡ ಮೃಗರಾಜನ ಕಿವಿಗಳು ನೆಟ್ಟಗಾದವು. ‘ಎಲೈ ಕರಡಿಯೇ, ಏನದು ಮದ್ದು? ಕೂಡಲೇ ತಿಳಿಸಿ ಹೇಳು’ ಎಂದು ಕರಡಿಯತ್ತ ದೃಷ್ಟಿಸಿ ಘರ್ಜಿಸಿತು. ಆಗ ಕರಡಿ ಚಾಡಿಕೋರ ನರಿಗೆ ಸರಿಯಾದ ಪಾಠವನ್ನು ಕಲಿಸಬೇಕೆಂದು ಮನಸ್ಸಿನಲ್ಲೇ ಅಂದುಕೊಂಡು, ಬಹಳ ಜಾಣತನದಿಂದ ಬಾಯಿಬಿಟ್ಟಿತು.

‘ಮೃಗರಾಜ ಸಿಂಹ ಪ್ರಭುವೇ, ನೀವು ನರಿಯ ರಕ್ತವನ್ನು ಹೊಟ್ಟೆ ತುಂಬಾ ಕುಡಿದರೆ ಅನಾರೋಗ್ಯದಿಂದ ಕೂಡಲೇ ಗುಣಮುಖರಾಗುತ್ತೀರಿ. ತಡಮಾಡದೆ ಈ ಮದ್ದು ತೆಗೆದುಕೊಳ್ಳಿ’ ಎಂದು ನರಿ ಅಲ್ಲಿ ಅಡಗಿ ಕುಳಿತಿರುವುದು ತನಗೆ ಗೊತ್ತೇ ಇಲ್ಲವೆಂಬಂತೆ ಹೇಳಿತು. ಕರಡಿ ಇಷ್ಟು ಹೇಳಿದ್ದೇ ತಡ ಮೃಗರಾಜ ಅಲ್ಲಿಯೇ ಅಡಗಿದ್ದ ನರಿಯ ಮೇಲೆರಗಿ ಅದರ ರಕ್ತ ಹೀರಿತು.

ಒಂದೇ ಗಳಿಗೆಯಲ್ಲಿ ನರಿಯ ಕತೆ ಮುಗಿಯಿತು. ಚಾಡಿಕೋರ ನರಿಗೆ ತಕ್ಕ ಶಾಸ್ತಿಯಾಯಿತು. ಇನ್ನು ತಾನು ಅಲ್ಲಿರುವುದು ಸರಿಯಲ್ಲವೆಂದುಕೊಂಡು ಜಾಣ ಕರಡಿ ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿತು. ತನ್ನ ಪ್ರಾಣ ಉಳಿಯಿತೆಂದು ನಿಟ್ಟುಸಿರು ಬಿಡುತ್ತ ತನ್ನ ಬುದ್ಧಿವಂತಿಕೆಗೆ ಹೆಮ್ಮೆಪಟ್ಟಿತು.

ಕೃಪೆ: ಬನ್ನೂರು ಕೆ. ರಾಜು

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ: NDA ಅಭ್ಯರ್ಥಿಗಳ ಪರ ಬಿ.ಮುನೇಗೌಡ ಬಿರುಸಿನ ಪ್ರಚಾರ

ದೊಡ್ಡಬಳ್ಳಾಪುರ TAPMCS ಚುನಾವಣೆ: NDA ಅಭ್ಯರ್ಥಿಗಳ ಪರ ಬಿ.ಮುನೇಗೌಡ ಬಿರುಸಿನ ಪ್ರಚಾರ

ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಎನ್‌ಡಿ‌ಎ (NDA) ಬೆಂಬಲಿತ ಅಭ್ಯರ್ಥಿಗಳ ಪರ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ (B. Mune

[ccc_my_favorite_select_button post_id="115484"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ.. ಅಕ್ಕ-ತಮ್ಮನ ಸ್ಥಿತಿ ಚಿಂತಾಜನಕ..!

ದೊಡ್ಡಬಳ್ಳಾಪುರ: ಅಪಘಾತ.. ಅಕ್ಕ-ತಮ್ಮನ ಸ್ಥಿತಿ ಚಿಂತಾಜನಕ..!

ಕೆಎಸ್‌ಆರ್‌ಟಿಸಿ (KSRTC) ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ (Accident) ಅಕ್ಕ ಮತ್ತು ತಮ್ಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಎಪಿಎಂಸಿ

[ccc_my_favorite_select_button post_id="115491"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!