ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಈ ಬಾರಿ ಸೇನೆಯ ಯೋಧರು, ಪೊಲೀಸರು ಸೇರಿ ಚಿತ್ತಗಾಂಗ್‌ನ ಹಝಾರಿ ಲೇನ್‌ನಲ್ಲಿ ಹಿಂದೂಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಪರಿಣಾಮ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಬಾಂಗ್ಲಾ ಮೂಲದ ಸಾಹಿತಿ ತಲ್ಲೀಮಾ ನಸೀನ್ ‘ಎಕ್ಸ್’ ಖಾತೆಯಲ್ಲಿ ಆ ಸಂದರ್ಭದ ವಿಡಿಯೊ ಹಂಚಿಕೊಂಡಿದ್ದಾರೆ.
ಇದು ಬಾಂಗ್ಲಾದೇಶದ ಚಿತ್ತಗಾಂಗ್‌ನ ಹಝಾರಿ ಲೇನ್ ವಿಡಿಯೊ. ಹಿಂದೂಗಳ ಮೇಲೆ ಸೇನೆಯ ದೌರ್ಜನ್ಯದ ಚಿತ್ರಣ ಎಂದು ಬರೆದಿದ್ದಾರೆ.
ಹಿಂದಿನ ಪ್ರಧಾನಿ ಷೇಕ್ ಹಸೀನಾ ಪದಚ್ಯುತಿ, ಮಹಮ್ಮದ್ ಯೂನುಸ್ ಮಧ್ಯಂತರ ಸರಕಾರ ರಚನೆ ನಂತರ ಬಾಂಗ್ಲಾದಲ್ಲಿ ಹಿಂದೂ, ಬೌದ್ಧ, ಕ್ರೈಸ್ತ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯ ಹೆಚ್ಚಿದೆ.
Hazari Lane, Chittagong today. Hindus vs Military. pic.twitter.com/0qkoXEVJQP
— taslima nasreen (@taslimanasreen) November 5, 2024
17 ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ ಶೇ.8ರಷ್ಟು ಹಿಂದೂಗಳಿದ್ದಾರೆ. ಅವರೆಲ್ಲರೂ ಷೇಕ್ ಹಸೀನಾ ಬೆಂಬಲಿಗರು ಎಂಬ ಕಾರಣಕ್ಕೆ ಮಧ್ಯಂತರ ಸರಕಾರದ ಪ್ರೋತ್ಸಾಹದಲ್ಲೇ ದೌರ್ಜನ್ಯ ನಡೆಯುತ್ತಿದೆ.
ಹಿಂದೂಗಳೇ ದೇಶ ಬಿಟ್ಟು ತೊಲಗಿ ಎಂಬ ಬೆದರಿಕೆಯೂ ಇದೆ.