ದೊಡ್ಡಬಳ್ಳಾಪುರ: ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ, ದೇಶ ಕಂಡ ಮಹಾನ್ ಆರ್ಥಿಕ ತಜ್ಞ ಮನಮೋಹನ್ ಸಿಂಗ್ (Manmohan Singh) ಅವರ ಅಗಲಿಕೆಗೆ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಅವರು ಸಂತಾಪ ಸೂಚಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಭಾರತವನ್ನು ಅಪಾರ ಬುದ್ದಿವಂತಿಕೆ ಮತ್ತು ಸಮಗ್ರತೆಯಿಂದ ಮುನ್ನಡೆಸಿದರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ತಿಳಿವಳಿಕೆಯು ರಾಷ್ಟ್ರವನ್ನು ಪ್ರೇರೇಪಿಸಿತು.
‘ಮನಮೋಹನ್ ಸಿಂಗ್ ನವಭಾರತದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು. ಭಾರತ ಇಂದು ಜಗತ್ತಿನ ಮುಂಚೂಣಿ ಆರ್ಥಿಕ ಶಕ್ತಿಗಳ ಪೈಕಿ ಒಂದಾಗಿರುವುದರ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇದರ ಜತೆಗೆ ಸಾರ್ವಜನಿಕ ಬದುಕಿನಲ್ಲಿ ಅವರು ಮೆಲುಮಾತಿನ ಸಜ್ಜನಿಕೆಗೆ ಹೆಸರಾಗಿದ್ದರು’ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರ ಕುಟುಂಬಕ್ಕೆ ನನ್ನ ಹೃತ್ತೂರ್ವಕ ಸಂತಾಪಗಳು. ಅವರನ್ನು ಮೆಚ್ಚಿದ ಲಕ್ಷಾಂತರ ಜನರು ಅವರನ್ನು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ರವಿ ಮಾವಿನಕುಂಟೆ ಅವರು ಸಂತಾಪ ನುಡಿಗಳಲ್ಲಿ ಸ್ಮರಿಸಿದ್ದಾರೆ.