Harithalekhani – Harithalekhani

ಬಿಜೆಪಿ ಸರ್ಕಾರ ಅವಧಿಯಲ್ಲಿ ಎಷ್ಟು ಬಾಂಗ್ಲಾ ವಲಸಿಗರನ್ನು ವಾಪಸ್ ಕಳಿಸಿದ್ದೀರಿ?: ಡಿಸಿಎಂ ಡಿ.ಕೆ. ಶಿವಕುಮಾರ್
ಗುವಾಹಟಿ: “ಅಸ್ಸಾಂನಲ್ಲಿ ಬದಲಾವಣೆ ಕಾಲ ಬಂದಿದೆ. ಇಡೀ ಅಸ್ಸಾಂ ಹಿಟ್ಲರ್ ಆಡಳಿತದಿಂದ ಮುಕ್ತಿ ಪಡೆಯಲು ಬಯಸಿದೆ. ಈ ಹಿಟ್ಲರ್ ಆಡಳಿತಕ್ಕೆ ನಾವು ಕೊನೆ ಹಾಡಬೇಕಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗುವಾಹಟಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಅಸ್ಸಾಂ ವಾತಾವರಣ ಚೆನ್ನಾಗಿದೆ, ರಾಜಕೀಯ ತಾಪಮಾನ ಹೆಚ್ಚಾಗಿದೆ. ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಅನೇಕ ಅಸ್ಸಾಮಿಗರನ್ನು ಭೇಟಿ ಮಾಡಿ ಮಾತನಾಡುತ್ತಿದ್ದೇನೆ. ಅವರು ತಮ್ಮ ಅನೇಕ ಅಭಿಪ್ರಾಯಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಆಲೋಚನೆ ಇತ್ತು. ಆಗ ಅವರು ನೀವು ನಮ್ಮ ಮಾತನ್ನು ಪ್ರಕಟಿಸಿದರೆ ನಮ್ಮ ಜೀವಕ್ಕೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಗ ಅಸ್ಸಾಂನಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ” ಎಂದು ತಿಳಿಸಿದರು.

“ನಾವು ಇಲ್ಲಿಗೆ ಶಿಕ್ಷಣ, ಉದ್ಯೋಗಕ್ಕಾಗಿ ಬಂದಿದ್ದು, ಇದು ಅತ್ಯಂತ ಸುರಕ್ಷಿತ ನಗರ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದರು. ನನ್ನ ಅಳಿಯನ ಟೀ ಎಸ್ಟೇಟ್ ನಲ್ಲಿ ಅಸ್ಸಾಂ ಮೂಲದ ಅನೇಕರು ಕೆಲಸ ಮಾಡುತ್ತಿದ್ದಾರೆ. ನಾನು ಅವರ ಜೊತೆ ಮಾತನಾಡಿದೆ. ಅವರ ಸಮಸ್ಯೆ ಕೇಳಿದೆ. ಸಾಮಾನ್ಯ ಕಾರ್ಮಿಕರು ತಮ್ಮ ಕಣ್ಣೀರ ಕಥೆ ಹೇಳಿಕೊಂಡು ಸಮಸ್ಯೆಗಳನ್ನು ಹಂಚಿಕೊಂಡರು. ಅವರಿಗೆ ಸಿಕ್ಕ ಭರವಸೆ, ಈಡೇರಿಲ್ಲ. ನೀವು ನಮಗೆ ಸಹಾಯ ಮಾಡಬೇಕು, ನೀವು ಮತ್ತೆ ಅಸ್ಸಾಂಗೆ ಹೋಗುವುದು ಯಾವಾಗ ಎಂದು ಒತ್ತಾಯ ಮಾಡಿದರು” ಎಂದರು.

“ಇಲ್ಲಿನ ಆಡಳಿತ ವಿರೋಧಿ ಅಲೆ ಬಗ್ಗೆ ನಾನು ಮಾತನಾಡುತ್ತಿಲ್ಲ. ಇದು ಅಸ್ಸಾಂ ರಾಜ್ಯದ ಜನರಲ್ಲಿರುವ ಬದಲಾವಣೆಯ ಬಯಕೆ ಬಗ್ಗೆ ಮಾತನಾಡುತ್ತಿರುವೆ. ದೊಡ್ಡ ಇತಿಹಾಸವಿರುವ ಕಾಂಗ್ರೆಸ್ ಸರ್ಕಾರವನ್ನು ಅವರು ಬಯಸಿದ್ದಾರೆ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗ ಅಧಿಕಾರದಲ್ಲಿ ಇದ್ದಂತೆ. ಎಲ್ಲ ವರ್ಗ ಒಗ್ಗಟ್ಟಾಗಿರುತ್ತದೆ. ಕಾಂಗ್ರೆಸ್ ಎಲ್ಲರನ್ನು ಒಗ್ಗೂಡಿಸಿದರೆ, ಬಿಜೆಪಿ ವಿಭಜಿಸುತ್ತದೆ” ಎಂದು ಹರಿಹಾಯ್ದರು.

ಭ್ರಷ್ಟಾಚಾರ ಅರೋಪ ಹೊತ್ತಿದ್ದ ಹಿಮಂತ್ ರನ್ನು ಯಾವ ನದಿಯಲ್ಲಿ ಮುಳುಗಿಸಿ ಸ್ವಚ್ಛ ಮಾಡಿದಿರಿ?

“ಬಿಜೆಪಿಯವರು ಬಾಂಗ್ಲಾ ವಲಸಿಗರ ವಿಚಾರ ಸೇರಿದಂತೆ ಒಂದೆರಡು ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನು ನಮ್ಮ ಮಾಜಿ ಸ್ನೇಹಿತರಿಗೆ ಒಂದು ಮಾತು ಕೇಳಬಯಸುತ್ತೇನೆ. ಹತ್ತು ವರ್ಷಗಳ ಹಿಂದೆ ಅಸ್ಸಾಂನ ಅತ್ಯಂತ ಭ್ರಷ್ಟ ರಾಜಕಾರಣಿ ಎಂಬ ಆರೋಪ ಹೊತ್ತಿದ್ದರು. ಅವರ ವಿರುದ್ಧ ಬಿಜೆಪಿಯವರು ಭ್ರಷ್ಟಾಚಾರ ಆರೋಪದ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಭ್ರಷ್ಟಾಚಾರದ ಅರೋಪ ಹೊತ್ತಿದ್ದ ಅವರು ಇಂದು ಇಷ್ಟು ಸ್ವಚ್ಛವಾಗಿರುವುದು ಹೇಗೆ? ಅವರನ್ನು ಗಂಗಾ, ಬ್ರಹ್ಮಪುತ್ರ ಅಥವಾ ಬೇರೆ ಯಾವ ನದಿಯಲ್ಲಿ ಮುಳುಗಿಸಿ ಅವರನ್ನು ನಿಷ್ಕಲ್ಮಶರನ್ನಾಗಿ ಮಾಡಿದರು? ಈ ಬಗ್ಗೆ ಅಮಿತ್ ಶಾ ಅವರು ಉತ್ತರ ನೀಡಬೇಕು. ಭ್ರಷ್ಟಾಚಾರ ಆರೋಪ ಹೊತ್ತ ಯಾವುದೇ ನಾಯಕರು ಬಿಜೆಪಿಗೆ ಹೋದರೆ ಅವರು ಬಹಳ ಪ್ರಮಾಣಿಕರಾಗುತ್ತಾರೆ. ಇದು ಹೇಗೆ ಎಂದು ಬಿಜೆಪಿ ನಾಯಕರು ಉತ್ತರಿಸಬೇಕು” ಎಂದು ತಿಳಿಸಿದರು.

“ಬಿಜೆಪಿಯವರು ಅನೇಕ ಆಮಿಷ ನೀಡಿ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದ್ದಾರೆ. ಬಿಜೆಪಿ ಬಲಿಷ್ಠವಾಗಿದ್ದರೆ, ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇದ್ದರೆ, ಕಾಂಗ್ರೆಸ್ ಸಂಸದರು, ನಾಯಕರನ್ನು ಸೆಳೆಯುವ ಅಗತ್ಯ ಏನಿತ್ತು? ಕಳೆದ 10 ವರ್ಷಗಳಿಂದ ಅವರದೇ ಸರ್ಕಾರ ಅಧಿಕಾರದಲ್ಲಿದ್ದು, ದಕ್ಷ ಆಡಳಿತ ನೀಡಿ ಉತ್ತಮವಾಗಿ ಕೆಲಸ ಮಾಡಿದ್ದರೆ, ಕಾಂಗ್ರೆಸ್ ನಾಯಕರನ್ನು ಸೆಳೆಯುವ ಅಗತ್ಯವೆನಿತ್ತು? ಈ ಸರ್ಕಾರದ ವಿರುದ್ಧ ಆರೋಪ ಪಟ್ಟಿ ತಯಾರಿಸಿದ ನಾಯಕನ ಬಳಿ ಹೋಗಿ ಅವರನ್ನು ಬೇಡಿಕೊಂಡು, ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ. ಅವರನ್ನು ಕಣಕ್ಕೆ ಇಳಿಸಿದ್ದೀರಿ. ಇದು ಬಿಜೆಪಿಯ ದೌರ್ಬಲ್ಯ ಹಾಗೂ ಸೋಲಿನ ಸೂಚನೆಯಾಗಿದೆ” ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಅವಧಿಯಲ್ಲಿ ಎಷ್ಟು ಬಾಂಗ್ಲಾ ವಲಸಿಗರನ್ನು ವಾಪಸ್ ಕಲಿಸಿದ್ದೀರಿ?

“ಹಿಮಂತ್ ಅವರು ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ವಾಪಸ್ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 44 ಸಾವಿರ ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಲಾಗಿತ್ತು. ಈಗ ಬಿಜೆಪಿ ಸರ್ಕಾರದಲ್ಲಿ ಎಷ್ಟು ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಲಾಗಿದೆ?” ಎಂದು ಪ್ರಶ್ನಿಸಿದರು.

“ಅಸ್ಸಾಂನಲ್ಲಿ ಹಿಟ್ಲರ್ ಆಡಳಿತ ನಡೆಸಲಾಗುತ್ತಿದೆ. ಇಲ್ಲಿನ ಮುಖ್ಯಮಂತ್ರಿಗಳು ಇತ್ತೀಚಿಗೆ ಒಂದು ಹೇಳಿಕೆ ನೀಡಿದ್ದು, 30 ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಅವರು ತೀರ್ಮಾನ ಮಾಡುತ್ತಾರಂತೆ. ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಇದ್ದವರು. ಕಾಂಗ್ರೆಸ್ ಪಕ್ಷದಲ್ಲಿ ಬೆಳೆದವರು. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಆತಂಕದಲ್ಲಿ ಅವರು ಈ ರೀತಿ ಹೇಳುತ್ತಿದ್ದಾರೆ. ತಾವು ಏನೇ ಹೇಳಿದರು ಅಸ್ಸಾಂ ಜನತೆ ಅದನ್ನು ಸ್ವೀಕರಿಸುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ. ಜನ ಪ್ರಜ್ಞಾವಂತರಾಗಿದ್ದು, ಇದು ಸಾಧ್ಯವಿಲ್ಲ. ಹೀಗಾಗಿ ಜನ ಕಾಂಗ್ರೆಸ್ ಅನ್ನು ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಈ ರಾಜ್ಯವನ್ನು ಒಗ್ಗಟ್ಟಾಗಿ ಇಟ್ಟು, ರಕ್ಷಣೆ ಮಾಡಿದೆ. ಹಿಮಂತ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಭಾಗವಾಗಿದ್ದರು. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ಅವರು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ” ಎಂದು ತಿಳಿಸಿದರು.

“ಅವರ ರಕ್ತ ಕೂಡ ಕಾಂಗ್ರೆಸ್ ಆಗಿದೆ. ಈ ಮಾತು ಕೇವಲ ನನ್ನದಲ್ಲ. ಬಿಜೆಪಿ ನಾಯಕರು ಇದನ್ನೇ ಹೇಳುತ್ತಿದ್ದಾರೆ. ಬಿಜೆಪಿ ನಾಯಕರೇ ಈಗ ಅವರನ್ನು ವಿರೋಧಿಸುತ್ತಿದ್ದಾರೆ. 30 ಕ್ಷೇತ್ರಗಳ ಬಗ್ಗೆ ಮಾಡಿರುವ ಅರೋಪ ಸುಳ್ಳು. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದೆ. ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಬಂದಿತ್ತಾದರೂ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರು. ಆಮೂಲಕ ಅಧಿಕಾರ ತ್ಯಾಗ ಮಾಡಿದರು. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡ ಪಕ್ಷ ಕಾಂಗ್ರೆಸ್. ಇಂತಹ ಕುಟುಂಬದ ಬಗ್ಗೆ ಸುಳ್ಳು ಅರೋಪ ಮಾಡುತ್ತಿದ್ದಾರೆಂದರೆ ಅವರಿಗೆ ಚುನಾವಣೆಯಲ್ಲಿ ಸೋಲುವ ಆತಂಕ ಆವರಿಸಿದೆ ಎಂದರ್ಥ. ಅವರು ತಮ್ಮ ಪಕ್ಷ, ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ತಿಳಿಸಿದರು.

ಭ್ರಷ್ಟಾಚಾರ ತಾಂಡವ

“ಇಲ್ಲಿನ ಆಡಳಿತ ಹೇಗಿದೆ ಎಂದರೆ ಸೇತುವೆ ನಿರ್ಮಾಣವಾಗಿ ಉದ್ಘಾಟನೆ ಬಳಿಕ ಟೆಂಡರ್ ಕರೆಯಲಾಗಿದೆ. ಇದು ಯಾವ ರೀತಿಯ ಆಡಳಿತ ಎಂದು ಅರ್ಥವಾಗುತ್ತಿಲ್ಲ. ಇನ್ನು ಕೆಲವು ಸೇತುವೆಗಳು ನಿರ್ವಹಣೆ ಇಲ್ಲದೇ ಕುಸಿದು ಬಿದ್ದಿವೆ. ಇವು ಆಡಳಿತದಲ್ಲಿರುವ ದೋಷಕ್ಕೆ ಸಾಕ್ಷಿಯಾಗಿವೆ. ನಾವು ಎಲ್ಲದಕ್ಕೂ ಹೊಣೆಗಾರರಾಗಿರಬೇಕು. ಆದರೆ ಈ ರೀತಿ ಭ್ರಷ್ಟಾಚಾರ, ದುರಾಡಳಿತ ಬೇರೆ ಎಲ್ಲೂ ಇಲ್ಲ. ಸರ್ಕಾರದ ಎಲ್ಲಾ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಬೇರೆ ಯಾವುದೇ ರಾಜ್ಯದಲ್ಲಿ ನಡೆದಿಲ್ಲ. ಹಿಮಂತ್ ಬಿಸ್ವಾ ಅವರ ಸರ್ಕಾರದಲ್ಲಿ ಎಲ್ಲಾ ಸಚಿವರು ಹಾಗೂ ಅವರ ಕುಟುಂಬದವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ” ಎಂದು ಟೀಕಿಸಿದರು.

“ಅಸ್ಸಾಂ ರಾಜ್ಯದಲ್ಲಿ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಿದ ಮಾಧ್ಯಮಗಳ ಮೇಲೆ ದಾಳಿ ಮಾಡಿ ಬೆದರಿಸಲಾಗುತ್ತಿದೆ. ರಾಜಕಾರಣಿಗಳು ತಪ್ಪು ಮಾಡುತ್ತಾರೆ. ತಪ್ಪು ನಡೆದಾಗ ಅದನ್ನು ಒಪ್ಪಿಕೊಳ್ಳಬೇಕು. ಆದರೆ ಜನರ ಧ್ವನಿಯಾಗಿರುವ ಮಾಧ್ಯಮಗಳನ್ನು ಬೆದರಿಸುವುದು ಸರಿಯಲ್ಲ. ಇದರ ವಿರುದ್ಧ ಮಾಧ್ಯಮಗಳು ಒಟ್ಟಾಗಿ ನಿಂತಿರುವುದನ್ನು ನಾನು ಸ್ವಾಗತಿಸುತ್ತೇನೆ” ಎಂದು ತಿಳಿಸಿದರು.

ಕೊಟ್ಟ ಮಾತಿನಂತೆ ನಡೆಯುವುದು ಕಾಂಗ್ರೆಸ್

“ಸಾವಿರಾರು ಸಂಖ್ಯೆಯಲ್ಲಿ ಅಸ್ಸಾಂ ಜನ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಿಗೆ ಬರುತ್ತಿದ್ದಾರೆ ಯಾಕೆ? ಇದಕ್ಕೆ ಕಾರಣ ನಿರುದ್ಯೋಗ. ಕಳೆದ ಚುನಾವನೆಗಳಲ್ಲಿ ನೀವು ಕೊಟ್ಟ ಭರವಸೆಗಳ ಪೈಕಿ ಎಷ್ಟು ಭರವಸೆ ಈಡೇರಿಸಿದ್ದೀರಿ. ಎಷ್ಟು ಯುವಕರಿಗೆ ಉದ್ಯೋಗ, ಅವಕಾಶ ನೀಡಿದ್ದೀರಿ. ಎಷ್ಟು ಹುದ್ದೆ ಭರ್ತಿ ಮಾಡಿದ್ದೀರಿ? ಕಾಂಗ್ರೆಸ್ ಸರ್ಕಾರ ಈ ಯುವಕರ ಭವಿಷ್ಯಕ್ಕೆ ನೆರವಾಗಲು ಬದ್ಧವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಾವು ಕೊಟ್ಟ ಮಾತಿನಂತೆ ನಡೆಯುವ ಇತಿಹಾಸ ಹೊಂದಿದ್ದೇವೆ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಅಸ್ಸಾಂ ಜನರಿಗೆ ಮಾತು ಕೊಡುತ್ತೇನೆ. ಯುವಕರಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ನಿಮ್ಮ ಭವಿಷ್ಯ ಗಾಂಧಿ ಕುಟುಂಬದ ಮೇಲೆ ಅವಲಂಬಿತವಾಗಿದೆ. ರಾಹುಲ್ ಗಾಂಧಿ ಅವರು ಈ ದೇಶದಲ್ಲಿ ಪಾದಯಾತ್ರೆ ಮಾಡಿದಾಗ ಅವರ ಮೇಲೆ ಎಲ್ಲಾ ರೀತಿ ಟೀಕೆ ಮಾಡಿದರು. ದೇಶದಲ್ಲಿ ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸುವ ನಿರ್ಧಾರವನ್ನು ಯಾರು ಮಾಡಿದ್ದರು?” ಎಂದರು.

ಜನರ ಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧ

“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಕೊಟ್ಟ ಮಾತಿನಂತೆ ನಡೆಯಲಿದೆ. ಅಸ್ಸಾಂ ರಾಜ್ಯದ ಜನರ ಅನುಕೂಲಕ್ಕೆ ನಮ್ಮ ನಾಯಕರು ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದಾರೆ. ನೀವು ನಮಗೆ ಅವಕಾಶ ನೀಡಿ. ನಾವು ದಕ್ಷ ಆಡಳಿತ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಇಡೀ ದೇಶ ಅಸ್ಸಾಂ ಜನರ ಆದೇಶವನ್ನು ಎದುರು ನೋಡುತ್ತಿದೆ” ಎಂದು ತಿಳಿಸಿದರು.

“ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕದಲ್ಲಿ 1.26 ಕೋಟಿ ಬಡ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದೆವು. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಈ ಯೋಜನೆಗಳಿಂದ ಆರ್ಥಿಕತೆ ನಾಶವಾಗುತ್ತಿದೆ ಎಂದು ಅರೋಪ ಮಾಡಿದ್ದ ಪ್ರಧಾನಮಂತ್ರಿಗಳು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆ ನಕಲು ಮಾಡಿದರು. ಚುನಾವಣೆ ಮುನ್ನವೇ ಯೋಜನೆ ಜಾರಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದಾಗ ಜನರು ಅನುಭವಿಸುತ್ತಿರುವ ಕಷ್ಟ ನೋಡಿ ಅದಕ್ಕೆ ಪರಿಹಾರ ನೀಡಲು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಜನಸಾಮಾನ್ಯರು ಬಲಿಷ್ಠವಾದರೆ ದೇಶ ಬಲಿಷ್ಠವಾಗುತ್ತದೆ ಎಂಬ ಕಾರಣಕ್ಕೆ ಈ ಯೋಜನೆ ಯಾರಿಗೆ ತಂದೆವು” ಎಂದು ವಿವರಿಸಿದರು.

“ಆದರೆ ಇಲ್ಲಿ ಬಿಜೆಪಿ ಪರವಾಗಿರುವ ಮಹಿಳೆಯರಿಗೆ ಮಾತ್ರ ಇಂತಹ ಯೋಜನೆ ತರಲಾಗಿದೆ ಎಂದು ಕೇಳಿ ಅಚ್ಚರಿಯಾಯಿತು. ಬಿಜೆಪಿ ಸಮಾವೇಶಕ್ಕೆ ಹೋಗದಿದ್ದರೆ ಇಂತಹ ಯೋಜನೆಯನ್ನು ನೀಡುವುದಿಲ್ಲ ಎಂದು ಮಹಿಳೆಯರಿಗೆ ಬೆದರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಈ ರೀತಿ ತಾರತಮ್ಯ ಮಾಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ಬಡ ಹಾಗೂ ಅರ್ಹ ಎಲ್ಲಾ ಮಹಿಳೆಯರಿಗೆ ಯೋಜನೆ ತಲುಪಿಸುತ್ತಿದ್ದೇವೆ. ನಾವು ಜಾತಿ, ಸಮುದಾಯದ ಮೇಲೆ ತಾರತಮ್ಯ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ” ಎಂದು ತಿಳಿಸಿದರು.

“ಅಸ್ಸಾಂ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ರಾಜ್ಯದ ಪ್ರತಿ ರಸ್ತೆ, ಸೇತುವೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಇತ್ತೀಚಿಗೆ ನಿಮ್ಮ ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವವರೇ ಅರೋಪ ಮಾಡಿದ್ದು, ಅವರ ಆರೋಪಗಳಿಗೆ ಉತ್ತರಿಸಿ. ಈ ಭ್ರಷ್ಟಾಚಾರಕ್ಕೆ ಅಂತ್ಯವಾಡಿ, ಮಹಿಳೆಯರು ಹಾಗೂ ಯುವಕರ ಪರವಾಗಿ ಕಾರ್ಯಕ್ರಮವನ್ನು ಕಾಂಗ್ರೆಸ್ ಸರ್ಕಾರ ರೂಪಿಸಲಿದೆ” ಎಂದು ಭರವಸೆ ನೀಡಿದರು.

“ನಾನು ಅಸ್ಸಾಂ ಬಿಜೆಪಿಯ ಹಳೆಯ ನಾಯಕರನ್ನು ಕೇಳುವುದೆಂದರೆ, 2014ರ ವೇಳೆ ನೀವು ಹಿಮಂತ್ ವಿರುದ್ಧ ಮಾಡಿದ ಆರೋಪಗಳು ಏನಾದವು? ಈ ಆರೋಪಗಳಿಂದ ಹಿಮಂತ್ ಅವರು ಮುಕ್ತಾರಾಗಿದ್ದು ಹೇಗೆ?” ಎಂದು ಪ್ರಶ್ನಿಸಿದರು.

ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ
ಮೈಸೂರು: ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ತಿಳಿಸಿದರು.

ಅವರು ಇಂದು ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಎಲ್ಲರಿಗೂ ವೃತ್ತಿಪರ ಯಶಸ್ಸನ್ನು ಕೋರಿ ಶುಭಹಾರೈಸಿ ಮಾತನಾಡಿದರು.

ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು

ಪೊಲೀಸ್ ಸೇವೆಯಲ್ಲಿ ಶಿಸ್ತು ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿನ ಜಾತಿ ವ್ಯವಸ್ಥೆಯಿದ್ದು,ದೀನ ದಲಿತರ, ಅಶಕ್ತರ , ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೆಡೆಯಿಂದ ಓಡಾಡುವಂತಾದಾಗ ಮಾತ್ರ, ನಿಜಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ಪೊಲೀಸರು ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಿಲ್ಲದೇ, ಕಾನೂನು ಸುವ್ಯವಸ್ಥೆಯನ್ನು ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

377 ಸಬ್ ಇನ್ಸ್ಪೆಕ್ಟರ್ ಗಳು ಸೇವೆಗೆ ಸೇರ್ಪಡೆ

ತರಬೇತಿಯಲ್ಲಿ ಕಲಿತಿದ್ದನ್ನು ಜ್ಞಾಪಕವಿಟ್ಟುಕೊಂಡು ಜೀವನದಲ್ಲಿ ಪಾಲಿಸಬೇಕು.

ತರಬೇತಿಗಳು ಆಗಾಗ್ಗೆ ನಡೆಯಬೇಕಲ್ಲದೆ ತರಬೇತಿ ಜೀವನದ ಅಂಗವಾಗಬೇಕು. 377 ಸಬ್ ಇನ್ಸ್ಪೆಕ್ಟರ್ ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದು, ಖಾಲಿಯಿದ್ದ 4911 ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭಾರತಿ ಮಾಡಲಾಗಿದೆ. ಖಾಲಿ ಇರುವ 8000 ಹುದ್ದೆಗಳನ್ನುಂಭರ್ತಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದನ್ನು ಮಾಡಿಯೇ ತೀರುತ್ತೇವೆ. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ ಎಂದು ಭರವಸೆ ನೀಡಿದರು.

ಅಭಿವೃದ್ಧಿ ಕೆಲಸಗಳಿಗೆ ಹಿಂಜರಿಕೆಯಿಲ್ಲ

ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಾಗ ಸರ್ಕಾರ ಹಿಂದೆಮುಂದೆ ನೋಡುವುದಿಲ್ಲ. ಕೆಲಸದಲ್ಲಿರುವ ಸಂದರ್ಭದಲ್ಲಿ ಕುಟುಂಬದವರ ಯೋಚನೆ ಮಾಡುವ ಅಗತ್ಯವಿಲ್ಲ. ಸತ್ಯ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತೀರಿ ಎಂದು ನಂಬಿರುವುದಾಗಿ ಹೇಳಿದರು.

ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ

ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ದಿಕ್ಕಿನಲ್ಲಿ ಆರಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು, ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ಪರಿಣಾಮ ಮಾರಕವಾಗುತ್ತದೆ. ಇದನ್ನು ನಿರ್ಮೂಲನೆ ಮಾಡದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.

ಮನವಿಯತೆಯಿಂದ ಕೆಲಸ ಮಾಡಬೇಕು

ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜೊತೆಗೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು ಎಂದರು.

ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು

ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಸೂಕ್ತ ತರಬೇತಿ ನೀಡಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು. ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು.

ಧೈರ್ಯದಿಂದ ಕೆಲಸ ಮಾಡಬೇಕು

ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣಬಲದಿಂದ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಂಥ ಆಮಿಷಗಳಿಗೆ ಒಳಗಾಗಬಾರದು, ಧೈರ್ಯದಿಂದ ಕೆಲಸ ಮಾಡಿ ಪೋಲಿಸ್ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಕಿವಿ ಮಾತು ಹೇಳಿದರು.

ದೊಡ್ಡಬಳ್ಳಾಪುರ: ಏಪ್ರಿಲ್ 28ಕ್ಕೆ ಶ್ರೀಮುತ್ಯಾಲಮ್ಮದೇವಿ ಜಾತ್ರೆ
ದೊಡ್ಡಬಳ್ಳಾಪುರ: ನಗರದ ಇತಿಹಾಸ ಪ್ರಸಿದ್ದ ಗ್ರಾಮ ದೇವತೆ ಶ್ರೀಮುತ್ಯಾಲಮ್ಮದೇವಿ (Muthiyalammadevi) ಜಾತ್ರಾ ಮಹೋತ್ಸವ ಏಪ್ರಿಲ್ 28 ಹಾಗೂ 29 ರಂದು ನಡೆಸಲು ಶುಕ್ರವಾರ ದೇವಾಲಯದ ನಡೆದ ಆಡಳಿತ ಮಂಡಳಿಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಯಿತು.

ನಗರದ ಮುತ್ಯಾಲಮ್ಮ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಪ್ರತಿ ವರ್ಷದಂತೆ ದೇವಾಲಯ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ರಥಗಳ ಆಗಮನ ಹಾಗೂ ಹೂವಿನ ಆರತಿಗಳು ಏಪ್ರಿಲ್ 28 ರಂದು ನಡೆಯಲಿದೆ. ಏಪ್ರಿಲ್ 29 ರಂದು ಹಗಲು ಪರಿಷೆ ನಡೆಯಲಿದೆ.

ಜಾತ್ರೆಯ ದಿನಾಂಕ ನಿಗದಿಗಾಗಿ ನಡೆದ ಸಭೆಯಲ್ಲಿ ಶ್ರೀಮುತ್ಯಾಲಮ್ಮ ಸೇವಾ ಸಮಿತಿ ದತ್ತಿಯ ಅಧ್ಯಕ್ಷ ಎಚ್ ಹನುಮಂತು, ಗೌರವ ಅಧ್ಯಕ್ಷ ಡಿ.ಬಿ.ಹನುಮಂತರಾವ್, ಉಪಾಧ್ಯಕ್ಷ ಕೆ.ನಾಗೇಶ್, ಕಾರ್ಯದರ್ಶಿ ಆರ್.ಪ್ರಭಾಕರ್, ಖಜಾಂಜಿ ಜೆ.ವೈ.ಮಲ್ಲಪ್ಪ, ಕಾರ್ಯಾಧ್ಯಕ್ಷ ಡಿ.ಎನ್.ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ಜೆ.ಕುಮಾರ್, ಅಪ್ಪಿ ವೆಂಕಟೇಶ್, ನಗರಸಭಾ ಸದಸ್ಯ ಟಿ.ಮಂಜುನಾಥ್, ಜಂಟಿ ಕಾರ್ಯದರ್ಶಿ, ಟಿ.ಗೋವಿಂದರಾಜು, ಪ್ರಧಾನ ಅರ್ಚಕರಾದ ಎಚ್.ಅನಂತ ಹಾಗೂ ಟ್ರಸ್ಟಿಗಳು, ದೇವಾಲಯದ ಜಾತ್ರೆಯಲ್ಲಿ ಭಾಗವಹಿಸುವ ಏಳು ಹಳ್ಳಿಗಳ ಗ್ರಾಮಸ್ಥರು,ಶಾಂತಿನಗರ ಸಾಂಸ್ಕೃತಿಕ ಕಲಾಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ದಿನ ಭವಿಷ್ಯ: ಈ ರಾಶಿಯವರು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ
Astrology: ಭಾನುವಾರ, ಮಾರ್ಚ್ 29, 2026, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ

ಇಂದು ನಿಮಗೆ ಖಂಡಿತವಾಗಿಯೂ ಫಲಪ್ರದ ವಾಗಲಿದೆ. ಕೆಲಸದ ಸ್ಥಳದಲ್ಲಿ ಲಾಭದ ಅವಕಾಶಗಳನ್ನು ಪಡೆಯುವುದನ್ನು ಮುಂದುವರಿಸುತ್ತೀರಿ, ಇದರಿಂದಾಗಿ ನಿಮ್ಮ ಸಂಪತ್ತನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. (ಭಕ್ತಿಯಿಂದ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ

ಪಾಲುದಾರಿಕೆಯಲ್ಲಿ ನಡೆಯುತ್ತಿರುವ ವ್ಯಾಪಾರದಿಂದ ಲಾಭ ಪಡೆಯುತ್ತೀರಿ. ಇಂದು ಕೆಲವು ಹೊಸ ಸವಾಲುಗಳನ್ನು ತರುತ್ತದೆ. ನಿಮ್ಮ ಯಾವುದೇ ಕೆಲಸವನ್ನು ಇತರರಿಗೆ ಬಿಟ್ಟರೆ, ಅದು ಬಹಳ ಸಮಯ ತೆಗೆದುಕೊಳ್ಳ ಬಹುದು. ಆಸ್ತಿಯನ್ನು ಖರೀದಿಸುವ ಆಸೆ ಇದ್ದರೆ, ಅದು ಇಂದು ಈಡೇರುತ್ತದೆ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ

ಇಂದು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಮಾಡಲು ಬಯಸಿದರೆ, ಅದು ನಿಮಗೆ ಪ್ರಯೋಜನಕಾರಿಯಾಗಿದೆ, ನಿಮ್ಮ ಸ್ವಂತ ಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಉತ್ತಮವಾಗಿರುತ್ತದೆ. (ಭಕ್ತಿಯಿಂದ ಶ್ರೀ ಗ್ರಾಮ ದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ

ಇಂದು ನಿಮ್ಮ ಸುತ್ತ ಲಿನ ಪರಿಸರವು ಆಹ್ಲಾದಕರವಾಗಿರುತ್ತದೆ ಮತ್ತು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ. ಕುಟುಂಬದ ಯಾರಿಗಾದರೂ ಮದುವೆಗೆ ಅಡ್ಡಿಯುಂಟಾಗಿದ್ದರೆ, ಅದು ಇಂದು ಕೊನೆಗೊಳ್ಳುತ್ತದೆ ಮತ್ತು ನಿಮ್ಮ ಉದ್ಯೋಗದಲ್ಲಿ ನೀವು ಬಡ್ತಿಯನ್ನು ಪಡೆಯುತ್ತೀರಿ. (ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ

ಇಂದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರುತ್ತದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ತೊಡೆದುಹಾಕುತ್ತೀರಿ, ಏಕೆಂದರೆ ನೀವು ವ್ಯವಹಾರದಲ್ಲಿ ನಿಮ್ಮ ಸ್ಥಗಿತಗೊಂಡ ಹಣವನ್ನು ಪಡೆಯಬಹುದು, ಆದರೆ ನಿಮ್ಮ ವ್ಯರ್ಥ ಖರ್ಚುಗಳನ್ನು ನೀವು ನಿಲ್ಲಿಸಬೇಕು. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ

ಇಂದು ನಿಮಗೆ ಚಿಂತೆಯ ದಿನವಾಗಿರುತ್ತದೆ. ನಿಮ್ಮ ಕೆಲಸವನ್ನು ಬಿಟ್ಟು, ನೀವು ಇತರರ ಕೆಲಸಗಳ ಮೇಲೆ ಹೆಚ್ಚು ಗಮನಹರಿಸುತ್ತೀರಿ, ಇದರಿಂದಾಗಿ ನೀವು ದೊಡ್ಡ ನಷ್ಟವನ್ನು ಅನುಭವಿಸ ಬೇಕಾಗುತ್ತದೆ. ಇಂದು ನೀವು ಸ್ನೇಹಿತರ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತೀರಿ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ

ಕೆಲಸದ ಸ್ಥಳದಲ್ಲಿ ಯಾರನ್ನೂ ನಂಬಬೇಕಾಗಿಲ್ಲ, ಇಲ್ಲದಿದ್ದರೆ ಅವರು ನಿಮಗೆ ಕೆಲವು ತಪ್ಪು ಸಲಹೆಗಳನ್ನು ನೀಡಬಹುದು. ನಿಮಗೆ ಸ್ವಲ್ಪ ಟೆನ್ಶನ್ ಕೂಡ ಇರುತ್ತದೆ. ಯಾರೊಬ್ಬರ ಸ್ಥಿತಿಯನ್ನು ಒಪ್ಪಿಕೊಳ್ಳುವ ಮೂಲಕ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಹಾನಿಕಾರಕವಾಗಿದೆ. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ

ಇಂದು ನೀವು ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ.ಮಕ್ಕಳ ಕಂಪನಿಯ ಕಡೆಗೆ ನೀವು ವಿಶೇಷ ಗಮನವನ್ನು ನೀಡಬೇಕು, ನಿಮ್ಮ ತಂದೆಯು ಮನಸ್ಸಿನ ಬಯಕೆಯನ್ನು ನಿಮಗೆ ತಿಳಿಸುತ್ತಾರೆ, ಅದನ್ನು ನೀವು ಪೂರೈಸಬೇಕು.(ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಧನಸ್ಸು ರಾಶಿ

ಇಂದು ನಿಮಗೆ ತುಂಬಾ ಫಲಪ್ರದವಾಗಲಿದೆ. ಬೆಳಿಗ್ಗೆಯಿಂದ ಒಳ್ಳೆಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ, ನಿಮ್ಮ ಹಣವು ವ್ಯವಹಾರದಲ್ಲಿ ದ್ವಿಮುಖ ಗೊಳ್ಳುತ್ತಿರುವುದು ನಿಮ್ಮನ್ನು ಸಂತೋಷವಾಗಿರಿಸುತ್ತದೆ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಇಂದು ಕೂಡ ವ್ಯಾಪಾರದಲ್ಲಿ, ನಿರೀಕ್ಷಿಸಿದ ಪ್ರಮಾಣದ ಲಾಭವನ್ನು ಪಡೆಯುತ್ತಿರಿ. ಮಕ್ಕಳ ಕಡೆಯಿಂದ ಕೆಲವು ಸಂತಸದ ಸುದ್ದಿಗಳನ್ನು ಕೇಳಬಹುದು. (ಭಕ್ತಿಯಿಂದ ಶ್ರೀ ಕುಮಾರಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕುಂಭ ರಾಶಿ

ನೀವು ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಬಹಳ ಸಮಯದಿಂದ ಕಾಯುತ್ತಿರುವ ಹಳೆಯ ಸ್ನೇಹಿತನನ್ನು ಭೇಟಿಯಾಗುತ್ತೀರಿ. ಹೊಸದಾಗಿ ಮದುವೆಯಾದವರ ಜೀವನದಲ್ಲಿ ಹೊಸ ಅತಿಥಿಯ ಆಗಮನ ಆಗಬಹುದು. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ

ನಿಮ್ಮ ಮುಂದೆ ಅನೇಕ ರೀತಿಯ ತೊಡಕುಗಳು ಬರುತ್ತದೆ, ಆದರೆ ಆ ಗೊಂದಲ ಗಳಿಗೆ ಹೆದರದೆ ನಿಮ್ಮ ಹೂಡಿಕೆಯ ಮಾರ್ಗಗಳನ್ನು ನೀವು ಕಂಡುಕೊಳ್ಳುತ್ತಿರಿ, ಆ ಧೈರ್ಯದಿಂದಲೇ ನೀವು ಲಾಭಗಳಿಸಲು ಸಾಧ್ಯವಾಗುತ್ತದೆ. (ಭಕ್ತಿಯಿಂದ ಶ್ರೀ ಶಾರದಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತಿಥಿ: ಏಕಾದಶಿ
ನಕ್ಷತ್ರ: ಆಶ್ಲೇಷ ನಕ್ಷತ್ರ.

ರಾಹುಕಾಲ: 04:30PM ರಿಂದ 06:00PM
ಗುಳಿಕಕಾಲ: 03:00PM ರಿಂದ 04:30PM
ಯಮಗಂಡಕಾಲ: 12:00PM ರಿಂದ 01:30PM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ದೊಡ್ಡಬಳ್ಳಾಪುರ: ಟೌನ್ ಪೊಲೀಸ್ ಠಾಣೆ ಮುಂದೆ ಹಿಂದೂ ಪರ ಕಾರ್ಯಕರ್ತರ ದಿಢೀರ್ ಪ್ರತಿಭಟನೆ..!
ದೊಡ್ಡಬಳ್ಳಾಪುರ: ನಗರದಲ್ಲಿ ನಡೆಯಲಿರುವ ಬೃಹತ್ ಶ್ರೀರಾಮ ಶೋಭಾಯಾತ್ರೆಗೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗಳದ ಕಾರ್ಯಕರ್ತರು ಹಾಗೂ ಹಿಂದೂ ಪರ ಕಾರ್ಯಕರ್ತರು (Hindu activists) ನಗರದ ಪೊಲೀಸ್ ಠಾಣೆ ಮುಂದೆ (Town Police Station) ಪ್ರತಿಭಟನೆ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗುತ್ತಿದೆ.

ದೊಡ್ಡಬಳ್ಳಾಪುರ ನಗರದಲ್ಲಿ ನಡೆಯಲಿರುವ ಶ್ರೀ ರಾಮ ಶೋಭಾಯಾತ್ರೆಗೆ ಅಡ್ಡಿಪಡಿಸುತ್ತಾ, ತೊಂದರೆ ನೀಡುತ್ತಿದ್ದಾರೆಂದು ಆರೋಪಿಸುತ್ತಿರುವ ಪ್ರತಿಭಟನಾಕಾರರು, ಪೊಲೀಸ್ ಠಾಣೆಯ ಮುಂದಿನ ರಸ್ತೆಯಲ್ಲಿ ಕುಳಿತು ದಿಕ್ಕಾರ ಕೂಗುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಪ್ರತಿಭಟನಾನಿರತರು ಪೊಲೀಸ್ ಠಾಣೆ ಮುಂದೆ ಕುಳಿತಿದ್ದಾರೆ.

ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ನರೇಶ್ ರೆಡ್ಡಿ, ಶ್ರೀರಾಮ ಶೋಭಾಯಾತ್ರೆಯಲ್ಲಿ ಭಕ್ತಿ ಗೀತೆ ಹಾಕಲು ಧ್ವನಿವರ್ಧಕ ಬಳಸುವುದನ್ನು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಹಿಂದೂ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲೆಂದು ಧ್ವನಿವರ್ಧಕ ನಿಷೇಧಿಸಿದ್ದಾರೆ, ಅಲ್ಲದೆ ಬಳಸಿದರೆ ವಶ ಪಡಿಸಿಕೊಳ್ಳುವ, ಬಂಧಿಸುವ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

47 ವಿವಿಧ ಪ್ರಕರಣ: 111 ಕೆಜಿ ಗಾಂಜಾ ನಾಶ..!
ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು (Ganja) ಬೆಂಗಳೂರು ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾ&ತ) ಅಧ್ಯಕ್ಷತೆಯಲ್ಲಿ ಸೆಂಚುರಿ ರೀಫೈನರೀಸ್ ಪ್ರೈ.ಲಿಮಿಟೆಡ್, ಫ್ಲ್ಯಾಟ್ ನಂ.17A & B, KIADB ಇಂಡಸ್ಟ್ರಿಯಲ್ ಏರಿಯಾ, ಹೊಸಕೋಟೆ ಯಲ್ಲಿ ನಾಶಪಡಿಸಲಾಗಿದೆ.

ಈ ಸಂಧರ್ಭದಲ್ಲಿ ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಡಾ.ಸಿ ಎಚ್ ಬಾಲಕೃಷ್ಣ, ಗ್ರಾಮಾಂತರ ಅಬಕಾರಿ ಉಪ ಆಯುಕ್ತರಾದ ಎಂ ರವೀಂದ್ರ, ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತರಾದ ಜಿ.ಪಿ ನರೇಂದ್ರ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಅಬಕಾರಿ ಉಪ ಆಯುಕ್ತ ಎಸ್ ಬಸವರಾಜ್, ತುಮಕೂರು ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಭರತೇಶ್ ಸೇರಿದಂತೆ ಅಬಕಾರಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಮೂರು ಕರಡಿಗಳ ಯಶಸ್ವಿ ಸೆರೆ
ಬಳ್ಳಾರಿ: ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಟೌನ್‌ಶಿಪ್ ವ್ಯಾಪ್ತಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ಬೀಡುಬಿಟ್ಟಿದ್ದ ತಾಯಿ ಕರಡಿ ಹಾಗೂ ಎರಡು ಮರಿಗಳನ್ನು (Bears) ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ‘ಆಟೋಮ್ಯಾಟಿಕ್ ಮೊಬೈಲ್ ಆಪ್ ಆಧಾರಿತ ಕೇಜ್ ಲಾಕಿಂಗ್ ಸಿಸ್ಟಮ್’ ಬಳಸುವ ಮೂಲಕ ಮೂರೂ ಕರಡಿಗಳನ್ನು ಏಕಕಾಲಕ್ಕೆ ಬಂಧಿಸಿರುವುದು ವಿಶೇಷವಾಗಿದೆ.

ಕಳೆದ ಸುಮಾರು 10 ತಿಂಗಳಿನಿಂದ ಈ ಕರಡಿಗಳ ಕುಟುಂಬ ಜಿಂದಾಲ್ ವಿದ್ಯಾನಗರ ಟೌನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದರೂ, ಅರಣ್ಯ ಇಲಾಖೆಯ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿರಲಿಲ್ಲ.

ವನ್ಯಜೀವಿ ವಿಭಾಗದ ಪಿಸಿಸಿಎಫ್ ಅವರ ಆದೇಶದನ್ವಯ, ಬಳ್ಳಾರಿ ಡಿಸಿಎಫ್ ಕೆ.ಎನ್.ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಎಸಿಎಫ್ ಶರಣ್ ಕುಮಾರ್, ಆರ್‌ಎಫ್‌ಒಗಳಾದ ಸಯ್ಯದ್ ದಾದಾ ಖಲಂದರ್ ಮತ್ತು ಮಂಜುನಾಥ್, ಡಿಆರ್‌ಎಫ್‌ಒಗಳಾದ ಮೋಹನ್ ಹಾಗೂ ಗುರುಸ್ವಾಮಿ, ಬಿಎಫ್‌ಒಗಳಾದ ವೆಂಕಟೇಶ್ ಮತ್ತು ಶ್ರೀಧರ್ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಇವರಿಗೆ ಪಶುವೈದ್ಯರಾದ ಡಾ. ಪ್ರಕೃತಿ ಹಾಗೂ ವೈಲ್ಡ್ ಲೈಫ್ ಎಸ್‌ಒಎಸ್ ಎನ್‌ಜಿಒ ಸಂಸ್ಥೆಯವರು ಸಾಥ್ ನೀಡಿದ್ದರು.
ಸೆರೆಹಿಡಿದ ತಾಯಿ ಕರಡಿಗೆ ಮುಂದಿನ ದಿನಗಳಲ್ಲಿ ಅದರ ಚಲನವಲನದ ಮೇಲೆ ನಿಗಾ ಇಡಲು ‘ರೇಡಿಯೋ ಕಾಲರ್’ ಅಳವಡಿಸಲಾಗಿದೆ.

ನಂತರ ಮೇಲಾಧಿಕಾರಿಗಳ ಸೂಚನೆಯಂತೆ, ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿ ಹಾಗೂ ಮರಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಅವರು ತಿಳಿಸಿದ್ದಾರೆ.

ಹಣ್ಣಿನ ಚಿತ್ರ ಬಳಸಿ ಫ್ರುಟ್ ಜ್ಯೂಸ್ ಮಾರಾಟ: ಕರಾಳ ಸತ್ಯ ಬಯಲು ಮಾಡಿದ ರಾಘವ್ ಚಡ್ಡಾ
ನವದೆಹಲಿ; ಇತ್ತೀಚೆಗಷ್ಟೇ ಟೆಲಿಕಾಂ ಸಂಸ್ಥೆಗಳ ಹಗಲು ದರೋಡೆ ಬಯಲು ಮಾಡಿದ್ದ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Raghav Chadha) ಅವರು, ಈಗ ಜನರ ದಾರಿತಪ್ಪಿಸುತ್ತಿರುವ ದೊಡ್ಡ ದೊಡ್ಡ ಆಹಾರ ಬ್ರಾಂಡ್‌ಗಳ ಕರಾಳ ಸತ್ಯವನ್ನು ಬಯಲು ಮಾಡುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಹೌದು ಈ ಕುರಿತು ಸದನದಲ್ಲಿ ಪ್ರಶ್ನಿಸಿರುವ ಅವರು, ತಾಜಾ ಜ್ಯೂಸ್ ಎಂದು ಹಣ್ಣುಗಳ ಚಿತ್ರಗಳನ್ನು ಬಾಟಲ್ ಹಾಗೂ ಟೆಟ್ರಾ ಪ್ಯಾಕೆಟ್ ಮೇಲೆ ಮುದ್ರಿಸಿ ಮಾರಾಟ ಮಾಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಇವುಗಳಲ್ಲಿ ಅನೇಕ ಉತ್ಪನ್ನಗಳು “ಸಕ್ಕರೆ ಸಿರಪ್‌ಗಳು” ಎಂದು ಎತ್ತಿ ತೋರಿಸಿದರು‌‌.

You think you’re drinking Fruit Juice? THINK AGAIN.
Big food brands are selling sugar water with shiny ‘fresh fruit’ pictures on the front. And hiding the truth in tiny fine print at the back of packet which reads ‘Pictures for marketing purposes only’. SERIOUSLY?

Today in… pic.twitter.com/ROu2YGH3G2
— Raghav Chadha (@raghav_chadha) March 24, 2026

ಭಾರತದ ಗ್ರಾಹಕ ಮಾರುಕಟ್ಟೆಯು ಅನಾರೋಗ್ಯದಿಂದ ಕೂಡಿದ್ದು, ಜನರನ್ನು ದಾರಿತಪ್ಪಿಸುವ ಬ್ರ್ಯಾಂಡಿಂಗ್ ಮತ್ತು ಸುಳ್ಳು ಜಾಹೀರಾತು ಎಂದು ಕರೆಯಲಾಗುತ್ತದೆ.

ನಾವು ಹಣ್ಣಿನ ರಸದ ಬಾಟಲಿಯನ್ನು ಖರೀದಿಸಿದಾಗ ಮುಂಭಾಗದಲ್ಲಿ ತಾಜಾ ಹಣ್ಣಿನ ಚಿತ್ರಗಳು ಮುದ್ರಿಸಲಾಗುತ್ತಿದೆ. ಆದರೆ ಹಿಂಭಾಗದಲ್ಲಿ ಸಣ್ಣ ಅಕ್ಷರದಲ್ಲಿ ಈ ಚಿತ್ರವು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಮಾತ್ರ ಎಂದು ಹೇಳುತ್ತದೆ.

ಇದರಿಂದಾಗಿ ನಮ್ಮ ದೇಶದ ಗ್ರಾಹಕರು, ವಿಶೇಷವಾಗಿ ಯುವಜನರು ಈ ಪಾನೀಯಗಳು ಆರೋಗ್ಯಕರವೆಂದು, ಪೌಷ್ಟಿಕವೆಂದು ತಪ್ಪಾಗಿ ಭಾವಿಸಿ ಸೇವಿಸುತ್ತಿದ್ದಾರೆ. ಆದರೆ ಇದು ಅವರಲ್ಲಿ ಮಧುಮೇಹ, ಬೊಜ್ಜುತನ, ಇನ್ನಿತರೆ ರೋಗಗಳಿಗೆ ಒಳಪಡುತ್ತಿದ್ದಾರೆ.

ಈ ರೀತಿ ಹೆಚ್ಚಿನ ಸಕ್ಕರೆ ಅಂಶವಿರುವ ಉತ್ಪನ್ನಗಳ ವಿವರಗಳನ್ನು ಪ್ಯಾಕೆಟ್‌ನ ಮುಂಭಾಗದಲ್ಲಿ ಪ್ರಕಟಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

ಉತ್ಪನ್ನ ವರ್ಗದ ಬಗ್ಗೆ ಸ್ಪಷ್ಟತೆ ಕೋರಿದ ಚಡ್ಡಾ, ಉತ್ಪನ್ನಗಳನ್ನು ನಿಜವಾದ ಹಣ್ಣಿನ ರಸ ಮತ್ತು ಸಕ್ಕರೆ, ಸಾಂದ್ರೀಕೃತ ಪಾನೀಯಗಳು ಮತ್ತು ಸಂರಕ್ಷಕಗಳಿಂದ ತಯಾರಿಸಿದ ಪಾನೀಯಗಳ ನಡುವೆ ವರ್ಗೀಕರಿಸಬೇಕೆಂದು ಕರೆ ನೀಡಿದರು.

ಸಂಸತ್ತಿನಲ್ಲಿ ಮಾತನಾಡಿದ ನಂತರ, “ನೀವು ಹಣ್ಣಿನ ರಸ ಕುಡಿಯುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಾ? ಮತ್ತೊಮ್ಮೆ ಯೋಚಿಸಿ. ದೊಡ್ಡ ಆಹಾರ ಬ್ರಾಂಡ್‌ಗಳು ಮುಂಭಾಗದಲ್ಲಿ ಹೊಳೆಯುವ ‘ತಾಜಾ ಹಣ್ಣು’ ಚಿತ್ರಗಳೊಂದಿಗೆ ಸಕ್ಕರೆ ನೀರನ್ನು ಮಾರಾಟ ಮಾಡುತ್ತಿವೆ” ಎಂದು ಚಡ್ಡಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ದಾರಿತಪ್ಪಿಸುವ ಬ್ರ್ಯಾಂಡಿಂಗ್ ಲಕ್ಷಾಂತರ ಜನರನ್ನು, ವಿಶೇಷವಾಗಿ ಮಕ್ಕಳನ್ನು ಮಧುಮೇಹ ಮತ್ತು ಜೀವನಶೈಲಿ ಕಾಯಿಲೆಗಳಿಗೆ ತಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಗ್ರಾಹಕರನ್ನು ರಕ್ಷಿಸಲು ಮತ್ತು ಬ್ರ್ಯಾಂಡಿಂಗ್ ಮತ್ತು ಜಾಹೀರಾತು ಪದ್ಧತಿಗಳು ಸತ್ಯವಾದವುಗಳಾಗಿದ್ದು, ಕಾನೂನು ಬಾಹಿರವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚಡ್ಡಾ ಅವರು ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ‌‌.

ದೊಡ್ಡಬಳ್ಳಾಪುರ: ಶಿಕ್ಷಕಿ ಸರಸ್ವತಿ ಅವರಿಗೆ ಅನುಪಮಾ ಸೇವಾ ಪ್ರಶಸ್ತಿ..!
ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಸರಸ್ವತಿ ಸಿ.ಕೆ. (Teacher Saraswati C K) ಅವರಿಗೆ ಅನುಪಮಾ ಸೇವಾ ಪ್ರಶಸ್ತಿ (Anupama Seva Award) ನೀಡಿ ಗೌರವಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸರಸ್ವತಿ ಸಿ.ಕೆ. ಅವರಿಗೆ ಅನುಪಮಾ ಸೇವಾ ಪ್ರಶಸ್ತಿ ನೀಡಲಾಗಿದೆ.

ತಮ್ಮ ಸೇವಾವಧಿಯಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ, ಅನುಪಮಾ ಸೇವಾ ಪ್ರಶಸ್ತಿಯನ್ನು ಸಹ ಶಿಕ್ಷಕಿ ಸರಸ್ವತಿ ಅವರಿಗೆ ನೀಡಿ, ಸನ್ಮಾನಿಸಿ, ಅಭಿನಂದಿಸಲಾಗಿದೆ.

ದೊಡ್ಡಬಳ್ಳಾಪುರ: ಅಪಘಾತ.. ತಮ್ಮನ ಮನೆಗೆ ಬರುತ್ತಿದ್ದ ಮಹಿಳೆ ದುರ್ಮರಣ
ದೊಡ್ಡಬಳ್ಳಾಪುರ: ಶ್ರೀರಾಮನವಮಿ ಹಬ್ಬಕ್ಕೆಂದು ತಮ್ಮನ ಮನೆಗೆ ಬರುತ್ತಿದ್ದ ಮಹಿಳೆಗೆ, ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಹಮಾಮ್ ಗೇಟ್ ಬಳಿ ಗುರುವಾರ ರಾತ್ರಿ ನಡೆದಿದೆ.

ಮೃತ ಮಹಿಳೆಯನ್ನು ಕೋಲಾರದ ಲಕ್ಷ್ಮೀದೇವಮ್ಮ (59 ವರ್ಷ) ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ಕೋಲಾರದಿಂದ ಬಾಶೆಟ್ಟಿಹಳ್ಳಿಯಲ್ಲಿರುವ ತಮ್ಮನ ಮನೆಗೆ ಶ್ರೀರಾಮನವಮಿ ಹಬ್ಬಕ್ಕೆಂದು ಗುರುವಾರ ರಾತ್ರಿ ಬಸ್ ಇಳಿದು, ಹಮಾಮ್ ಗೇಟ್ ಬಳಿ ರಸ್ತೆ ದಾಟುವ ವೇಳೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ.

ಪರಿಣಾಮ ಲಕ್ಷ್ಮೀದೇವಮ್ಮ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದಿದ್ದಾರೆ.