ಹರಿಹರದಲ್ಲಿ ಗೃಹ ಮಂಡಳಿಯಿಂದ ಸುಸಜ್ಜಿತ ಬಡಾವಣೆ ನಿರ್ಮಾಣ: ವಿ.ಸೋಮಣ್ಣ

ದಾವಣಗೆರೆ: ಸೋಮವಾರ ಹರಿಹರ ನಗರದ ಶೋರಾಪುರ ಗ್ರಾಮದಲ್ಲಿ ಗೃಹ ಮಂಡಳಿಯ ವಶದಲ್ಲಿರುವ ಜಮೀನು ಸ್ಥಳವನ್ನು ವಸತಿ ಸಚಿವರಾದ ವಿ. ಸೋಮಣ್ಣ ಪರಿವೀಕ್ಷಣೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಸಮೀಪದ ಶೋರಾಪುರದಲ್ಲಿ ಸುಮಾರು 54 ಎಕರೆ ಜಮೀನಿನಲ್ಲಿ ಒಂದು ಮಾದರಿ ಬಡಾವಣೆಯನ್ನು ಗೃಹ ಮಂಡಳಿಯಿಂದ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳು 20ರೊಳಗಾಗಿ ಕೆಲಸದ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಈ ಬಡಾವಣೆ ಮನೆಗಳಿಗಾಗಿ 35 ಸಾವಿರ ಅರ್ಜಿ ಬಂದಿವೆ. ಆದರೆ ಇದರಲ್ಲಿ 800 ರಿಂದ 900 ಸೈಟ್‍ಗಳಾಗುತ್ತವೆ. ಅದೇ ರೀತಿ ಶಾಸಕರು 8 ಎಕರೆ ಜಾಗ ಇದೆ. ಬಡವರಿಗಾಗಿ ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿದ್ದಾರೆ. ಬಡವರಿಗೆ ಅನುಕೂಲವಾಗುತ್ತದೆ ಎಂದರೆ ನೋಡಣಾ. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ಮಾಡಿ ಬಡವರಿಗೆ ಮನೆ ಕೊಡಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಸೂರಿಲ್ಲದವರಿಗೆ 2022ರೊಳಗಾಗಿ ಪ್ರತಿಯೊಬ್ಬರಿಗೂ ಒಂದು ಸೂರು ಒದಗಿಸುವ ಚಿಂತನೆಗೆ ಸುಮಾರು 10 ಲಕ್ಷ ಮನೆಗಳನ್ನು ಇನ್ನೂ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಮುಗಿಸಲು ಕ್ರಿಯಾ ಯೋಜನೆ ಮಾಡಿ ಕೆಲಸ ಕೂಡ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಪ್ರತಿಯೊಬ್ಬ ಬಡವರಿಗೂ ಮನೆ ಒದಗಿಸಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಅದಕ್ಕಾಗಿ ನಾವು 4,535 ಎಕರೆ ಜಾಗವನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿಕೊಂಡಿದ್ದು,. 1.20 ಲಕ್ಷ ಸೈಟ್‍ಗಳನ್ನು ನಾಲ್ಕೈದು ತಿಂಗಳಲ್ಲಿ ಬೇಕಾದಂದಹ ಮೂಲಭೂತ ಸೌಕರ್ಯ ಒದಗಿಸಿ ಹಂಚುವ ಕೆಲಸ ಮಾಡಲಾಗುವುದು. 30 ವರ್ಷದಲ್ಲಿ ಇಡೀ ರಾಜ್ಯದಲ್ಲಿ 3 ಲಕ್ಷ ಸೈಟ್ ಕೊಡಲಾಗಿದೆ. ಆದರೆ 1.20 ಲಕ್ಷ ಸೈಟ್‍ಗಳನ್ನು ಇನ್ನು ಐದರಿಂದ ಆರು ತಿಂಗಳಲ್ಲಿ ಬಡವರಿಗೆ ನೀಡಲ್ಲಿದ್ದೇವೆ ಎಂದ ಅವರು, ಕೋವಿಡ್-19 ಕಡಿಮೆಯಾದ ಮೇಲೆ ಕೆಲಸ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.

ಯುಎಲ್‍ಬಿ ಜಾಗಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಅದರಡಿಯಲ್ಲಿ ಈ ಬಾರಿ ರಾಜೀವ್‍ಗಾಂಧಿ ಯೋಜನೆಯಿಂದ 69 ಸಾವಿರ ಮನೆಗಳನ್ನು ಕಟ್ಟಲು ರಾಜ್ಯದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರು ಹಾಗೂ ಮೈಸೂರು ಹೊರತುಪಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಾಗಲೇ ಸಂಡೂರಿನಲ್ಲಿ 2 ಸಾವಿರ ಮನೆ, ನಿಪ್ಪಾಣಿಯಲ್ಲಿ 1,600 ಮನೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 3 ಸಾವಿರ ಮನೆ ಸೇರಿದಂತೆ ಅನೇಕ ಕಡೆ ಕೆಲಸ ಶುರು ಮಾಡಲಾಗಿದೆ. ಅದರಂತೆ ಇಲ್ಲಿ ಕೂಡ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಈಗಾಗಲೇ ಬಿ ಖಾತೆಯಲ್ಲಿರುವ ಮನೆಗಳನ್ನು ಎ ಖಾತೆ ಮಾಡಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರಸಭೆಗೆ ಹಣ ಬರುತ್ತದೆ. ಮಾಡುವುದಕ್ಕೆ ತೊಂದರೆ ಏನು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು, ಈ ಬಗ್ಗೆ ಕೂಡಲೇ ಪ್ರಪೋಸಲ್ ಮಾಡಿ ಕಳುಹಿಸಿ ಕೊಡಿ ಎಂದರು.

ಅವಾಸ್ ಯೋಜನೆಯಲ್ಲಿ ಮನೆ ಕಟ್ಟಿದವರಿಗೆ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಈಗ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ 5,40 ಲಕ್ಷ ಹಾಗೂ ಪಟ್ಟಣ ಪ್ರದೇಶದಲ್ಲಿ 4,60 ಲಕ್ಷ ಮನೆಗಳಿಗೆ ಹೊರತುಪಡಿಸಿ ಬೇರೆ ಮನೆಗಳಿಗೆ ಹಣ ಬಿಡುಗಡೆ ಮಾಡಲಾಗುವುದಿಲ್ಲ. ಇನ್ನುಳಿದಂತೆ ಒಂದೂವರೆ ವರ್ಷದಲ್ಲಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಮಪ್ಪ, ಮಾಜಿ ಶಾಸಕ ಹರೀಶ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

                    *************

ರಾಜಕೀಯ

ನೇಕಾರರ ಭವನ ಶಂಕುಸ್ಥಾಪನೆ.. ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆಯ ಬಿಸಿ.. ಸಂಪೂರ್ಣ ವರದಿ ಇಲ್ಲಿದೆ.

ನೇಕಾರರ ಭವನ ಶಂಕುಸ್ಥಾಪನೆ.. ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆಯ ಬಿಸಿ.. ಸಂಪೂರ್ಣ ವರದಿ ಇಲ್ಲಿದೆ.

ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿಕೊಂಡು ದೊಡ್ಡಬಳ್ಳಾಪುರ (Doddaballapura) ನಗರದ ಪ್ರವಾಸಿ ಮಂದಿರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

[ccc_my_favorite_select_button post_id="118224"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸ್ಮಶಾನದ ಬಳಿ ಯುವಕನ ಶವ ಪತ್ತೆ.. ಹತ್ಯೆ ಶಂಕೆ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸ್ಮಶಾನದ ಬಳಿ ಯುವಕನ ಶವ ಪತ್ತೆ.. ಹತ್ಯೆ ಶಂಕೆ

ಬಾಶೆಟ್ಟಿಹಳ್ಳಿ ಸ್ಮಶಾನದ ಬಳಿ ಯುವಕನ ಶವ ಪತ್ತೆಯಾಗಿದ್ದು, ಹತ್ಯೆ ಶಂಕೆ (Murder (Suspected) ವ್ಯಕ್ತವಾಗಿದೆ.

[ccc_my_favorite_select_button post_id="118057"]
ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಮಹಿಳೆಗೆ ತೀವ್ರ ಗಾಯ

ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಮಹಿಳೆಗೆ ತೀವ್ರ ಗಾಯ

ಇತ್ತೀಚೆಗಷ್ಟೇ ಜೆಸಿಬಿಗೆ (JCB) ಕಾರು (Car) ಡಿಕ್ಕಿ ಹೊಡೆದಿದ್ದ ಘಟನೆ ಮಾಸುವ ಮುನ್ನವೇ, ಅದೇ ಸ್ಥಳದಲ್ಲಿ ಕಾರು ಮಹಿಳೆಗೆ ಡಿಕ್ಕಿ ಹೊಡೆದು (Accident) ಪರಾರಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಮೆಣಸಿ ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="118137"]

ಆರೋಗ್ಯ

ಸಿನಿಮಾ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕ ಪ್ರಕಾಶ್ ರಾಜ್ (Prakash Raj) ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ.

[ccc_my_favorite_select_button post_id="117722"]
error: Content is protected !!