ದೊಡ್ಡಬಳ್ಳಾಪುರ: ನಗರದ 79 ವರ್ಷದ ವ್ಯಕ್ತಿಯೋರ್ವರು ಕರೊನಾ ಸೋಂಕಿನಿಂದ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು,ತಾಲೂಕಿನಲ್ಲಿ ಕರೊನಾದಿಂದ ಸಾವನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಉಳಿದಂತೆ ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ.ಶುಕ್ರವಾರದ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 13 ಮಂದಿ ಗಂಡು ಹಾಗೂ 15 ಮಂದಿ ಮಹಿಳೆಯರು ಸೇರಿ 28 ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ಚಿಕ್ಕಹೆಜ್ಜಾಜಿ 4, ತೂಬಗೆರೆಪೇಟೆ 4, ಐನಹಳ್ಳಿ 2, ತಾಲೂಕು ಕಚೇರಿ ರಸ್ತೆ 2, ಕೋಡಿಪಾಳ್ಯ 4 ಸೇರಿದಂತೆ ಮಾರುತಿನಗರ, ಶಾಂತಿನಗರ, ದೊಡ್ಡಬೆಳವಂಗಲ, ಟಿಬಿ ವೃತ್ತ, ದೊಡ್ಡತುಮಕೂರು, ಪ್ರಿಯದರ್ಶಿನಿ ಬಡಾವಣೆ, ಶಾಂತಿನಗರದ ಮುಕ್ತಾಂಭಿಕ ಬಡಾವಣೆ ಮೂರನೆ ರಸ್ತೆ, ಶ್ರೀನಗರ, ರೋಜಿಪುರ, ಖಾಸ್ ಭಾಗ್, ಸೋಮೇಶ್ವರ ಬಡಾವಣೆ, ನರಸಯ್ಯನ ಅಗ್ರಹಾರದಲ್ಲಿ ತಲಾ ಓರ್ವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 616 ಮಂದಿ ಸೋಂಕು ತಗುಲಿದ್ದು,281 ಮಂದಿ ಗುಣಮುಖರಾಗಿದ್ದರೆ 17 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 34 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 284 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						