ದೊಡ್ಡಬಳ್ಳಾಪುರ: ಮಳೆಯಿಂದಾಗಿ ಶಾಲೆಯ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಮರಳೇನಹಳ್ಳಿಯಲ್ಲಿ ಸಂಭವಿಸಿದೆ.
ಮರಳೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಭಾನುವಾರ ಸಂಜೆ ಸುರಿದ ಮಳೆಯ ಹಿನ್ನೆಲೆ ತಡರಾತ್ರಿ ಕುಸಿದು ಬಿದ್ದಿದೆ.
ಸುಮಾರು 40ವರ್ಷದ ಹಿಂದೆ ನಿರ್ಮಿಸಿದ್ದ ಶಾಲಾ ಕಟ್ಟಡದ ಮೇಲ್ಛಾವಣಿ ಶಿಥಿಲವಾಗಿತ್ತು ಎಂದು ಶಿಕ್ಷಣ ಇಲಾಖೆಯ ಮೂಲಗಳು ಹರಿತಲೇಖನಿಗೆ ತಿಳಿಸಿದ್ದರೆ,ಕಳೆಪೆ ಕಾಮಗಾರಿ ಎನ್ನುವ ಆರೋಪ ಸ್ಥಳೀಯರದ್ದು.
ಘಟನೆ ರಾತ್ರಿ ಸಂಭವಿಸಿರುವ ಕಾರಣ ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.