ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಬುಧವಾರದ ಸಂಜೆಯಿಂದ ಗುರುವಾರದ ಸಂಜೆಯವರೆಗೆ ಮೂವತ್ತೊಂದು ಜನರಿಗೆ ಕರೊನಾ ಸೊಂಕು ದೃಡಪಟ್ಟಿರುವ ಬೆನ್ನಲ್ಲೆ,26 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ.ಗುರುವಾರ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 12 ಪುರುಷರು ಹಾಗೂ 19 ಮಂದಿ ಮಹಿಳೆಯರು ಸೇರಿ ಮೂವತ್ತೊಂದು ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ಬ್ಯಾಂಕ್ ಸರ್ಕಲ್ 7, ಮಜರಾಹೊಸಹಳ್ಳಿಯಲ್ಲಿ 4,(ತಾಂತ್ರಿಕ ಕಾರಣದಿಂದ ಬುಲೆಟಿನಲ್ಲಿ ಮಜರಾಹೊಸಹಳ್ಳಿಯಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಮುದ್ರಣವಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹರಿತಲೇಖನಿಗೆ ಸ್ಪಷ್ಟನೆ ನೀಡಿದ್ದಾರೆ) ಉಳಿದಂತೆ ವನ್ನಿಗರಪೇಟೆ 3, ರೈಲ್ವೆ ಸ್ಟೇಷನ್, ಅರೆಹಳ್ಳಿ ಗುಡ್ಡದಹಳ್ಳಿ, ಸೊಣ್ಣೆನಹಳ್ಳಿ,ಬಂಕೇನಹಳ್ಳಿ, ಕೊಂಗಾಡಿಯಪ್ಪ ಕಾಲೇಜು ರಸ್ತೆ,ಸೂಲುಕುಂಟೆ, ದಾಸಗೊಂಡನಹಳ್ಳಿ, ವೀರಾಪುರ, ದರ್ಜಿಪೇಟೆ, ಕರೇನಹಳ್ಳಿ, ಕಾಲೇಜು ರಸ್ತೆ, ದೇವರಾಜ ನಗರ, ಗಂಗಾಧರಪುರ, ಮುತ್ಯಾಲಯ ದೇವಸ್ಥಾನದ ಸಮೀಪ, ಬಾಶೆಟ್ಟಿಹಳ್ಳಿ, ಶಾಂತಿನಗರ ಹಾಗೂ ಕುವೆಂಪು ನಗರದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 721 ಮಂದಿಗೆ ಸೋಂಕು ತಗುಲಿದ್ದು,409 ಮಂದಿ ಗುಣಮುಖರಾಗಿದ್ದರೆ 19 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 304 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 259 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
 
				 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						