ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 36ಮಂದಿ ಕರೊನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ತಾಲೂಕಿನಲ್ಲಿ ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ 445ಕ್ಕೆ ಏರಿಕೆಯಾಗಿದ್ದು,ಇಂದು 29ಮಂದಿಗೆ ಸೋಂಕು ಧೃಡ ಪಟ್ಟಿದೆ
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ.ಶುಕ್ರವಾರ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 16ಪುರುಷರು ಹಾಗೂ 13 ಮಂದಿ ಮಹಿಳೆಯರು ಸೇರಿ ಇಪ್ಪತ್ತೊಂಬತ್ತು ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ಬಾಶೆಟ್ಟಿಹಳ್ಳಿ 6, ಮಜರಾಹೊಸಹಳ್ಳಿ 6, ವನ್ನಿಗರಪೇಟೆ 4, ದರ್ಜಿಪೇಟೆ 3 ಸೇರಿದಂತೆ.ಸರ್ಕಾರಿ ಆಸ್ಪತ್ರೆಯ ಕ್ವಾಟ್ರಸ್, ವಿದ್ಯಾನಗರ, ಕೋಟೆ ರಸ್ತೆ, ತ್ಯಾಗರಾಜ ನಗರ, ರಂಗಪ್ಪ ವೃತ್ತ, ರೋಜಿಪುರ, ದರ್ಗಾಜೋಗಹಳ್ಳಿ, ಕರೇನಹಳ್ಳಿ, ದೇವರಾಜನಗರ ಹಾಗೂ ಇಸ್ಲಾಂಪುರದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 750 ಮಂದಿಗೆ ಸೋಂಕು ತಗುಲಿದ್ದು,445 ಮಂದಿ ಗುಣಮುಖರಾಗಿದ್ದರೆ 19 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 30 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 256 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
 
				 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						