ದೊಡ್ಡಬಳ್ಳಾಪುರ: ಕೋವಿಡ್ -19 ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ತೀರಾ ಹಿಂದುಳಿದು, ಸಂಕಷ್ಟದಲ್ಲಿರುವ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಡಜನರ ಹೊರೆ ಇಳಿಸದ ನಿರಾಶೆಯ ಬಜೆಟ್ ಮಂಡಿಸಿದ್ದಾರೆಂದು ಜಿಪಂ ಸ್ಥಾಯಿ ಸಮಿತಿ ಸದಸ್ಯೆ ಪದ್ಮಾವತಿ ಬಿ.ಮುನೇಗೌಡ ಹೇಳಿದ್ದಾರೆ.
ಬಜೆಟ್ – 2021ರ ಕುರಿತು ಹರಿತಲೇಖನಿಗೆ ಹೇಳಿಕೆ ನೀಡಿರುವ ಅವರು, ರಾಜ್ಯದ ಕೂಲಿ ಕಾರ್ಮಿಕರು, ಬಡವರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ನೇರವಾಗಬೇಕಾದ ಬಜೆಟ್ ನೀಡದೆ, ಮುಖ್ಯಮಂತ್ರಿಗಳು ನೀರಸವಾದ ಬಜೆಟ್ ನೀಡಿದ್ದಾರೆ.
ಕೆಲಸ ಕಳೆದುಕೊಂಡ ಕಾರ್ಮಿಕರು ಬಜೆಟ್ ಕಡೆ ಆಸೆಕಂಗಳನ್ನು ನೆಟ್ಟಿದ್ದರು, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ್ದ ರೈತರು, ಯುವಕರು, ಸಾಮಾನ್ಯ ವರ್ಗದ ಜನರ ಪರ ಕಾಳಜಿ ಬಜೆಟ್ ಗೂ ಈ ಬಾರಿಯ ಬಜೆಟ್ ಗೂ ತುಂಬಾ ವ್ಯತ್ಯಾಸವಿದೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..