ನವದೆಹಲಿ: ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಗುರಿಯಾಗಿಸಿ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoora) ದಾಳಿ ಕುರಿತು ಕೇಂದ್ರ ಸರ್ಕಾರ ಮುಂಚಿತವಾಗಿಯೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದು, ಇದು ಅಪರಾಧ ಎಂದು ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಮಾತುಗಳಿರುವ ವಿಡಿಯೊವೊಂದನ್ನು ‘ಟ್ವಿಟರ್ ಖಾತೆಯಲ್ಲಿ ಪೊಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಆಪರೇಷನ್ ಸಿಂಧೂರ’ ಕುರಿತು ಪಾಕಿಸ್ತಾನಕ್ಕೆ ಸರ್ಕಾರವೇ ಮಾಹಿತಿ ನೀಡಿರುವುದನ್ನು ಜೈಶಂಕರ್ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ’ ಆರೋಪಿಸಿದ್ದಾರೆ.
Informing Pakistan at the start of our attack was a crime.
— Rahul Gandhi (@RahulGandhi) May 17, 2025
EAM has publicly admitted that GOI did it.
1. Who authorised it?
2. How many aircraft did our airforce lose as a result? pic.twitter.com/KmawLLf4yW
ಅಲ್ಲದೇ, ಈ ಕಾರ್ಯಾಚರಣೆಯಿಂದಾಗಿ ವಾಯುಪಡೆಯು ಎಷ್ಟು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂದೂ ಪ್ರಶ್ನಿಸಿದ್ದಾರೆ.
ಈ ಆರೋಪಗಳನ್ನು ತಳ್ಳಿ ಹಾಕಿರುವ ವಿದೇಶಾಂಗ ಸಚಿವಾಲಯ, ‘ವಾಸ್ತವ ಸಂಗತಿಗಳನ್ನು ತಪ್ಪಾಗಿ ನಿರೂಪಿಸುವ ಯತ್ನ ಇದು’ ಎಂದು ಹೇಳಿದೆ.
ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ DGMO ಲೆ.ರಾಜೀವ್ ಘಾಯ್, ಆಪರೇಷನ್ ಸಿಂಧೂರ ಕೇವಲ ಭಯೋತ್ಪಾದಕರ ಮೇಲೆ ದಾಳಿಗೆ ಮುಂದಾಗಿರುವುದಾಗಿ, ಸಹಕಾರ ನೀಡುವಂತೆ ಹೇಳಿದ್ದೆವು, ಆದರೆ ಉಗ್ರರ ನಾಶಕ್ಕೆ ಪಾಕ್ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.