ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಮಾರಸಂದ್ರದ ಸುಮನ ವಿದ್ಯಾಸಂಸ್ಥೆ (CBSE) 2025-26ನೇ ಶೈಕ್ಷಣಿಕ ವರ್ಷದ 10ನೇ ತರಗತಿ ಫಲಿತಾಂಶದಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ವಹಣಾ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

ಈ ವರ್ಷ ವಿಶೇಷವಾಗಿ ಡಿಸ್ಟಿಂಕ್ಷನ್ ವಿಭಾಗದಲ್ಲಿ ಪ್ರೇರಣಾ ಕೃಷ್ಣ 94.20% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಫಲಿತಾಂಶದ ವಿವರ
ತನೂಷ್ಕಾ ಆರ್ – 93.40%
ಲಿಕಿತ್ ಕುಮಾರ್ ಎ – 87.60%
ಕುಸುಮಾ ಎಂ – 83.60%,
ಪ್ರಿಯದರ್ಶಿನಿ ಮೂರ್ತಿ – 82.80%
ಶಾಮಿತಾ ಪಿ -74.40%
ಪ್ರದೀಪ್ ಎಸ್‌ಎಂ – 72.40%
ನಿತಿನ್ ಬಿ ಎ – 71.40%
ತನೂಶ್ರೀ ಕೆ – 64.20%
ಈ ಸಾಧನೆಗೆ ಕಾರಣವಾದ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ಸಂಸ್ಥೆಯ ವತಿಯಿಂದ ಶ್ಲಾಘಿಸಿದೆ.
ಇದೇ ಸಂದರ್ಭದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರವೇಶಗಳು ಆರಂಭವಾಗಿದ್ದು, ಆಸಕ್ತ ಪೋಷಕರು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಾಸಲು ಚಿನ್ನಮ್ಮ ಉತ್ಸವಕ್ಕೆ ಕ್ಷಣಗಣನೆ.. ಪ್ರಚಾರ ತೀವ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿ ಕೇಂದ್ರದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲಾ ಆವರಣದಲ್ಲಿ ಏ.19 ರಂದು ಭಾನುವಾರ ನಡೆಯಲಿರುವ ಸಾಸಲು ಚಿನ್ನಮ್ಮ (Sasalu Chinnamma) ಉತ್ಸವಕ್ಕೆ ಕ್ಷಣಗಣನೆ ತೀವ್ರವಾಗಿದ್ದು, ಪ್ರಚಾರ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ.
ಸಾಸಲು ಹೋಬಳಿ ಚಿನ್ನಮ್ಮ ಉತ್ಸವ ಸಮಿತಿ ವತಿಯಿಂದ ಮೊದಲ ಬಾರಿಗೆ ನಡೆಯುತ್ತಿರುವ ಸಾಸಲು ಚಿನ್ನಮ್ಮ ಉತ್ಸವ-2026 ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಉದ್ಘಾಟಿಸಲಿದ್ದಾರೆ.
ಸಾಸಲು ಚಿನ್ನಮ್ಮ ಉತ್ಸವ ಏ.19ರ ಬೆಳಗ್ಗೆ 8 ಗಂಟೆಗೆ ಸಾದ್ವಿಮಣೆ ಸಾಸಲು ಚಿನ್ನಮ್ಮ ದೇವಾಲಯ ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ಸಾಸಲು ಚೆನ್ನಮ್ಮ ಉತ್ಸವ ವೇದಿಕೆ ತನಕ ಜಾನಪದ ಕಲಾ ತಂಡಗಳೊಂದಿಗೆ ಸಾಸಲು ಚಿನ್ನಮ್ಮ ಮೂರ್ತಿಯನ್ನು ಚಿಲಕಲ ಬಂಡಿ ಮೂಲಕ ಮೆರವಣಿಗೆ ನಡೆಯುತ್ತದೆ.
ಸಾಸಲು ಚಿನ್ನಮ್ಮ ಉತ್ಸವದ ಮುಖ್ಯ ವೇದಿಕೆಯಲ್ಲಿ ಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪನವರಿಂದ ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆ ಮಾಡುತ್ತಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಧೀರಾಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಿಮ್ಸ್ ಆಸ್ಪತ್ರೆ ಮಾಜಿ ಅಧ್ಯಕ್ಷ ಬಿ. ಮುನೇಗೌಡ ಭಾಗವಹಿಸಲಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ. ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿರುತ್ತದೆ.
ಸಾಸಲು ಹೋಬಳಿ ಕುರಿತು ಚಿಂತನ-ಮಂಥನ ವಿಚಾರಗೋಷ್ಠಿ, ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ ನಡೆಯಲಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಮುಖಂಡರಾದ ನರಸಿಂಹಗೌಡ, ಪಚ್ಚಾರಹಳ್ಳಿ ರಮೇಶ್, ಕೇಶವಮೂರ್ತಿ, ರವಿಕುಮಾರ್, ಚನ್ನವೀರನಹಳ್ಳಿ ನರಸಿಂಹಮೂರ್ತಿ, ನರೇಂದ್ರ ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
