ದೊಡ್ಡಬಳ್ಳಾಪುರ: ನಿನ್ನೆ ಪ್ರಕಟವಾದ ಸಿಬಿಎಸ್ಇ (CBSE) 10ನೇ ತರಗತಿ ಫಲಿತಾಂಶದಲ್ಲಿ ನಗರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ (SDUIRS) ಶೇ.100 ರಷ್ಟು ಸಾಧನೆ ಮಾಡಿದೆ.

2025-26ನೇ ಸಾಲಿನ ಸಿ.ಬಿ.ಎಸ್.ಇ (ಕೇಂದ್ರೀಯ ಪರೀಕ್ಷಾ ಮಂಡಳಿ) ಹತ್ತನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠತ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯು
ಶೇ.100ರಷ್ಟು ಫಲಿತಾಂಶ ಪಡೆದ ಸಾಧನೆ ಮತ್ತೊಮ್ಮೆ ಗಮನ ಸೆಳೆದಿದೆ.

ಈ ಬಾರಿ ಒಟ್ಟು 112 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, 112 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
16 ಮಕ್ಕಳು ಅತ್ಯುನ್ನತ್ತ ಶ್ರೇಣಿಯಲ್ಲಿ ಹಾಗೂ 77 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಕ್ಕಳ ಈ ಫಲಿತಾಂಶದ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ, ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ. ಹನುಮಂತರಾಜು, ಆಡಳಿತ ಮಂಡಳಿಯ ಸದಸ್ಯರು
(G.C. Members), ಹಾಗೂ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಪ್ರಕಟಣೆ ನೀಡಿದ್ದು, ಶಾಲೆಯ ಶೇ.100 ಫಲಿತಾಂಶವನ್ನು ಸಾಧಿಸುವುದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣ ಹಾಗೂ ಕಾರ್ಯದಕ್ಷತೆಯ ಪ್ರತೀಕವಾಗಿದೆ. ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಗುರು ವೃಂದಕ್ಕೆ ನಮ್ಮ ಮನಃಪೂರ್ವಕವಾದ ಅಭಿನಂದನೆಗಳು ಎಂದು ಮುಕ್ತ ಕಂಠದಿಂದ ಹಾರೈಸಿದ್ದಾರೆ.
ಈ ವಿಶಿಷ್ಟ ಸಾಧನೆಗೆ ಶಿಕ್ಷಕರ ಸಮರ್ಪಣೆ-ಮಾರ್ಗದರ್ಶನ, ಪೋಷಕರ ಸಹಕಾರ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಾಲೆಯ ಶಿಸ್ತಿನ ವಾತಾವರಣ ಪ್ರಮುಖ ಕಾರಣಗಳಾಗಿವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಸಾಧನೆಯೊಂದಿಗೆ, ಶಾಲೆಯು ಸಿಬಿಎಸ್ಇ ಪಠ್ಯಕ್ರಮದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ
ವರ್ಷಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತವಾಗಿದೆ.
ಫಲಿತಾಂಶದ ವಿವರ
ಸುರ್ಜಿತ್ ಕುಶ್ವಾಹ – 95.4%
ಸಂಪ್ರೀತ್ ರಾಜ್.ಕೆ.ಎಸ್ – 95.4%.
ಅಮೃತ.ಆರ್ – 89.8%
ಚುಕ್ಕಿ ಎಚ್ ಪ್ರಸಾದ್ – 89.8%
ಹಿತೈಷಿ ಜೆ ನವೀನ್ – 89.6%
ಚೇತಸ್.ಬಿ – 89.4%
ರಿತಿಕಾ ಅಗರ್ವಾಲ್ – 89%
ಎಮ್.ಸ್ವರೂಪ್ ಗೌಡ – 88.2%
ಆರ್ಯ.ಎಮ್.ಎ – 87.6%
ಗೌರಿ ದದೀಚ್ – 86.6%
ಯಶಸ್ವಿನಿ.ಸಿ.ಜಿ – 86.2%
ಚಿಂತನಾ.ಕೆ,ಹೆಚ್ – 86.2%
ಸನತ್ ಕುಮಾರ್ ಜಿ ನಾಯಕ್ – 86%
ಶ್ರಾವಣಿ.ಕೆ.ಬಿ – 85.8%
ಸಾತ್ವಿಕ್.ಟಿ – 85.2%
ಗಮನ ಜಿ ಗೌಡ – 85%.
ಮನಿಷ.ಎನ್ – 84.6%
ಪ್ರಜನ್ ಗೌಡ .ಟಿ.ಎಸ್ – 83.8%
ಮೋನಿಷ.ಹೆಚ್.ಎಸ್ – 83.8%
ಇಂಚರ.ಪಿ – 83.8%
ಜಾನ್ಸಿ.ಡಿ.ಟಿ – 83.6%
ವಿಸ್ಮಯ್ ಗೌಡ.ಟಿ.ಎ – 83.4%
ಶಿವಾಂಗಿ ಯಾದವ್ – 83.2%
ಇಂಚರ.ಎಮ್.ಹೆಚ್ – 82.8%
ಯಶಸ್ – 81.6%
ಗಾನವಿ.ಜೆ – 81.4%.