ದೊಡ್ಡಬಳ್ಳಾಪುರ: ಮುಂದಿನ ತಿಂಗಳ (ಮೇ) ಮೊದಲ ವಾರದಲ್ಲಿ ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಲಿದ್ದಾರೆಂದು ಜೆಡಿಎಸ್ ಹಿರಿಯ ಮುಖಂಡ ಎಸ್.ಎಂ. ಹರೀಶ್ ಗೌಡ (S.M. Harish Gowda) ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಜೆ.ಪಿ. ಭವನದಲ್ಲಿನ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ಕುರಿತಂತೆ ಅವರು ಹರಿತಲೇಖನಿಗೆ ಮಾಹಿತಿ ನೀಡಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ, ಜನರೊಂದಿಗೆ ಜನತಾದಳ ಕಾರ್ಯಕ್ರಮ ಹಾಗೂ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ.
ಮೇ ತಿಂಗಳ ಮೊದಲ ವಾರದ ಕಾರ್ಯಕ್ರಮ ನಡೆಯಲಿದ್ದು, ದಿನಾಂಕ ಕೆಲವೇ ದಿನಗಳಲ್ಲಿ ನಿಗದಿಯಾಗಲಿದೆ. ಇದೇ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷರ ಘೋಷಣೆ ಕೂಡ ಮಾಡಲಿದ್ದಾರೆಂದು ಹರೀಶ್ ಗೌಡ ಹೇಳಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ. ವಿ. ಮಂಜುನಾಥ್, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ವಕೀಲ ಆಂಜನಗೌಡ, ಡಾ.ವಿಜಯಕುಮಾರ್, ಕೆಂಪರಾಜ್, ಅಶ್ವಥ್ ನಾರಾಯಣ, ಸತ್ಯನಾರಾಯಣ, ಪ್ರಭಾಕರ್, ಪ್ರವೀಣ್ ಕುಮಾರ್, ರಾಮಮೂರ್ತಿ, ದೀಪುಗೌಡ, ಶಿವಣ್ಣ, ಮಹೇಶ್, ಶಿವಕುಮಾರ್, ಅಶ್ವಥಪ್ಪ, ನಾಗೇಶ್ಣ ದೇವರಾಜಮ್ಮ, ಆಶಾ, ಮುನಿರತ್ನಮ್ಮ ಮತ್ತಿತರರಿದ್ದರು.