ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ (B.R. Ambedkar) ಹಾಗೂ ಬಿಜೆಪಿ ಮುಖಂಡ ಅಲೋಕ್ ವಿಶ್ವನಾಥ್ (Alok vishwanath) ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಡಿ.ದರ್ಜೆ ನೌಕರರನ್ನು (D-grade employees) ಸನ್ಮಾನಿಸಲಾಯಿತು.

ಎಸ್.ಆರ್. ವಿಶ್ವನಾಥ್ ಅಭಿಮಾನಿಗಳ ಬಳಗದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಯ ಸ್ವಚ್ಚತೆಗೆ ಶ್ರಮಿಸುವ ಡಿ.ದರ್ಜೆ ನೌಕರರ ಶ್ರಮವನ್ನು ಗುರುತಿಸಿ, ಗೌರವಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯಲ್ಲಿನ ರೋಗಿಗಳಿಗಾಗಿ ಹಾಲು ಮತ್ತು ಹಣ್ಣು ವಿತರಣೆ ಮಾಡಲಾಯಿತು.

ಈ ವೇಳೆ ಎಸ್.ಆರ್. ವಿಶ್ವನಾಥ್ ಅಭಿಮಾನಿಗಳ ಬಳಗದ ಪ್ರಮುಖರಾದ ವಿಜಯ್ ಕುಮಾರ್, ಮನು ಆಚಾರ್, ಮಹೇಶ್ ಘಾಟಿ, ಚಾಂದ್ ಪಾಷಾ,, ಶ್ರೀನಿವಾಸ್ ಮಂಡಿ, ಶಿಕ್ಷಕ ರಾಜಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯಣ್ಣ, ವೈದ್ಯರಾದ ಡಾ.ಮಂಜುನಾಥ್, ಡಾ.ಗಿರೀಶ್ ಮತ್ತಿತರರಿದ್ದರು.
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಬೈಕ್ ಸವಾರ ಸಾವು
ದೊಡ್ಡಬಳ್ಳಾಪುರ ತಾಲೂಕಿನ ಹನುಮಂತಯ್ಯನ ಪಾಳ್ಯದಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಕೋಳಾಲ ವಾಸಿ ರಾಮಾಂಜಿನಯ್ಯ (45 ವರ್ಷ) ಎಂದು ಗುರುತಿಸಲಾಗಿದೆ.
ಮೃತ ರಾಮಾಂಜಿನಯ್ಯ ಸ್ವಗ್ರಾಮವಾದ ಹನುಮಂತಯ್ಯನ ಪಾಳ್ಯದಲ್ಲಿ ನಡೆದ ಜಾತ್ರೆಗೆಂದು ಬಂದಿದ್ದ ವೇಳೆ, ಬೈಕ್ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾರು-ಕ್ಯಾಂಟರ್ ಮುಖಾಮುಖಿ ಡಿಕ್ಕಿ
ಮತ್ತೊಂದು ಪ್ರಕರಣದಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಓರ್ವ ಸಾವನಪ್ಪಿರುವ ಘಟನೆ ಕೋಡಿಪಾಳ್ಯ ಮತ್ತು ಮದುರೆ ನಡುವೆ ಸಂಭವಿಸಿದೆ.
ಮೃತನನ್ನು ಬೆಂಗಳೂರಿನ ಅಬ್ಬಿಗೆರೆ ನಿವಾಸಿ ಹನುಮಂತ (19 ವರ್ಷ) ಎಂದು ಗುರುತಿಸಲಾಗಿದೆ.
ಮದುರೆ ಕಡೆಯಿಂದ ತೆರಳಿದ ಕಾರು ಮತ್ತು ಕೋಡಿಪಾಳ್ಯ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ದುರ್ಘಟನೆ ಸಂಭವಿಸಿದೆ.
ಈ ವೇಳೆ ಗಂಭೀರವಾಗಿ ಗಾಯಗೊಂಡ ಹನುಮಂತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು, ಚಿಕ್ಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ