ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿ ಕೇಂದ್ರದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲಾ ಆವರಣದಲ್ಲಿ ಏ.19 ರಂದು ಭಾನುವಾರ ನಡೆಯಲಿರುವ ಸಾಸಲು ಚಿನ್ನಮ್ಮ (Sasalu Chinnamma) ಉತ್ಸವಕ್ಕೆ ಕ್ಷಣಗಣನೆ ತೀವ್ರವಾಗಿದ್ದು, ಪ್ರಚಾರ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ.

ಸಾಸಲು ಹೋಬಳಿ ಚಿನ್ನಮ್ಮ ಉತ್ಸವ ಸಮಿತಿ ವತಿಯಿಂದ ಮೊದಲ ಬಾರಿಗೆ ನಡೆಯುತ್ತಿರುವ ಸಾಸಲು ಚಿನ್ನಮ್ಮ ಉತ್ಸವ-2026 ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಉದ್ಘಾಟಿಸಲಿದ್ದಾರೆ.


ಸಾಸಲು ಚಿನ್ನಮ್ಮ ಉತ್ಸವ ಏ.19ರ ಬೆಳಗ್ಗೆ 8 ಗಂಟೆಗೆ ಸಾದ್ವಿಮಣೆ ಸಾಸಲು ಚಿನ್ನಮ್ಮ ದೇವಾಲಯ ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ಸಾಸಲು ಚೆನ್ನಮ್ಮ ಉತ್ಸವ ವೇದಿಕೆ ತನಕ ಜಾನಪದ ಕಲಾ ತಂಡಗಳೊಂದಿಗೆ ಸಾಸಲು ಚಿನ್ನಮ್ಮ ಮೂರ್ತಿಯನ್ನು ಚಿಲಕಲ ಬಂಡಿ ಮೂಲಕ ಮೆರವಣಿಗೆ ನಡೆಯುತ್ತದೆ.
ಸಾಸಲು ಚಿನ್ನಮ್ಮ ಉತ್ಸವದ ಮುಖ್ಯ ವೇದಿಕೆಯಲ್ಲಿ ಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪನವರಿಂದ ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆ ಮಾಡುತ್ತಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಧೀರಾಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಿಮ್ಸ್ ಆಸ್ಪತ್ರೆ ಮಾಜಿ ಅಧ್ಯಕ್ಷ ಬಿ. ಮುನೇಗೌಡ ಭಾಗವಹಿಸಲಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ. ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿರುತ್ತದೆ.
ಸಾಸಲು ಹೋಬಳಿ ಕುರಿತು ಚಿಂತನ-ಮಂಥನ ವಿಚಾರಗೋಷ್ಠಿ, ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ ನಡೆಯಲಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಪಿಡಿಒ ಶ್ರಿನಿವಾಸ್ ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಮುಖಂಡರಾದ ನರಸಿಂಹಗೌಡ, ಪಚ್ಚಾರಹಳ್ಳಿ ರಮೇಶ್, ಕೇಶವಮೂರ್ತಿ, ರವಿಕುಮಾರ್, ಚನ್ನವೀರನಹಳ್ಳಿ ನರಸಿಂಹಮೂರ್ತಿ, ನರೇಂದ್ರ ಮುಂತಾದವರು ವಿವಿಧ ಗ್ರಾಮಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
CBSE ಫಲಿತಾಂಶ; MSV ಶಾಲೆ ಮಕ್ಕಳ ಮೇಲುಗೈ: ದೊಡ್ಡಬಳ್ಳಾಪುರ ತಾಲೂಕಿಗೆ ಟಾಪರ್..

ದೊಡ್ಡಬಳ್ಳಾಪುರ: ಏ.15 ರಂದು ಪ್ರಕಟವಾದ
ಸಿಬಿಎಸ್‌ಇ (CBSE) 10ನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆ (MSV Public School) ಶೇ.100 ರಷ್ಟು ಸಾಧನೆ ಮಾಡಿದೆ.
2025-26ನೇ ಸಾಲಿನ ಸಿಬಿಎಸ್‌ಇ ಕೇಂದ್ರೀಯ ಪರೀಕ್ಷಾ ಮಂಡಳಿಯ ಹತ್ತನೇ ತರಗತಿ ಫಲಿತಾಂಶದಲ್ಲಿ, ದೊಡ್ಡಬಳ್ಳಾಪುರ ನಗರದ ಎಂಎಸ್‌ವಿ ಪಬ್ಲಿಕ್ ಶಾಲೆಯು ನಿರಂತರವಾಗಿ 15ನೇ ವರ್ಷವೂ ಶೇ.100 ಸಾಧನೆ ಮಾಡಿ ಮತ್ತೊಮ್ಮೆ ಗಮನ ಸೆಳೆದಿದೆ.
ಈ ಬಾರಿ ಒಟ್ಟು 136 ವಿದ್ಯಾರ್ಥಿಗಳಲ್ಲಿ 86 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 41 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಕ್ಕಳ ಈ ಫಲಿತಾಂಶಕ್ಕೆ ಮತ್ತು ಅವರ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಸುಬ್ರಮಣ್ಯ.ಎ ರವರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, “ನಿರಂತರವಾಗಿ 15 ವರ್ಷಗಳ ಕಾಲ ಶೇ.100 ಫಲಿತಾಂಶವನ್ನು ಸಾಧಿಸುವುದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣ ಮತ್ತು ತಂಡದ ಕಾರ್ಯದ ಪ್ರತೀಕವಾಗಿದೆ. ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕ ವೃಂದಕ್ಕೆ ನನ್ನ ಮನಃಪೂರ್ವಕವಾದ ಅಭಿನಂದನೆಗಳು” ಎಂದು ಮುಕ್ತ ಕಂಠದಿಂದ ಹಾರೈಸಿದ್ದಾರೆ.
ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ಟ್ರಸ್ಟಿ ನಯನಾ ಸ್ವರೂಪ್ ಹಾಗೂ ಪ್ರಾಂಶುಪಾಲರಾದ ರೆಮ್ಯ.ಬಿ.ವಿ ಹಾಗೂ ಸಿಬ್ಬಂದಿ ವರ್ಗಕೂಡ ಮಕ್ಕಳ ಸಾಧನೆಯನ್ನು ಮುಕ್ತ ಕಂಠದಿಂದ ಅಭಿನಂದನೆಗಳನ್ನು ಸಲ್ಲಿಸಿದರು.
ಈ ವಿಶಿಷ್ಟ ಸಾಧನೆಗೆ ಶಿಕ್ಷಕರ ಸಮರ್ಪಣೆ, ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಾಲೆಯ ಶಿಸ್ತಿನ ವಾತಾವರಣ ಪ್ರಮುಖ ಕಾರಣಗಳಾಗಿವೆ.
ಈ ಸಾಧನೆಯೊಂದಿಗೆ, ಶಾಲೆಯು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ ವರ್ಷಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತವಾಗಿದೆ.
ಫಲಿತಾಂಶದ ವಿವರ
ಶ್ರೇಯಾ ಆರ್ – 97.00%
ಶ್ರುತಿ ಬಿ ಆರ್ – 95.60%
ಡಿ ರಕ್ಷಾ – 94.60%
ಗಗನಶ್ರೀ ಡಿ ಎಸ್ – 94.00%
ಕೆ ಹೆಚ್ ಸ್ಮೃತಿ. – 93.00%
ಅಫಿಫಾ. – 92.60%
ಧನುಶ್ರೀ ವಿ.- 92.00%.
ಚಿನ್ಮಯ್ ಎನ್ ಲೋಕೇಶ್. – 91.80%
ಪೂರ್ವಿಕಾ ಡಿ – 91.60%
ಹರಿಪ್ರಿಯಾ ಕೆ ಪಿ. – 91.60%
ರವಿನೂತಲ ತೇಜೋ ನಾಗಗೌರೀ ವೈಷ್ಣವಿ. – 91.40%
ಯೋಗಿತಾ ಕೆ ಪಿ. – 91.40%
ರಿಶಿಕಾ ರಾಜ್ ಸಿ. – 91.20%.
ಕೃತಿಕಾ ಹೆಚ್ ಎಂ. – 90.80%
ಭರಣಿ.ಎಸ್. – 90.40%
ವರ್ಷ ಬಿಂದು ಎನ್. – 90.20%
ಇಖ್ರಾ ಮರಿಯಮ್ – 90.00%
