ತಿರುವನಂತಪುರಂ: ಚುನಾವಣೆ ನೀತಿಸಂಹಿತೆ ಜಾರಿಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ಶನಿವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ದೂರು ನೀಡಿವೆ.

ಕೇರಳದ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅನಿಲ್ ಅಕ್ಕರ ಮತ್ತು ಸಿಪಿಎಂ ರಾಜ್ಯಸಭಾ ಸದಸ್ಯ ಪಿ. ಸಂತೋಷ್ ಕುಮಾರ್ ದೂರು ನೀಡಿದ್ದಾರೆ. ಕೇಂದ್ರದ ಮಹಿಳಾ ಮೀಸಲು ವಿಧೇಯಕ ಹಾಗೂ ಕ್ಷೇತ್ರ ವಿಂಗಡನೆ ವಿಧೇಯಕಕ್ಕೆ ಸಂಸತ್ತಿನಲ್ಲಿ ಸೋಲಾಗಿರುವುದನ್ನು ಖಂಡಿಸಿ ಪ್ರತಿಪಕ್ಷಗಳ ವಿರುದ್ಧ ದೂರದರ್ಶನ ಭಾಷಣದಲ್ಲಿ ಮೋದಿ ಹರಿಹಾಯ್ದಿದ್ದರು.

ತಮಿಳುನಾಡು, ಬಂಗಾಳ ಚುನಾವಣೆ ನಡೆಯುತ್ತಿರುವಾಗ, ತಮ್ಮ ಪಕ್ಷದ ಪರ ಭಾಷಣಕ್ಕಾಗಿ ಸರಕಾರಿ ಸ್ವಾಮ್ಯದ ದೂರದರ್ಶನವನ್ನು ಮೋದಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಧಿಕಾರದಲ್ಲಿರುವ ಪಕ್ಷವು ಸರಕಾರಿ ಮಾಧ್ಯಮಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸುವಂತಿಲ್ಲ.
ಮಹಿಳಾ ಮೀಸಲಾತಿ ಕುರಿತ ಮಸೂದೆಗೆ ಸೋಲು..!

ನವದೆಹಲಿ: ಮಹಿಳಾ ಮೀಸಲಾತಿ (Women’s reservation) ಮಸೂದೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಸೋಲಾಗಿದ್ದು, ಇದೇ ಮೊದಲ ಬಾರಿಗೆ ಮಸೂದೆಯನ್ನು ಅಂಗೀಕರಿಸುವಲ್ಲಿ ಮೋದಿ (Modi) ಸರ್ಕಾರ ವಿಫಲವಾಗಿ, ಮುಖಭಂಗಕ್ಕೀಡಾಗಿದೆ.
ಮಸೂದೆಯ ಪರವಾಗಿ 278 ಮತಗಳು ಮತ್ತು ವಿರುದ್ಧವಾಗಿ 211 ಮತಗಳು ಬಿದ್ದಿದ್ದು. ಲೋಕಸಭೆಯಲ್ಲಿ 489 ಸಂಸದರು ಮತ ಚಲಾಯಿಸಿದರು.
ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 489 ರಲ್ಲಿ ಮೂರನೇ ಎರಡರಷ್ಟು 326. ಹೀಗಾಗಿ, ಬಹುಮತದ ಕೊರತೆಯಿಂದಾಗಿ, ಮಸೂದೆಯನ್ನು 28 ಮತಗಳಿಂದ ಸೋಲಿಸಲಾಗಿದೆ.
ತನ್ನ 11 ವರ್ಷಗಳ ಆಡಳಿತದಲ್ಲಿ ಮೋದಿ ಸರ್ಕಾರವು ಸದನದಲ್ಲಿ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು, ಅಮಿತ್ ಶಾ ಒಂದು ಗಂಟೆ ಭಾಷಣ ಮಾಡಿ, ಈ ಮಸೂದೆಗಳನ್ನು ಅಂಗೀಕರಿಸದಿದ್ದರೆ, ವಿರೋಧ ಪಕ್ಷವೇ ಜವಾಬ್ದಾರವಾಗಿರುತ್ತದೆ ಎಂದು ಹೇಳಿದರು. ವಿರೋಧ ಪಕ್ಷವು ಮತ ಚಲಾಯಿಸದಿದ್ದಾರೆ.
ಈ ತಿದ್ದುಪಡಿ ಮಾಡಿದ ಮಸೂದೆಗಳನ್ನು ಲೋಕಸಭೆಯಲ್ಲಿ 21 ಗಂಟೆಗಳ ಕಾಲ ಚರ್ಚಿಸಲಾಯಿತು. 56 ಮಹಿಳೆಯರು ಸೇರಿದಂತೆ ಒಟ್ಟು 130 ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕ್ಷೇತ್ರ ವಿಂಗಡನೆ ಬದಿಗಿಟ್ಟು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಬೆಂಬಲಿಸುವುದಾಗಿ ವಿಪಕ್ಷಗಳು ಹೇಳಿದ್ದವಾದ್ರೂ, ಮೋದಿ ಸರ್ಕಾರ ಪಟ್ಟುಬಿಡದ ಕಾರಣ ಹಿನ್ನಡೆ ಅನುಭವಿಸಿದೆ.
