ದೊಡ್ಡಬಳ್ಳಾಪುರ: ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ 2021-22ನೇ ಸಾಲಿನ ರಾಜ್ಯ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಈ ಬಜೆಟ್ ನಲ್ಲಿ ಬಡವರಿಗೆ, ಕೃಷಿಕರಿಗೆ, ಕಾರ್ಮಿಕರಿಗೆ ಯಾವುದೇ ರೀತಿಯ ಉತ್ತೇಜಿತ ಕ್ರಮಗಳು ಇಲ್ಲವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
2021ರ ರಾಜ್ಯ ಬಜೆಟ್ ಕುರಿತು ಹರಿತಲೇಖನಿಗೆ ನೀಡಿರುವ ಮೊದಲ ಪ್ರತಿಕ್ರಿಯೆಯಲ್ಲಿ ಈ ಕುರಿತು ಮಾತನಾಡಿರುವ ಅವರು, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರೆಸಿರುವುದು ಬಿಟ್ಟರೆ, ಈ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ರೂಪಿಸಿಲ್ಲ. ಬಜೆಟ್ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಈ ಹಿಂದಿನ ಸರ್ಕಾರದ ವೃಷಾಭವತಿ ಕಣಿವೆಯಿಂದ ಸಂಸ್ಕರಿಸಿದ ನೀರನ್ನು ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ್ಲಕ್ಕೆ ನೀಡಲು ಯೋಜಿಸಿತ್ತು. ಆದರೆ ಈ ಸರ್ಕಾರ ಎರಡು ತಾಲೂಕುಗಳ ಜೊತೆಗೆ ಬೆಂಗಳೂರು ನಗರ, ತುಮಕೂರನ್ನು ಹೆಚ್ಚುವರಿಯಾಗಿ ಸೇರಿಸಿದೆ.
ಉಳಿದಂತೆ ಎತ್ತಿನಹೊಳೆ ಯೋಜನೆ ಕುರಿತು ಜಮೀನು ಪಡೆಯುವ ಪ್ರಕ್ರಿಯೆ ಗೊಂದಲವನ್ನು ಪರಿಹಾರ ಮಾಡುವುದಾಗಿ ಹೇಳಿದೆಯೇ ಹೊರತು. ಮತ್ಯಾವುದೇ ಜನಪರ ಯೋಜನೆಗಳನ್ನು ಜಿಲ್ಲೆಗೆ ಹಾಗೂ ತಾಲೂಕಿಗೆ ನೀಡಿಲ್ಲ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….