ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆಯ ತಜ್ಞ ವೈದ್ಯರ ತಂಡ ಇಂದು ದೇವನಹಳ್ಳಿ ತಾಲ್ಲೂಕಿನ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಆರ್.ಟಿ.ಪಿ.ಸಿ.ಆರ್ ತಪಾಸಣಾ ವರದಿ ಕುರಿತು ಪರಿಶೀಲನೆ ನಡೆಸಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ ಅವರ ನೇತೃತ್ವದ ವೈದರ ತಂಡ ಆಕಾಶ್ ಆಸ್ಪತ್ರೆಯ ಲ್ಯಾಬೋರೇಟರಿ ಹಾಗೂ ಎಂ.ಆರ್.ಡಿ ವಿಭಾಗಕ್ಕೆ ಭೇಟಿ ನೀಡಿ, ಐ.ಸಿ.ಎಂ.ಆರ್ ಪೋರ್ಟಲ್ ನಲ್ಲಿ ವರದಿ ಮಾಡದೆ ಬಾಕಿ ಇರುವ ಆರ್.ಟಿ.ಪಿ.ಸಿ.ಆರ್ ತಪಾಸಣಾ ಮಾಹಿತಿಯನ್ನು ಪರಿಶೀಲನೆ ನಡೆಸಿದ ವೇಳೆ, 257 ತಪಾಸಣಾ ಮಾಹಿತಿ ವರದಿಯಾಗದಿರುವುದು ಕಂಡುಬಂದ ಹಿನ್ನೆಲೆ, ಪ್ರತಿದಿನ ಆರ್.ಟಿ.ಪಿ.ಸಿ.ಆರ್ ತಪಾಸಣಾ ಮಾಹಿತಿಯನ್ನು ಐ.ಸಿ.ಎಂ.ಆರ್ ಪೋರ್ಟಲ್ ನಲ್ಲಿ ತಪ್ಪದೆ ವರದಿ ಮಾಡಲು ಸೂಚಿಸಲಾಯಿತು.
ಪರಿಶೀಲನಾ ವೇಳೆ ಆಕಾಶ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಸುನೀಲ್ ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..