ದ್ವಾರಕಾ: ಗುಜರಾತ್‌ನ ದೇವಭೂಮಿ -ದ್ವಾರಕಾ ಜಿಲ್ಲೆಯ ವಿಶ್ವಪ್ರಸಿದ್ಧ ದ್ವಾರಕಾಧೀಶ ದೇವಾಲಯದ ಗೋಪುರದ ಮೇಲೆ ಮಂಗಳವಾರ ಸಿಡಿಲು ಬಡಿದಿದೆ.
ಆ ವೇಳೆ ಗೋಪುರದ ತುತ್ತತುದಿಯಲ್ಲಿದ್ದ ಧ್ವಜ ಹರಿದು ಹೋಗಿದ್ದರೂ ದೇವಾಲಯದ ಒಳಗಿದ್ದ ಭಕ್ತರಿಗಾಗಲಿ, ದೇವಾಲಯಕ್ಕಾಗಲೀ ಯಾವ ರೀತಿಯಲ್ಲೂ ಹಾನಿಯಾಗಿಲ್ಲ.
ಭಾರಿ ಮಳೆಯ ಮಧ್ಯೆ ಸಿಡಿಲು ದೇವಾಲಯಕ್ಕೆ ಅಪ್ಪಳಿಸಿತು ಮತ್ತು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಕಣ್ಣೆದುರಿನಲ್ಲೇ ದೇವಾಲಯಕ್ಕೆ ಸಿಡಿಲು ಅಪ್ಪಳಿಸಿತ್ತು. ದ್ವಾರಕಾಧೀಶನ ಮಂದಿರದ ಮೇಲಿನ ಧ್ವಜಕ್ಕೆ ನೇರವಾಗಿ ಸಿಡಿಲು ಅಪ್ಪಳ್ಳಿಸಿದೆ. ಆದರೆ ಯಾವೊಬ್ಬ ಭಕ್ತರಿಗೂ ಏನೂ ಹಾನಿಯಾಗಿಲ್ಲ ಅಲ್ಲದೆ ಮಂದಿರದ ಯಾವ ಭಾಗವೂ ಹಾನಿಗೊಂಡಿಲ್ಲ ಇದಾಗಿ ಅರ್ಧ ಗಂಟೆಯ ನಂತರ ಮಳೆ ಸಹ ನಿಂತಿತು.
ಭಕ್ತರು ಮತ್ತೆ ಧ್ವಜವನ್ನು ದೇವಾಲಯದ ಮೇಲೆ ಏರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..