ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕದ ವಿಚಾರ ನ್ಯಾಯಾಲಯದಲ್ಲಿದೆ. ಶಾಲಾ ಕಾರಣ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷೆ ಪ್ರವೇಶ ಪತ್ರವನ್ನು ಕೆಲವು ಖಾಸಗಿ ಶಾಲೆಗಳು ನೀಡದೆ ಇರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಿಂದ ಒಂದು ಮಗು ಕೂಡ ವಂಚಿತವಾಗಬಾರದು. ಪರೀಕ್ಷಾ ಪ್ರವೇಶ ಪತ್ರ ನೀಡದ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಅವರು ತಿಳಿಸಿದ್ದಾರೆ.
ಕೆಲವು ಖಾಸಗಿ ಶಾಲೆಯವರು ಮಕ್ಕಳಿಗೆ ಶಾಲೆಯ ಶುಲ್ಕವನ್ನು ಪಾವತಿಸದೆ, ಪರೀಕ್ಷೆಯ ಪ್ರವೇಶ ಪತ್ರವನ್ನು ನೀಡುವುದಿಲ್ಲ ವೆಂಬ ಹಟಕ್ಕೆ ಬಿದ್ದು, ಮಕ್ಕಳ ಮನೋಕ್ಷೋಭೆಯನ್ನು ಉಲ್ಲಂಗಣೆ ಗೊಳಿಸುತ್ತಿದ್ದಾರೆ. ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿರುವುದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೂ ಕೂಡ ಬಂದಿರುತ್ತದೆ. ಈ ನಿಟ್ಟಿನಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಪೂರ್ಣ ಶುಲ್ಕ ಪಾವತಿಸುವಂತೆ ಖಾಸಗಿ ಶಾಲೆಯವರು ಒತ್ತಡ ಹೇರಿದರೆ, ಪೋಷಕರು ಈ ಬಗ್ಗೆ ಬಿಇಒ ಗಳಿಗೆ ದೂರು ನೀಡಿದರೆ, ಡಿಡಿಪಿಐ ಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ, ಈ ಹೇಳಿಕೆಯನ್ನು ಆಯೋಗವು ಬೆಂಬಲಿಸುತ್ತದೆ.
2020 2021ರ ಸಾಲಿನಲ್ಲಿ ಮಕ್ಕಳು ಈಗಾಗಲೇ ಶಿಕ್ಷಣದಿಂದ ಹಿಮ್ಮುಖವಾದ ನಡೆಯನ್ನು ನಡೆಯುತ್ತಿದ್ದರೇ, ಕೋವಿಡ್ -19 ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣದಿಂದ ವಂಚಿತರಾದ ಎಷ್ಟು ಮಕ್ಕಳು ಬಾಲಕಾರ್ಮಿಕರಾಗಿರುವುದು, ಮತ್ತು ಬಾಲ್ಯ ವಿವಾಹಗಳು ಹೆಚ್ಚಾಗುತ್ತಿರುವುದು, ಕಂಡುಬರುತ್ತಿದೆ. ಕೋವಿಡ್ 19 ಪರಿಸ್ಥಿತಿಯು ಸಹಜ ಸ್ಥಿತಿಗೆ ಸಮಾಜವನ್ನು ನುಕಲ್ಪಡುತಿದೆ.
ಮಕ್ಕಳ ಪೋಷಕರು ಕೂಡ ಕೋವಿಡ್ 19 ಕಾರಣದಿಂದ ಗಳಿಕೆ ಇಲ್ಲದೆ ಹಿಂದುಳಿದು ಆರ್ಥಿಕ ಅಸಹಾಯಕತೆಯಿಂದ ನರಳುವಂತೆ ಆಗಿದೆ, ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಮಹತ್ವವನ್ನು ಅರಿಯದಿರುವ ಕೆಲವು ಖಾಸಗಿ ಶಾಲೆಗಳಿಂದ ಮಕ್ಕಳು ಅವಮಾನಿತರಾಗಿತ್ತಿರುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಈ ಉಲ್ಲಂಘನೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದರೆ ಮಕ್ಕಳ ಶೈಕ್ಷಣಿಕ ಕಲಿಕೆಯಲ್ಲಿ ಶೋಷಿಸುವುದು ಅಕ್ಷಮ್ಯ ಅಪರಾಧ, ಶುಲ್ಕದ ವಿಷಯ ಪೋಷಕರಿಗೆ ಮತ್ತು ಶಾಲೆಯ ಆಡಳಿತಕ್ಕೆ ಬಿಟ್ಟ ವಿಚಾರ, ಆದರೆ ಮಕ್ಕಳಿಗೆ ಆ ವಿಚಾರದಲ್ಲಿ ಶೋಷಣೆ ಮಾಡಿದರೆ ಆಯೋಗವು ಸುಮ್ಮನಿರಲಾಗದು.
ಮಕ್ಕಳಿಗೆ ಪರೀಕ್ಷೆ ಪ್ರವೇಶ ಪತ್ರ ನೀಡದೇ ಇದ್ದರೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಾಯವಾಣಿ ಸಂಖ್ಯೆ 080-47181177 ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ದೂರನ್ನು ಮಕ್ಕಳು ಮತ್ತು ಪೋಷಕರು ನೀಡಬಹುದಾಗಿರುತ್ತದೆ ಮತ್ತು ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವನ್ನು ಸಂಪರ್ಕಿಸಲು ಆಯೋಗವು ವಿನಂತಿಸಿದೆ.
ದೊಡ್ಡಬಳ್ಳಾಪುರ: ಯಾವುದೇ ಶಾಲೆಯಲ್ಲಿ ಶುಲ್ಕ ಬಾಕಿ ಅಥವಾ ಮತ್ಯಾವುದೇ ಕಾರಣದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗೆ ಪ್ರವೇಶ ಪತ್ರ ನೀಡಲು ನಿರಾಕರಿಸಿದ್ದಲ್ಲಿ ಪೋಷಕರು ಆತಂಕಕ್ಕೆ ಒಳಗಾಗದೇ ತಕ್ಷಣ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬೇಕೆಂದು ದೊಡ್ಡಬಳ್ಳಾಪುರ ಬಿಇಒ ಆರ್.ವಿ.ಶುಭಮಂಗಳ ಕೋರಿದ್ದಾರೆ
ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ಪೋಷಕರ ಹೆಸರು ಮತ್ತು ಮೊಬೈಲ್ ಸಂಖ್ಯೆ ನೀಡಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆ ಮಾಡಲಾಗುವುದು ಎಂದಿರುವ ಅವರು, ತೊಂದರೆ ಉಂಟಾದಲ್ಲಿ BEO – 9480695013, ECO – 96630 59593 ಸಂಖ್ಯೆಗೆ ಕರೆ ಮಾಡಲು ಮನವಿ ಮಾಡಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..