ರಾಯಚೂರು: ಕಂದಾಯ ಇಲಾಖೆ ವತಿಯಿಂದ ನಡೆದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಮನೆ ಬಾಗಿಲಿಗೆ ಮಾಸಾಶನ ಅಭಿಯಾನ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ತಾಲೂಕಿನ ಮನ್ಸಲಾಪೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಬಿ ಸತೀಶ್ ಅವರು ಫಲಾನುಭವಿಗಳಿಗೆ ಆದೇಶ್ ಪತ್ರ ವಿತರಣೆ ಮಾಡಿದರು.
ಬುಧವಾರ ಮನೆಮನೆಗೆ ಜನರ ಸೇವೆ 2021ರ ಪಿಂಚಣಿ ಅಭಿಯಾನದಲ್ಲಿ ಒಟ್ಟು 19 ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಿದ ಅವರು ಗಾಮ್ರಸ್ಥರಲ್ಲಿ ಕೋವಿಡ್ ಲಸಿಕೆ, ವಸತಿ ಯೋಜನೆ, ಸ್ವಚ್ಚ ಭಾರತ್ ಯೋಜನೆಯ ಶೌಚಲಯದ ಹಾಗೂ ಉಜ್ವಲ ಯೋಜನೆ ಬಗ್ಗೆ ಮಾಹಿತಿ ಪಡೆದ ಸರ್ಕಾರಿ ಯೋಜನೆಗಳ ಸದುಪಾಯೋಗ ಪಡೆದುಕೊಳ್ಳವಂತೆ ಜಾಗೃತಿ ಮೂಡಿಸಿದರು.
ಈ ವೇಳೆ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ನಾಡ ತಹಶಿಲ್ದಾರ್ ಚಂದ್ರೇಶಖರ್, ಕಂದಾಯ ನಿರೀಕ್ಷಕ ಸೋಹಿಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ಗ್ರಾಮದ ಮುಖಂಡ ಮೂಕಪ್ಪ ಸೇರಿದಂತೆ ಹಲವರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..