ದೊಡ್ಡಬಳ್ಳಾಪುರ: ಹಲವಾರು ಕಾರಣಗಳಿಂದ ಸ್ಥಗೀತಗೊಂಡಿರುವ ಪಿಂಚಣಿಯನ್ನು ಮರು ಚಾಲನೆ ಮಾಡಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಹರಿತಲೇಖನಿಗೆ ನೀಡಿರುವ ಮಾಹಿತಿ ನೀಡಿರುವ ಅವರು, ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿಯನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದ್ದು, ತಾಲೂಕಿನಲ್ಲಿ ಕೆಲವು ಪ್ರಕರಣಗಳಲ್ಲಿ ಫಲಾನುಭವಿಗಳ ಪಿಂಚಣಿ ತಾತ್ಕಾಲಿಕ ಸ್ಥಗಿತಗೊಂಡುರುವ ಪ್ರಕರಣಗಳು ಇರುತ್ತವೆ. ಈ ಪ್ರಕರಣಗಳಲ್ಲಿ ಕೆಲವು ಬ್ಯಾಂಕ್‌ಗಳು ಬೇರೆ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದ್ದು, ಅಂತಹ ಬ್ಯಾಂಕ್‌ಗಳಲ್ಲಿ ಖಾತೆಗಳು ಇರುವ ಫಲಾನುಭವಿಗಳು ಬ್ಯಾಂಕ್ ಪಾಸ್‌ಬುಕ್‌ಗಳನ್ನು ನವೀಕರಿಸಿಕೊಂಡು ನಾಡ ಕಚೇರಿಯಲ್ಲಿ ನೀಡದೇ ಇರುವ ಪ್ರಕರಣಗಳಾರುತ್ತವೆ. ಇದಲ್ಲದೇ, ನೋ ಸಚ್ ಅಕೌಂಟ್, ಇನ್‌ವಾಲಿಡ್ ಅಕೌಂಟ್, ಅಕೌಂಟ್ ಟ್ರಾನ್ಸ್‌ಫರ್ ತರಹದ ಪ್ರಕಣಗಳಾಗಿವೆ. ಇಂತಹ ಪ್ರಕರಣಗಳಲ್ಲಿ ಫಲಾನುಭವಿಗಳ ಪಿಂಚಣಿ ಖಾತೆಯಲ್ಲಿ ಜಮೆ ಆಗದ ಕಾರಣ ಸ್ಥಗೀತಗೊಂಡಿರುತ್ತವೆ.
ಹೀಗೆ ಹಲವಾರು ಕಾರಣಗಳಿಂದ ಸ್ಥಗೀತಗೊಂಡಿರುವ ಪಿಂಚಣಿದಾರರು ತಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ ಆಧಾರ್ ಚೀಟಿ ಪ್ರತಿಯನ್ನು ತಾವುಗಳು ವಾಸವಿರುವ ಗ್ರಾಮದ ಹೋಬಳಿ ಕೇಂದ್ರದ ನಾಡ ಕಚೇರಿ, ಅಥವಾ ತಾಲೂಕು ಕಚೇರಿಗೆ ತಕ್ಷಣ ಸಲ್ಲಿಸಬೇಕು ಎಂದು ಶಿವರಾಜ್ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..