ಉಳ್ಳಾಲ: ಜಿಹಾದಿ ಭಯೋತ್ಪಾದಕ ಚಟುವಟಿಕೆಗೆ ಲವ್ ಜಿಹಾದ್‍ಗೆ ಒಳಗಾದ ಹೆಣ್ಣುಮಕ್ಕಳು ಬಳಕೆಯಾಗುತ್ತಿದ್ದು, ಇದಕ್ಕೆ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿ ಉಳ್ಳಾಲ ತಾಲೂಕಿನ ಪ್ರತೀ ಜಂಕ್ಷನ್‍ಗಳಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಜನಜಾಗೃತಿ ಆಂದೋಲನ ನಡೆಸಲಾಯಿತು.
ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಆಂದೋಲನ ಮಾಡುತ್ತಿದ್ದ ಕಾರ್ಯಕರ್ತರು, ಇತ್ತೀಚೆಗೆ ಎನ್ ಐಎ ದಾಳಿ ನಡೆಸಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿರುವ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಪುತ್ರನ ಮನೆಗೆ ನುಗ್ಗಲು ಯತ್ನಿಸಿದ್ದು ಈ ವೇಳೆ ಪೊಲೀಸರು ತಡೆದು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆಯಿತು.
ಉಳ್ಳಾಲದಲ್ಲಿಯೂ ಇಂತಹ ಲವ್ ಜಿಹಾದ್‍ಗೆ ಒಳಗಾಗಿರುವ ಮಹಿಳೆ ಸಿರಿಯಾ ಮೂಲದ ಭಯೋತ್ಪಾದಕ ಸಂಘಟನೆಗಳ ಸಂಪರ್ಕದಲ್ಲಿದ್ದು, ಉಳ್ಳಾಲ ಬಯೋತ್ಪಾದಕ ತಾಣವಾಗುತ್ತಿದೆ. ಗ್ರಾಮಮಟ್ಟದಲ್ಲಿ ಹಿಂದೂ ಯುವತಿಯರು ಜಾಗೃತರಾಗಬೇಕು ಮತ್ತು ಲವ್ ಜಿಹಾದ್‍ಗೆ ಕಠಿಣ ಕಾನೂನು ಜಾರಿಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಇದಿನಬ್ಬ ಪುತ್ರ ಬಿ.ಎಂ ಬಾಷಾ ಮನೆಗೆ ಎನ್ ಐಎ ದಾಳಿ ನಡೆಸಿ ಆತನ ಪುತ್ರನನ್ನು ಬಂಧಿಸಿತ್ತು. ಅಲ್ಲದೆ ಈ ಹಿಂದೆಯೂ ಮನೆಯ ಒಂದು ಸದಸ್ಯೆ ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿ ಸಿರಿಯಾ ದೇಶಕ್ಕೆ ತೆರಳಿದ್ದಳು. ಜೊತೆಗೆ ಮನೆಯಲ್ಲಿ ಲವ್ ಜಿಹಾದ್ ಮೋಲಕ ಹಿಂದೂ ಧರ್ಮದ ಮಹಿಳೆಯನ್ನು ಮತಾಂತರಗೊಳಿಸಿ ಐಸಿಸ್ ನಂತಹ ಉಗ್ರ ಸಂಘಟನೆಯ ಸಂಪರ್ಕದ ಮೂಲಕ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಬಳಸಲಾಗುತ್ತಿದೆ ಈ ಹಿನ್ನಲೆಯಲ್ಲಿಉಳ್ಳಾಲದ ಮಾಜಿ ಶಾಸಕರ ಕುಟುಂಬವನ್ನು ಬಹಿಷ್ಕರಿಸಬೇಕು ಎಂದು ವಿ.ಹಿಂ. ಪ ಬಜರಂಗದಳ ಬೆಳಗ್ಗಿನಿಂದ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಉಳ್ಳಾಲ ತಾಲೂಕು ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಲ್ಲಿ ಬ್ಯಾನ್ ಟೆರರಿಸಂ ಅನ್ನುವ ಫಲಕಗಳನನ್ನು ಹಿಡಿದುಕೊಂಡು ಜನಜಾಗೃತಿ ಆಂದೋಲನ ಆರಂಭಿಸಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						