ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡ್ಡಾಯ ಸೂಚನೆಗಳು / ದಾಖಲೆಗಳ ವಿವರ

ಬೆಂಗಳೂರು: ನಗರಸಭೆ ಹಾಗು ಪುರಸಭೆಗೆ ಚುನಾವಣಾ ಇಲಾಖೆ ದಿನಾಂಕ ಘೋಷಿಸಲಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ನಾಮಪತ್ರ ಸಲ್ಲಿಕೆಗೆ ದಾಖಲೆ ಹಾಗೂ ನೀತಿ ನಿಯಮಗಳ ಕುರಿತು ಅಭ್ಯರ್ಥಿಗಳ ಗೊಂದಲವಿದೆ. ನಿಟ್ಟಿನಲ್ಲಿ ನಾಮಪತ್ರ ಸಲ್ಲಿಕೆಯ ಗೊಂದಲ ನಿವಾರಿಸಲು ಹರಿತಲೇಖನಿ ವಿಶೇಷ ವರದಿ‌ ನೀಡುತ್ತಿದೆ.

1. ನಾಮಪತ್ರ ಪ್ರಪತ್ರ-2 ನಲ್ಲಿ ಸಲ್ಲಿಸಬೇಕು. ಸೂಚಕರು ಮತ್ತು ಅಭ್ಯರ್ಥಿಯು ಕಡ್ಡಾಯವಾಗಿ ಸಹಿ ಮಾಡಿರಬೇಕು. ಸಹಿ ಮಾಡದ ನಾಮಪತ್ರಗಳನ್ನ ತಿರಸ್ಕರಿಸಲಾಗುವುದು. 

2. ನಾಮ ಪತ್ರದಲ್ಲಿ ಹೆಸರು ಮತ್ತು ಅಂಚೆ ವಿಳಾಸವನ್ನು ಸ್ಪಷ್ಟವಾಗಿ ಹಾಗೂ ಪೂರ್ಣವಾಗಿ ನಮೂದಿಸಬೇಕು. 

3.> ಪ್ರಮಾಣ ಪತ್ರ / ಘೋಷಣಾ ಪತ್ರವನ್ನು ಅಫಿಡವಿಟ್ (ರೂ. 20 ರ ಛಾಪಾ ಕಾಗದಲ್ಲಿ) ಸಲ್ಲಿಸಬೇಕು. 2 (ಎರಡು) ಮೂಲಪ್ರ‍್ರತಿ ಹಾಗೂ 3 (ಮೂರು) ಜೆರಾಕ್ಸ್ ಪ್ರತಿ ಒಟ್ಟು 5 (ಐದು) ಪ್ರತಿ ನೀಡಬೇಕು.  

> ಅಭ್ಯರ್ಥಿಯು ಅಫಿಡವೀಟ್‌ನಲ್ಲಿ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. 

> ಅಫಿಡವೀಟ್‌ನ ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿರಬೇಕು. 

> ಅನ್ವಯವಾಗದ ಕಾಲಂಗಳಲ್ಲಿ “ಅನ್ವಯಿಸುವುದಿಲ್ಲ” / “NIL” ಎಂದು ಬರೆಯಬೇಕು 

> ನೋಟರಿ ಪಬ್ಲಿಕ್‌ರಿಂದ ದೃಢೀಕರಿಸಿರಬೇಕು. 

> ಅಫಿಡವಿಟ್ ಸಲ್ಲಿಸದಿದ್ದಲ್ಲೀ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಕಲಂ 36 ರಂತೆ ಅನರ್ಹತೆಯ ಮಾನದಂಡವಾಗುತ್ತದೆ. 

4. ಅಭ್ಯರ್ಥಿಯು ಕಡ್ಡಾಯವಾಗಿ ಸಂಬಂಧಿಸಿದ ವಾರ್ಡ್ ಮತದಾರರ ಪಟ್ಟಿಯ ದೃಢೀಕೃತ ಉದ್ದರಣವನ್ನು ಸಲ್ಲಿಸಬೇಕು. 

5. ಅಭ್ಯರ್ಥಿಯ ವಯಸ್ಸು 21 ವರ್ಷ ಕ್ಕಿಂತ ಕಡಿಮೆ ಇರಬಾರದು (ದಾಖಲೆ ಲಗತ್ತಿಸುವುದು)

6. ಒಬ್ಬ ಅಭ್ಯರ್ಥಿ 4 ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. 

7.> ರಾಷ್ಟ್ರೀಯ / ರಾಜ್ಯ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು

> ನೋಂದಾಯಿತ / ಪಕ್ಷೇತರವಾಗಿದ್ದಲ್ಲಿ 5 ಜನ ಸೂಚಕರ ಸಹಿ ಮಾಡಿರಬೇಕು

> ಸೂಚಕರು ಕಡ್ಡಾಯವಾಗಿ ಇದೇ ವಾರ್ಡ್ ಕ್ಷೇತ್ರದ ಮತದಾರರಾಗಿರಬೇಕು

8. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಗಳನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ದಿನಾಂಕ:23/08/201 ರಂದು 3.00 ಗಂಟೆಯೊಳಗೆ ಸಲ್ಲಿಸಬೇಕು. ಮತ್ತು ಮೂಲ ಸಹಿಯುಳ್ಳ ಫಾರಂ “ಎ” ಮತ್ತು ಫಾರಂ “ಬಿ” ಅಭ್ಯರ್ಥಿಯು ಸಲ್ಲಿಸಬೇಕು (ಮೂಲ ಪ್ರತಿ) 

9. ಸಾಮಾನ್ಯ ಅಭ್ಯರ್ಥಿಗೆ ರೂ. 2000/- ಮತ್ತು ಹಿಂದುಳಿದ ವರ್ಗ/ ಅನುಸೂಚಿತ ಜಾತಿ/ ಅನುಸೂಚಿತ ಪಂಗಡ / ಮಹಿಳೆಗೆ ರೂ.1000/- ಠೇವಣಿ ಹಣ ನೀಡತಕ್ಕದ್ದು

10.> ಚುನಾವಣಾಧಿಕಾರಿಗಳ ಕಛೇರಿಯ 100 ಮೀ ಒಳಗೆ ಕೇವಲ ಎರಡು ವಾಹನಗಳು ಪ್ರವೇಶಿಸಬಹುದು. 

> ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡ್ಡಾಯ ಸೂಚನೆಗಳು ಚುನಾವಣಾಧಿಕಾರಿಗಳ ಕೊಠಡಿ ಒಳಗೆ ಅಭ್ಯರ್ಥಿಯ ಜೊತೆಗೆ 2 ಜನರಿಗೆ ಮಾತ್ರ ಪ್ರವೇಶವಿರುತ್ತದೆ. 

11. 4 (ನಾಲ್ಕು) ಪಾಸ್‌ಪೋರ್ಟ್ + 4 (ನಾಲ್ಕು) ಸ್ಟ್ಯಾಂಪ್ ಸೈಜ್ (2.5* 2 ಸೆಂ.ಮೀ     ಅಳತೆಯ) ಇತ್ತೀಚಿನ ಭಾವಚಿತ್ರವಾಗಿದ್ದು ಅದು ಬಿಳಿ / ಅರೆ ಬಿಳಿ ಹಿನ್ನೆಲೆಯಲ್ಲಿ ಸಂಪೂರ್ಣ ಮುಖ ಚಿತ್ರದೊಂದಿಗೆ ಸಲ್ಲಿಸಬೇಕು. 

12. ಭಾರತದ ಸಂವಿಧಾನ, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿಗಳಲ್ಲಿ ತಮ್ಮ ಆರ್ಹತೆ ಮತ್ತು ಅನರ್ಹತೆಗಳ ಬಗ್ಗೆ ಮಾಹಿತಿ ಹೊಂದಿರಬೇಕು.

13. ಮತಪತ್ರಗಳಲ್ಲಿ ಮುದ್ರಿತವಾಗಬೇಕಾದ ಅಭ್ಯರ್ಥಿಯ ಹೆಸರಿನ ಮಾದರಿ 

14. ಅಭ್ಯರ್ಥಿಯ ಮಾದರಿ ಸಹಿ 

15. ಮೀಸಲಿರುವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವವರು ತಹಸೀಲ್ದಾರ್‌ರವರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಪಶ್ಚಿಮ ಬಂಗಾಳದಲ್ಲಿ ಮಿತಿಮೀರಿದ ಹಿಂಸಾಚಾರ: ಪಿಎ ಸೇರಿ 5 ಸಾವು

ಪಶ್ಚಿಮ ಬಂಗಾಳದಲ್ಲಿ ಮಿತಿಮೀರಿದ ಹಿಂಸಾಚಾರ: ಪಿಎ ಸೇರಿ 5 ಸಾವು

ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ (West Bengal) ರಾಜಕೀಯ ಕೋಭೆ ತೀವ್ರಗೊಂಡಿದೆ. ಬಿಜೆಪಿ (BJP) ಕಾರ್ಯಕರ್ತರು ಎನ್ನಲಾಗುತ್ತಿರುವವರು ನಡೆಸುತ್ತಿರುವ ರಾಜಕೀಯ ಹಿಂಸಾಚಾರ ತಾರಕಕ್ಕೇರಿದೆ ಎಂಬ ಆರೋಪ ವ್ಯಾಪಕವಾಗಿದೆ.

[ccc_my_favorite_select_button post_id="121830"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಉಪನ್ಯಾಸಕಿ ಬಲಿ..!

ದೊಡ್ಡಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಉಪನ್ಯಾಸಕಿ ಬಲಿ..!

ದೊಡ್ಡಬಳ್ಳಾಪುರ (Doddaballapur) ನಿರ್ಜನ ಪ್ರದೇಶದಲ್ಲಿದ್ದ ಕಾರಿನಲ್ಲಿ (Car) ಸುಟ್ಟುಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪತ್ತೆಹಚ್ಚಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ (SP ) ಶ್ಲಾಘಿಸಿದ್ದು, ಅಭಿನಂದನೆ ಪತ್ರ ಹಾಗೂ ನಗದು ಪುರಸ್ಕಾರ ನೀಡುವುದಾಗಿ

[ccc_my_favorite_select_button post_id="121767"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]