ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಇಂದಿಗೂ ಪ್ರಸ್ತುತ: ಶಾಸಕ ಟಿ.ವೆಂಕಟರಮಣಯ್ಯ

ದೊಡ್ಡಬಳ್ಳಾಪುರ: ಇಂದು ದೇಶದಲ್ಲಿ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ ಪ್ರಗತಿ ಹೊಂದುತ್ತಿದೆ ಎಂದರೆ ಅದು ಗಾಂಧೀಜಿಯವರಂತಹ ಮಹಾಮಹಿಮರ ಕೊಡುಗೆಯಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಗರದ ತಾಲೂಕು ಕಚೇರಿಯಲ್ಲಿ ನಡೆದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಕ್ತ ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಪಡೆಯುತ್ತಿರುವ ಸಂದರ್ಭದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ಮಾದರಿ ಇಡೀ ವಿಶ್ವದಲ್ಲಿಯೇ ಹೆಸರಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಾಕ್ಷರತೆ ಪ್ರಮಾಣ ತೀರಾ ಕಡಿಮೆಯಿತ್ತು. ಆದರೆ ದೇಶದಲ್ಲಿ ಈಗ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ. ದೇಶದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಸ್ವಾತಂತ್ರ್ಯದ ಅರ್ಥ ಮೂಡಿಸಿದ ಗಾಂಧಿ ಸದಾ ಸ್ಮರಣೀಯರು ಎಂದರು.

ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಮಾತನಾಡಿ, ಜಾಗತೀಕರಣದ ಇಂದಿನ ದಿನಗಳಲ್ಲಿ ದೇಶಗಳು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಮತ್ತೆ ಪ್ರಸ್ತುತವಾಗುತ್ತಿದೆ. ಗ್ರಾಮಗಳ ಸಬಲೀಕರಣದಿಂದ ದೇಶದ ಪ್ರಗತಿ ಸಾಧ್ಯ ಎಂದು ಗಾಂಧೀಜಿ ಮನಗಂಡಿದ್ದರು. ಅವರ ಜನ್ಮ ದಿನಾಚರಣೆ ಅಂಗವಾಗಿ ಒಂದು ತಿಂಗಳ ಕಾಲ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಪ್ರಾಮಾಣಿಕವಾಗಿ ದೇಶದ ಆಡಳಿತ ನಡೆಸಿದರು ಎಂದು ಹೇಳಿದರು.

ಕಾನೂನು ಅರಿವು: ಕಾರ್ಯಕ್ರಮದ ಅಂಗವಾಗಿ  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಲೋಕ ಅದಾಲತ್‍ಗಳ ಪ್ರಯೋಜನದ ಬಗ್ಗೆ ವಕೀಲರಾದ ಕನಕರಾಜು ಮಾತನಾಡಿ, ಲೋಕ ಅದಾಲತ್‍ನಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಕಾನೂನು ಸೇವಾ ಸಮಿತಿ ಇದರ ನೇತೃತ್ವ ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಉಪ ನಿರ್ದೇಶಕ ಸೋಮಶೇಖರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ನಗರಸಭೆ ಸದಸ್ಯರು ಸೇರಿದಂತೆ ವಿವಿಧ  ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……..

ರಾಜಕೀಯ

ಗುಡ್ಮಾರ್ನಿಂಗ್ ನ್ಯೂಸ್: ನ.20 ರಂದು ದೊಡ್ಡಬಳ್ಳಾಪುರ TAPMCS ಅಧ್ಯಕ್ಷರ ಆಯ್ಕೆ.. 4 ಮಂದಿ ಪಟ್ಟು

ಗುಡ್ಮಾರ್ನಿಂಗ್ ನ್ಯೂಸ್: ನ.20 ರಂದು ದೊಡ್ಡಬಳ್ಳಾಪುರ TAPMCS ಅಧ್ಯಕ್ಷರ ಆಯ್ಕೆ.. 4 ಮಂದಿ

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಅಧ್ಯಕ್ಷರ ಆಯ್ಕೆ ನ.20 ರಂದು ನಡೆಯಲಿದೆ.

[ccc_my_favorite_select_button post_id="116337"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ (Shuttle Badminton Tournament) ಅಂಡರ್ 17 ಬಾಲಕರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಬಾಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

[ccc_my_favorite_select_button post_id="116353"]
ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಜೈಲು ಪಾಲಾಗಿದ್ದ ಯುವಕ ಜಾಮೀನಿನಲ್ಲಿ ಹೊರಗೆ ಬಂದ ಎರಡು ವಾರಗಳ ನಂತರ ಪತ್ನಿಗೆ ಲೈವ್ ವಿಡಿಯೊ ಮಾಡಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ (Suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

[ccc_my_favorite_select_button post_id="116294"]
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಫಘಾತಕ್ಕೆ (Accident) ಒಳಗಾಗಿ ದೊಡ್ಡಬಳ್ಳಾಪುರ ನಗರದ ನಿವಾಸಿ, ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ನಾರನಹಳ್ಳಿ ಬಳಿ ಸಂಭವಿಸಿದೆ.

[ccc_my_favorite_select_button post_id="116301"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!