ಮಿಸೆಸ್‌ ಇಂಡಿಯಾ ಪ್ರಶಸ್ತಿ ಪಡೆದ ದೊಡ್ಡಬಳ್ಳಾಪುರ ಡಿವೈಎಸ್ಪಿ ಟಿ.ರಂಗಪ್ಪ ಪತ್ನಿ ರಶ್ಮಿ ರಂಗಪ್ಪ

ಬೆಂಗಳೂರು: ಗ್ರಾಮಾಂತರ ‌ಜಿಲ್ಲೆಯ ದೊಡ್ಡಬಳ್ಳಾಪುರ ಡಿವೈಎಸ್ಪಿ ಟಿ.ರಂಗಪ್ಪರ ಮಡದಿ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎಂಟು ಸುತ್ತಿನಲ್ಲಿ ಸಾಧನೆ ಮಾಡಿದ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಐ ಯಾಮ್ ಪವರ್ ಫುಲ್ ಪ್ರಶಸ್ತಿ ಪಡೆದಿದ್ದು ಸಿಂಗಾಪುರದಲ್ಲಿ‌ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ರಶ್ಮಿ ಅವರ ಪತಿ ಟಿ.ರಂಗಪ್ಪ ಅವರು ದೊಡ್ಡಬಳ್ಳಾಪುರದಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದು , ಹಿರಿಯ ಮಗಳ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ. ಎರಡನೇ ಮಗಳ ಐದನೇ ತರಗತಿ. 

ಸಮೃದ್ಧ ಸಂಸಾರದ ಭಾರ ಹೊತ್ತ ರಶ್ಮಿರಂಗಪ್ಪ ಅವರು ತಾನು ಎನಾದ್ರು ಸಾಧನೆ ಮಾಡಬೇಕೆಂಬ ಹಠ ಮಾತ್ರ ಬಿಟ್ಟಿರಲಿಲ್ಲ. ಇದೇ ಹಠ ಅವರನ್ನ  ದೇಶವೇ ತನ್ನತ್ತ ನೋಡುವಂತೆ ಮಾಡಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ರಶ್ಮಿರಂಗಪ್ಪ ಶಿವಣಿ ಗ್ರಾಮದ ಅಪ್ಪಟ ರೈತನ ಮಗಳು.

ಹುಟ್ಟಿನಿಂದಲೇ ಸೌಂದರ್ಯವತಿ ಆಗಿರುವ ರಶ್ಮಿ ಶಿವಮೊಗ್ಗಾದ ಸಹ್ಯಾದ್ರಿ ಕಾಲೇಜ್ನಲ್ಲಿ ಬಿಕಾಂ ಮುಗಿಸಿದ್ದಾರೆ. ಇಷ್ಟರಲ್ಲಿಯೇ 2004ರಲ್ಲಿ ಪೊಲೀಸ್ ಅಧಿಕಾರಿ ರಂಗಪ್ಪ ಜೊತೆ ವಿವಾಹವಾಯಿತು. ವಿವಾಹದ ಬಳಿಕ ಹತ್ತಾರು ಕಡೆ ಪತಿಯ ವರ್ಗಾವಣೆ ಕಾರಣಕ್ಕೆ ಸುತ್ತಾಟ ನಡುವೆಯೂ ಈ ಸಾಧನೆ ಮಾಡಿದ್ದಾರೆ.

ರಶ್ಮಿ ರಂಗಪ್ಪ ಬಹುತೇಕ ಟಿವಿ ಶೋಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಈ ವೇಳೆ ಸ್ಪರ್ಧೆಗಳ ನಡೆಸುವ ನಂದಿನಿ ನಾಗರಾಜ್ ಅವರ ಪರಿಚಯವಾಗಿತ್ತು. ಮನೆ ನಿರ್ವಹಣೆ ಮಾಡುತ್ತಿದ್ದ ರಶ್ಮಿ ರಂಗಪ್ಪರಿಗೆ ಮಿಸೆಸ್ ಇಂಡಿಯಾ ಐಆಮ್ ಫಾವರ್ ಫುಲ್ ಸ್ಪರ್ಧೆ ಬಗ್ಗೆ ಗೊತ್ತಾಯಿತು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡಿದ್ರು. ನಿರೀಕ್ಷೆಯಂತೆ ಎಂಟು ಸುತ್ತುಗಳಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇದು ವಿಶೇಷವಾಗಿ ಗೃಹಿಣಿಯರಿಗೆ ಮಾತ್ರವೇ ನಡೆಯುವ ಸ್ಪರ್ಧೆ. ವಯಸ್ಸಿನ ಮಿತಿ ಇಲ್ಲಾ. ಆದ್ರೆ ರಾಷ್ಟ್ರೀಯ ಸ್ಪರ್ಧೆಗೆ ಹೋಗುವ ಬಗ್ಗೆ ರಶ್ಮಿ ಅವರು ಹೆಚ್ಚು ಗಮನ ಹರಿಸಲಿಲ್ಲ. ಆದರೆ ಗೆಳೆತಿಯರು ಸಂಬಂಧಿಕರು ಒತ್ತಾಯದ ಕಾರಣ ಸ್ಪರ್ಧೆಗೆ ಕೇವಲ ಹತ್ತು ದಿನ ಇರುವಾಗಲೇ ತಯಾರಿ ನಡೆಸಿ ಈಗ ಪ್ರಶಸ್ತಿ ಗೆದ್ದಿದ್ದಾರೆ. 

ಜೈಪುರದಲ್ಲಿ ನಡೆದ ರಾಷ್ಟ್ರೀಯ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವ್ಯಕ್ತಿತ್ವ, ಸಾಮಾನ್ಯ ಜ್ಞಾನ, ವಿಭಿನ್ನ ಶೈಲಿಯ ವಾಕ್, ರಾಪ್ ವಾಕ್, ಈಜುವುದು, ಯೋಗ ಹೀಗೆ ಎಂಟು ಸುತ್ತುಗಳಿದ್ದವು. ಪ್ರತಿಯೊಂದು ರಾಜ್ಯದಿಂದ ಸ್ಪರ್ಧಿಗಳು ಆಗಮಿಸಿದ್ದರು. ಇಂತಹ ತುರುಸಿನ ಸ್ಪರ್ಧೆಯಲ್ಲಿ ರಶ್ಮಿ ರಂಗಪ್ಪ ಜಯದ ಮಾಲೆ ಧರಿಸಿದ್ದಾರೆ.

ಮದುವೆ ಆಯಿತು ಎಂದರೆ ಜೀವನ ಮುಗಿಯಿತು ಎನ್ನುವ ಮಹಿಳೆಯರಿಗೆ ರಶ್ಮಿ ರಂಗಪ್ಪ ಒಂದು ರೀತಿಯಲ್ಲಿ ಸ್ಪೂರ್ತಿಯಾಗಿದ್ದಾರೆ. ಬರುವ ಮಾರ್ಚ್, ಎಪ್ರೀಲ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮಿಸೆಸ್ ಇಂಡಿಯಾ ಐಎಮ್ ಫಾವರ್ ಫುಲ್ ಸ್ಪರ್ಧೆ ಸಿಂಗಪೂರನಲ್ಲಿ ನಡೆಯುತ್ತಿದೆ. ಇದು ಜಾಗತಿಕ ಮಟ್ಟದ ಸ್ಪರ್ಧೆ ಆದ ಹಿನ್ನೆಲೆ ಇನ್ನಷ್ಟು ಸವಾಲುಗಳು ಎದುರಿಸಬೇಕಾಗುತ್ತಿದೆ. ಇದಕ್ಕಾಗಿ ರಶ್ಮಿ ರಂಗಪ್ಪ ತಾಲೀಮು ಆರಂಭಿಸಿದ್ದಾರೆ.

ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿ.ವೈ.ವಿಜಯೇಂದ್ರ

ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿ.ವೈ.ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರ (Cmsiddaramaiah) ನೇತೃತ್ವದ ಸರಕಾರವು ಗೊಂದಲದ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="117898"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ..!

ದೊಡ್ಡಬಳ್ಳಾಪುರ: ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ..!

ಇದೇ ತಿಂಗಳ 15 ರಂದು ಕಾಣೆಯಾಗಿದ್ದ ಬಾಲಕನ ಶವ ತಾಲೂಕಿನ ತೂಬಗೆರೆ ಹೋಬಳಿಯ ಸಾಧುಮಠ ರಸ್ತೆಯ ಬಳಿ ಪತ್ತೆಯಾಗಿದೆ (Missing boy found dead)

[ccc_my_favorite_select_button post_id="117857"]
ದೊಡ್ಡಬಳ್ಳಾಪುರ: ಜೆಸಿಬಿಗೆ ಕಾರು ಡಿಕ್ಕಿ..!

ದೊಡ್ಡಬಳ್ಳಾಪುರ: ಜೆಸಿಬಿಗೆ ಕಾರು ಡಿಕ್ಕಿ..!

ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವು ಪಡೆಯುತ್ತಿದ್ದ ಜೆಸಿಬಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ (Accident) ಕಾರು ತೀವ್ರವಾಗಿ ಜಖಂಗೊಂಡಿರುವ ಘಟನೆ ತಾಲೂಕಿನ ಮೆಣಸಿ ಗೇಟ್ ಬಳಿ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದೆ.

[ccc_my_favorite_select_button post_id="117905"]

ಆರೋಗ್ಯ

ಸಿನಿಮಾ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕ ಪ್ರಕಾಶ್ ರಾಜ್ (Prakash Raj) ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ.

[ccc_my_favorite_select_button post_id="117722"]
error: Content is protected !!