ದೊಡ್ಡಬಳ್ಳಾಪುರ: ನಗರದ ಕುಚ್ಚಪ್ಪನ ಪೇಟೆಯ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಹಿಂದು ಜಾಗರಣಾ ವೇದಿಕೆಯಿಂದ ನಡೆದ ಗೋ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಳೆಯಲ್ಲಿಯೂ ಪೂಜಾ ಕಾರ್ಯಕ್ರಮಕ್ಕೆ ಯಾವುದೇ ತೊಡಕುಂಟಾಗದಂತೆ ಹಿಂಜಾವೇ ದೊಡ್ಡಬಳ್ಳಾಪುರ ನಗರ ಪ್ರಧಾನ ಕಾರ್ಯದರ್ಶಿ ಹರೀಶ್.ವೈ.ಎನ್ ನೇತೃತ್ವದಲ್ಲಿ ಕಾರ್ಯಕರ್ತರು ಭಾಗಿಯಾದರು.
ಈ ವೇಳೆ ಅರ್ಚಕರಾದ ಸುದರ್ಶನ್, ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಹರೀಶ್.ಎಮ್, ನವೀನ ಕುಮಾರ.ಹೆಚ್.ಎಸ್, ಗೌತಮ.ಆರ್, ಅನಿಲ್ ಕುಮಾರ್.ಕೆ, ಶಶಿ ಕುಮಾರ್.ಕೆ, ಹೇಮಂತ ರಾಜು, ಅರುಣ ಕುಮಾರ್.ಕೆ, ಚೇತನ.ಎಲ್.ಪಿ, ಜಯಂತ್, ವೆಂಕಟೇಶ್.ಕೆ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……