ದಿನ ಭವಿಷ್ಯ: ಮಂಗಳವಾರ , ಡಿಸೆಂಬರ್ 14 , 2021, ದೈನಂದಿನ ರಾಶಿ ಭವಿಷ್ಯ / ಈ ರಾಶಿಯವರಿಗೆ ಕಚೇರಿ ಲೆಕ್ಕಪತ್ರಗಳಲ್ಲಿನ ತೊಡಕುಗಳು ನಿವಾರಣೆ

ಮೇಷ: ಈ ರಾಶಿಯವರಿಗೆ ಆಕಸ್ಮಿಕ ಧನಲಾಭವಾಗಲಿದೆ. ಕೆಲಸ ಕಾರ್ಯಗಳು ಸುಲಭವಾಗಿ ನಿಮ್ಮಿಚ್ಛೆಯಂತೆ ಕೈಗೂಡುವವು. ಆತ್ಮೀಯರ ಭೇಟಿ ಮತ್ತು ಸಂತೋಷದ ಸುದ್ದಿ ಕೇಳುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಆಟಪಾಠಗಳಲ್ಲಿ ಹಿನ್ನಡೆ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ನಷ್ಟ.

ವೃಷಭ: ಈ ರಾಶಿಯವರಿಗೆ ಊಹಾಪೋಹಗಳು ಬೇಡ. ಕೌಟುಂಬಿಕ ಸುಖ, ಶಾಂತಿಗಳು ನೆಲೆಸಿ ಮಾನಸಿಕ ನೆಮ್ಮದಿ. ಕಾರ್ಯ–ಕಲಾಪಗಳಲ್ಲಿ ಪ್ರಗತಿ. ಕೂಡಿಕೊಳ್ಳುವ ವ್ಯವಹಾರಗಳಲ್ಲಿ ಲಾಭ ನಿರೀಕ್ಷಿಸಬಹುದು. ದೂರ ಪ್ರಯಾಣದ ಯೋಜನೆ ರೂಪುಗೊಳ್ಳುವ ಸಾಧ್ಯತೆ.

ಮಿಥುನ: ಈ ರಾಶಿಯವರಿಗೆ ಮಾನಸಿಕ ಚಂಚಲದಿಂದ ಭಯದ ವಾತಾವರಣ ಉಂಟಾಗಲಿದೆ . ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ಇಳಿಮುಖ. ಉದ್ಯೋಗಸ್ಥರಿಗೆ ವಿಶ್ವಾಸದ ನಿರ್ಧಾರಗಳಿಂದಾಗಿ ಮುನ್ನಡೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ.

ಕಟಕ: ಈ ರಾಶಿಯ ಕಾರ್ಯಬಾಹುಳ್ಯದಿಂದಾಗಿ ಒತ್ತಡ ಹೆಚ್ಚಾಗಿ ಕೆಲಸ ಕಾರ್ಯಗಳಲ್ಲಿ ಮಂದಗತಿ. ದಾಯಾದಿ ಕಲಹ ಸಂಭವ. ವಾಹನ ಪ್ರಯಾಣದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಗುರು ಹಿರಿಯರೊಡನೆ ಸಮಾಲೋಚನೆ ಸಾಧ್ಯತೆ.

ಸಿಂಹ: ಈ ರಾಶಿಯವರು ಪ್ರೀತಿ ಪಾತ್ರರೊಂದಿಗೆ ಚರ್ಚೆ. ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗದಲ್ಲಿ ಪ್ರಗತಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಕುಟುಂಬ ಸದಸ್ಯರೊಂದಿಗೆ ದೇವತಾ ದರ್ಶನ.

ಕನ್ಯಾ: ಈ  ರಾಶಿಯವರ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿದ್ದು, ಸಂತಸವಾಗಲಿದೆ. ಲೇವಾದೇವಿ ಹಣಕಾಸು ವ್ಯವಹಾರಸ್ಥರಿಗೆ ಅಧಿಕ ಲಾಭ. ಉದ್ಯೋಗ ನಿಮಿತ್ತ ವಿದೇಶ ಯಾನದ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಅಗತ್ಯ.

ತುಲಾ: ಈ ರಾಶಿಯವರ ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು. ಸಕಾಲದಲ್ಲಿ ಕೆಲಸ ಕಾರ್ಯಗಳು ಪೂರೈಸಿದ ಸಂತಸ. ಸಂಘ ಸಂಸ್ಥೆಗಳಿಂದ ಸಹಾಯ ಸಹಕಾರ ದೊರಕಲಿದೆ. ಹೊಸ ಹೊಸ ವ್ಯವಹಾರಗಳ ಬಗ್ಗೆ ಚಿಂತನೆ.

ವೃಶ್ಚಿಕ: ಈ ರಾಶಿಯವರಿಗೆ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯದೇ ವ್ಯತಿರಿಕ್ತ ಪರಿಣಾಮಗಳುಂಟಾಗಬಹುದು.ಅಹಿತಕರ ಘಟನೆಗಳಿಂದಾಗಿ ವೃಥಾ ದಂಡ ತೆರಬೇಕಾದೀತು. ಲೇವಾದೇವಿ ವ್ಯವಹಾರವನ್ನು ದಿನದ ಮಟ್ಟಿಗೆ ಮುಂದೂಡಿ.

ಧನಸ್ಸು: ಈ ರಾಶಿಯವರ ನಿರೀಕ್ಷಿತ ಕೆಲಸ ಕಾರ್ಯಗಳು ಫಲ ನೀಡಿ ಸಂತಸ. ವ್ಯಾಪಾರದಲ್ಲಿ ಲಾಭ. ಆತ್ಮೀಯ ವ್ಯಕ್ತಿಗಳ ಸಂದರ್ಶನ ಸಾಧ್ಯತೆ. ದೂರದಲ್ಲಿರುವ ಮಕ್ಕಳಿಂದ ಸಹಾಯ ಹರಿದು ಬರುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ.

ಮಕರ: ಈ ರಾಶಿಯವರು ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆ ಮೀರಿದ ಲಾಭ. ಆಪ್ತೇಷ್ಟರ ಆಗಮನ ಸಾಧ್ಯತೆ. ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಸಮಾಚಾರ ಕೇಳಿ ದುಗುಡ ನಿವಾರಣೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.

ಕುಂಭ: ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲಿದ್ದು, ಕುಟುಂಬದಲ್ಲಿ ಶಾಂತ ವಾತಾವರಣ. ವಿದ್ಯಾರ್ಥಿಗಳಿಗೆ ಆಟ–ಪಾಠಗಳಲ್ಲಿ ಹೆಚ್ಚಿನ ಪ್ರಗತಿ. ಉದ್ಯೋಗಸ್ಥರಿಗೆ ಕಚೇರಿ ಲೆಕ್ಕಪತ್ರಗಳಲ್ಲಿನ ತೊಡಕುಗಳು ನಿವಾರಣೆಯಾಗಿ ನಿರಾಳತೆ ಉಂಟಾಗುತ್ತದೆ.

ಮೀನ: ಈ ರಾಶಿಯವರು ಅನಿರೀಕ್ಷಿತ ಪ್ರಯಾಣ ಸಂಭವಿಸಿ ವೃಥಾ ಖರ್ಚಿಗೆ ನಾಂದಿಯಾಗುವ ಸಾಧ್ಯತೆಯಿದೆ. ಆತ್ಮೀಯರ ಆರೋಗ್ಯದಲ್ಲಿ ವ್ಯತ್ಯಯ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಹಿರಿಯರ ಮಾತುಗಳನ್ನು ಕಡೆಗಣಿಸದಿರಿ. ಹಿತಶತ್ರುಗಳ ಭಯ.

ಮಾಸ: ಮಾರ್ಗಶಿರ ಮಾಸ

ಪಕ್ಷ:
  ಶುಕ್ಲ ಪಕ್ಷ      

ತಿಥಿ: 
ಏಕಾದಶಿ

ನಕ್ಷತ್ರ:
ಅಶ್ವಿನಿ ನಕ್ಷತ್ರ


ರಾಹುಕಾಲ: 
03:09 ರಿಂದ 04:35

ಗುಳಿಕಕಾಲ:
12:18 ರಿಂದ 01:43

ಯಮಗಂಡಕಾಲ:
09:26 ರಿಂದ 10:52


ಹೆಚ್ಚಿನ ಮಾಹಿತಿಗೆ:
ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಮುಂದು: ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಮುಂದು: ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಸೈನ್ಯದಲ್ಲಿ , ಅಂತರಿಕ್ಷದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತೀಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah)

[ccc_my_favorite_select_button post_id="111004"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!