ಬೆಂ.ಗ್ರಾ.ಜಿಲ್ಲೆ: ತೀವ್ರತರದ ಕೋವಿಡ್-19 ಲಸಿಕಾಕರಣಕ್ಕೆ ವೈದ್ಯಕೀಯ ತಂಡಗಳಿಂದ ಗ್ರಾಮಗಳಿಗೆ ಭೇಟಿ

ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ವೈರಾಣುವಿನ ಹೊಸ ರೂಪಾಂತರಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಹಾಗೂ ಲಸಿಕೆ ಪಡೆಯದೇ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಲಸಿಕೆಗಳನ್ನು ನೀಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಡಿಸೆಂಬರ್ 27ರ ಸೋಮವಾರ ಬೆಳಿಗ್ಗೆ 7.30 ಗಂಟೆಯಿಂದ ಜನವರಿ 2ರ ಭಾನುವಾರದವರೆಗೆ ತೀವ್ರ ತರಹದ ಕೋವಿಡ್-19 ಲಸಿಕಾಕರಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕಾಕರಣ ಅಭಿಯಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮಗಳಿಗೆ ವೈದ್ಯಕೀಯ ತಂಡಗಳು ಭೇಟಿ ನೀಡಿ ಲಸಿಕೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಡಿಸೆಂಬರ್ 28ರಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ರಾಮಪುರ, ನಲ್ಲಗಾನಹಳ್ಳಿ, ಯನಗುಂಟೆ, ಕಮ್ಮಸಂದ್ರ, ಅತ್ತಿಬೆಲೆ, ಬೆಂಡಿಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ತೆನಿಯೂರು, ಚಿಕ್ಕ ಅರಳಗೆರೆ, ಮುತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮುತ್ಕೂರು, ಮೆದಿಮಲ್ಲಸಂದ್ರ, ಅನುಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಓಬಳಾಪುರ, ಗುಂಡೂರು, ಖಾಜಿ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸೋಮಲಾಪುರ, ಲಿಂಗಧೀರ ಮಲ್ಲಸಂದ್ರ, ಹಂದೇನಹಳ್ಳಿ, ಬಾಣರಹಳ್ಳಿ, ಹೊಂಚನಹಳ್ಳಿ, ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ನಡುವಿನಪುರ, ಕೆ.ಶೆಟ್ಟಿಹಳ್ಳಿ, ಮೆಡೂರ್, ಭುವನಹಳ್ಳಿ, ಕೆ.ಮಲ್ಲಸಂದ್ರ ವ್ಯಾಪ್ತಿಯ ಗ್ರಾಮ ನಡುವತಿ, ಹೊಸಕೋಟೆ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಾದ ಕಿಲ್ಲಾರಿಪೇಟೆ, ಗಾಣಿಗರಪೇಟೆ, ಕುರುಬರಪೇಟೆ, ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ದೊಡ್ಡನಲ್ಲೂರಹಳ್ಳಿ, ನಿಡಘಟ್ಟ, ಅತ್ತಿವಟ, ದಾಸರಹಳ್ಳಿ, ಕೊಳತೂರ, ಜಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಪೂಜೇನ ಅಗ್ರಹಾರ, ಸರ್ಕಾರ ಗುಟ್ಟಹಳ್ಳಿ, ಪೆತ್ತನಹಳ್ಳಿ, ಗಣಗಲು, ವಾಗಟ, ಬ್ಯಾಲನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕಕೊರಟಿ, ದೊಡ್ಡಕೊರಟಿ, ಗುಡ್ರಹಳ್ಳಿ, ಮಾರ್ಸಂದಹಳ್ಳಿ, ಸತಿಗೇನಹಳ್ಳಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸಕೋಟೆ ವ್ಯಾಪ್ತಿಯ ಗ್ರಾಮಗಳಾದ ಕಮ್ಮವಾರಿಪೇಟೆ, ಚಿಕ್ಕತಿಗಳರ ಪೇಟೆ, ಕಿಲಾರಿ ಪೇಟೆ, ಬ್ರಾಹ್ಮಿಣ್ ಸ್ಟ್ರೀಟ್, ಪಕಿರ್‌ವಾಡ, ಶಿವನಾಪುರ ವ್ಯಾಪ್ತಿಯ ಗ್ರಾಮಗಳಾದ ಗಂಜರ್‌ನಹಳ್ಳಿ ಹಾಗೂ ಕೊರಡಹಳ್ಳಿ ಲಸಿಕಾಕರಣ ನಡೆಯಲಿದೆ.

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ವೆಂಕಟಾಪುರ, ದಿನ್ನೂರ್, ಬಚ್ಚಹಳ್ಳಿ, ವಿಜಯಪುರ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಯಲುವಹಳ್ಳಿ, ಸಂತೆ ಮೈದಾನ, ಜೆ.ಸಿ. ಬಡಾವಣೆ, ಅಶೋಕ ನಗರ, ಬೂದಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮ ಹಂದರಹಳ್ಳಿ, ಅರದೇಶನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕಣ್ಣಹೊಸಹಳ್ಳಿ, ಜಾಲಿಗೆ, ಬಸವನಪುರ, ವಿಶ್ವನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬ್ಯಾಡರಹಳ್ಳಿ, ಚಿಕ್ಕಗೊಲ್ಲಹಳ್ಳಿ, ಆವತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬೈರಪ್ಪನಹಳ್ಳಿ, ಕೋರಮಂಗಲ, ಗೊಬ್ಬರಗುಂಟೆ, ಚನ್ನರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಗೋಪಸಂದ್ರ, ಡಿಕೆಹಳ್ಳಿ, ಕೊನಗಿನಬೆಲೆ, ಸಿಟಿ ಮಂಗಲ, ಕೊಯಿರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮಂಗೊಂಡನಹಳ್ಳಿ, ಮಾಯಸಂದ್ರ, ನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬಿದಲಾಪುರ, ಬಾಲೇಪುರ, ಅರಿಶಿಣಕುಂಟೆ, ನಲ್ಲಪ್ಪನಹಳ್ಳಿ, ಮಲ್ಲೆಪುರ, ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮೂಡಗಾರಹಳ್ಳಿ, ಮಗ್ಜಿಗ್ರಹಳ್ಳಿ 2, ಸೊರ್ರೆರಹಳ್ಳಿ, ಜಿಎಂ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಪಿ ರಂಗನಾಥಪುರ, ಸಿ ಎನ್ ಹೊಸೂರು, ಹೊಲೇರಹಳ್ಳಿ, ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಾದ ಅಕ್ಕುಪೇಟೆ, ಯಲಹಂಕಬೀದಿ ಹಾಗೂ ಶಾಂತಿನಗರ ಉತ್ತರದಲ್ಲಿ ಲಸಿಕಾಕರಣ ನಡೆಯಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ವ್ಯಾಪ್ತಿಯ ಆರೂಢಿ ಗ್ರಾಮ, ದೊಡ್ಡಹೆಜ್ಜಾಜ್ಜಿ ವ್ಯಾಪ್ತಿಯ ಗ್ರಾಮಗಳಾದ ರಾಮಪುರ, ಹೊಲೇರಹಳ್ಳಿ, ರಾಮೇಶ್ವರ, ಚಿಕ್ಕನಹಳ್ಳಿ, ಜೋಡಿಕರೆಪುರ, ದೊಡ್ಡ ಬೆಳವಂಗಲ, ದೊಡ್ಡ ತುಮಕೂರು ವ್ಯಾಪ್ತಿಯ ಗ್ರಾಮಗಳಾದ ಹೊಸಹುಡ್ಯಾ, ದೊಂಬರಹಳ್ಳಿ, ಆಲಹಳ್ಳಿ, ಯಲ್ಲುಪುರ, ಕರೇನಹಳ್ಳಿ, ಚಿಕ್ಕ ತುಮಕೂರು, ಜಿ ಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕಟ್ಟೆಹಿಂಡಲಹಳ್ಳಿ, ಮಾಕಳಿ, ಓಜೇನಹಳ್ಳಿ, ಸೊಣ್ಣೇನಹಳ್ಳಿ,  ವಾಣಿಗರಹಳ್ಳಿ, ಹಾಲೇನಹಳ್ಳಿ ವ್ಯಾಪ್ತಿಯ ನೆಲ್ಲೇನಹಳ್ಳಿ ಗ್ರಾಮ, ಹುಲಿಕುಂಟೆ ವ್ಯಾಪ್ತಿಯ ಗ್ರಾಮಗಳಾದ ಚನ್ನಬಸವೈನಪಾಳ್ಯ, ತೂಬಕುಂಟೆ, ದೊಡ್ಡಮಂಕಲಾಲ, ಭೋವಿಪಾಳ್ಯ, ಮುತ್ತುಗದಹಳ್ಳಿ, ಚಿಕ್ಕಮಂಕನಾಳ, ಕಾಡನೂರು ವ್ಯಾಪ್ತಿಯ ಗ್ರಾಮಗಳಾದ ಕಲ್ಲುದೇವನಹಳ್ಳಿ, ಮುಪ್ಪಾಡಿಘಟ್ಟ, ಕಮ್ಮಸಂದ್ರ ವ್ಯಾಪ್ತಿಯ ಗ್ರಾಮಗಳಾದ ಜೋಡಿತಿಮ್ಮಸಂದ್ರ, ಪುಟ್ಟೇನಹಳ್ಳಿ, ಕನ್ನಮಂಗಲ, ಕನಸವಾಡಿ ವ್ಯಾಪ್ತಿಯ ಗ್ರಾಮಗಳಾದ ಕನಸವಾಡಿ, ರಾಮದೇವನಹಳ್ಳಿ, ಕಲ್ಲೋಡು, ಕೊನಘಟ್ಟ ವ್ಯಾಪ್ತಿಯ ಗ್ರಾಮಗಳಾದ ನಾಗದೇನಹಳ್ಳಿ ತಿಮ್ಮಸಂದ್ರ, ಹಮಾಮ್, ಕೊನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಕಾಮನ ಅಗ್ರಹಾರ, ತಂಬೇನಹಳ್ಳಿ, ಬೂಚನಹಳ್ಳಿ, ಕಣಗಲಪುರ, ಗಾಂಧಿನಗರ, ಮರಳೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಗಾಳಿಪೂಜೆ, ಹಸನಘಟ್ಟ, ರಾಜೀವ್‌ಗಾಂಧೀ ನಗರ, ಮೇಲೆಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮೇಲೆಕೋಟೆ ಗ್ರಾಮ, ಎಸ್.ಎಸ್.ಘಾಟಿ ವ್ಯಾಪ್ತಿಯ ಗ್ರಾಮಗಳಾದ ಪಾಲ್ ಪಾಲ್ ದಿನ್ನೆ, ಗುಂಜೂರು, ಮಾಕಳಿ, ಹಾಡೋನಹಳ್ಳಿ, ದುರ್ಗೇನಹಳ್ಳಿ, ಸಾಸಲು ವ್ಯಾಪ್ತಿಯ ಗ್ರಾಮಗಳಾದ ಅಣೈಹನಪಾಳ್ಯ, ಮಾಚೇನಹಳ್ಳಿ, ಗರುಡಗಲ್ಲು, ಲಕ್ಕೇನಹಳ್ಳಿ, ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸಿದ್ದಾಪುರ, ಚನ್ನಾಪುರ, ದೊಡ್ಡರಾಯಪ್ಪನಹಳ್ಳಿ, ಯಲ್ಲದನಹಳ್ಳಿ, ಸೊತೇನಹಳ್ಳಿ, ಕೊಂಡಸಂದ್ರ, ನಂದಿಗುಂಡ, ದೊಡ್ಡಬಳ್ಳಾಪುರ ಗ್ರಾಮೀಣ ವ್ಯಾಪ್ತಿಯ ಗ್ರಾಮಗಳಾದ ಎಕಸಿಪುರ, ಪಾಲನ್‌ಜೋಗಿಹಳ್ಳಿ, ಅರಳಮಲ್ಲಿಗೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಎಸ್.ಎನ್.ಹಳ್ಳಿ(|), ಮುತ್ತೂರು(|), ಶ್ರೀನಗರ(|) ಹಾಗೂ ರಂಗಪ್ಪ ಸರ್ಕಲ್(F) ನಲ್ಲಿ ಲಸಿಕಾಕರಣ ನಡೆಯಲಿದೆ. 

ನೆಲಮಂಗಲ ತಾಲ್ಲೂಕಿನ ಭೈರನಾಯಕನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಯಾದಲು, ಗೊಲ್ಲಹಳ್ಳಿ, ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸುಗ್ಗಯ್ಯನಪಾಳ್ಯ, ಲಕ್ಕೂರು ತೋಟ, ತಿಮ್ಮನಾಯಕನಹಳ್ಳಿ, ಪೆಮ್ಮನಹಳ್ಳಿ, ನಿಜಗಲ್ ಕೆಂಪೊಹಳ್ಳಿ, ಮಾಡೇನಹಳ್ಳಿ, ಹೊಸನಿಜಗಲ್, ಮಾದಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬೆಟ್ಟಹಳ್ಳಿ ಪಾಳ್ಯ, ಬೆಟ್ಟಹಳ್ಳಿ, ಬೋಲಮಾರನಹಳ್ಳಿ, ಕೋಡಿಪಾಳ್ಯ, ಬರಡಿಪಾಳ್ಯ, ಬರಡಿ, ಮಣ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಎಡಿ ಕಾಲೋನಿ, ಎಕೆ ಕಾಲೋನಿ, ತೇರಿನಬೀದಿ, ಮಾರಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಅಳಲೆದಿಬ್ಬ, ಮಲೋನಾಗತೀಹಳ್ಳಿ, ಹುಚ್ಚೇಗೌಡನಪಾಳ್ಯ, ಕುಲುವನಹಳ್ಳಿ, ಸುಧಾನಗರ, ತಿಪ್ಪಗೊಂಡನಹಳ್ಳಿ, ತಾಳೆಕೆರೆ, ತಾಳೆಕೆರಪಾಳ್ಯ, ದೊಡ್ಡೇರಿ, ಶಿವಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಗೌರಾಪುರ, ಇಸಾಮಿಪಾಳ್ಯ, ಕುಟ್ಟಘಟ್ಟ, ದೇವಗಾನಹಳ್ಳಿ, ಗೊಗಡು, ಬರಗೇನಹಳ್ಳಿ, ತಡಸೀಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮಾವಿನಕೊಮ್ಮನಹಳ್ಳಿ, ವಿಜಯಲಕ್ಷ್ಮೀ ಹ್ಯಾಲೋ ಬ್ರಿಕ್ಸ್ ಮಾವಿನಕೊಮ್ಮನಹಳ್ಳಿ, ಬಳ್ಳಗೆರೆ, ಕೆಂಚನಪುರ, ವಡ್ಡರಪಾಳ್ಯ, ಎಲೆಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬೊಮ್ಮಲಿಂಗಯನಪಾಳ್ಯ, ಚಿಕ್ಕಮುತ್ರಾಯನಪಾಳ್ಯ, ರುದ್ರನಪಾಳ್ಯ, ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸೆಂದಿಬೀದಿ, ಬಡಾವಣೆ, ಆನೆಬೀದಿ ಹಾಗೂ ಶೆಟ್ಟರಬೀದಿಯಲ್ಲಿ ಲಸಿಕಾಕರಣ ನಡೆಯಲಿದೆ. 

ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳು ಕೋವಿಡ್-19 ಲಸಿಕಾ ಮೇಳದಲ್ಲಿ ಭಾಗವಹಿಸಿ, ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ, ಶೇ.100ರಷ್ಟು ಲಸಿಕಾಕರಣ ಪ್ರಗತಿಯನ್ನು ಸಾಧಿಸಲು ಸಹಕಾರ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ ನಾಳೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ: 100 ದಂಪತಿಗಳಿಂದ ವಿಶೇಷ ರುದ್ರಾರ್ಚನೆ

ದೊಡ್ಡಬಳ್ಳಾಪುರದಲ್ಲಿ ನಾಳೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ: 100 ದಂಪತಿಗಳಿಂದ ವಿಶೇಷ ರುದ್ರಾರ್ಚನೆ

ಸಾವಿರ ವರ್ಷಗಳ ಇತಿಹಾಸವಿರುವ ಪವಿತ್ರ ಸೋಮನಾಥ ಜ್ಯೋತಿರ್ಲಿಂಗ (Somnath Jyotirlinga Darshan) ಮಾರ್ಚ್ 14ರಂದು ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದು, ಈ ಜ್ಯೋತಿರ್ಲಿಂಗ ದರ್ಶನಕ್ಕೆ ನಗರದ ಸೋಮೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್ಟ್ ಆಫ್

[ccc_my_favorite_select_button post_id="120187"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಮಾರಮ್ಮ ದೇವಾಲಯದಲ್ಲಿ ಮಾಂಗಲ್ಯ ಕದ್ದ ದುಷ್ಕರ್ಮಿಗಳು..!

ದೊಡ್ಡಬಳ್ಳಾಪುರ: ಮಾರಮ್ಮ ದೇವಾಲಯದಲ್ಲಿ ಮಾಂಗಲ್ಯ ಕದ್ದ ದುಷ್ಕರ್ಮಿಗಳು..!

ಮಾರಮ್ಮ ದೇವಾಲಯದಲ್ಲಿ (Maramma's temple) ಮಾರಮ್ಮ ದೇವಿಗೆ ಅಳವಡಿಸಿದ್ದ ಮಾಂಗಲ್ಯವನ್ನು ಕದ್ದಿರುವ ಕಳ್ಳರು ಪರಾರಿಯಾಗಿರುವ ಘಟನೆ ತಾಲೂಕಿನ ***** ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="120077"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!