ಬೆಂ.ಗ್ರಾ.ಜಿಲ್ಲೆ: ಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ಭೌತಿಕ ತರಗತಿಗಳು ಹಾಗೂ ಅಂಗನವಾಡಿಗಳು ನ.8ರಿಂದ ಆರಂಭವಾಗಿವೆ.
ಕರೊನಾ ಇಳಿಮುಖವಾದ ಕಾರಣ ರಾಜ್ಯದಲ್ಲಿ 1ರಿಂದ 10ರ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಈಗಾಗಲೇ ಆರಂಭವಾಗಿವೆ. ಅಂತೆಯೇ ನ.08 ರಿಂದ ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರ ವರೆಗೆ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಸಲು ಸೂಚಿಸಿಲಾಗಿದೆ.
ನಿರಂತರತೆ ಕಾಣದ ಶಿಕ್ಷಣ: ನ.8 ರಿಂದ ಆರಂಭವಾಗಿ ಎರಡು ತಿಂಗಳು ಕಳೆದರು ಜಿಲ್ಲೆಯ ಬಹುತೇಕ ಅಂಗನವಾಡಿಗಳು ಕೇವಲ ಮಕ್ಕಳ ಆಟಕ್ಕೆ ಮಾತ್ರ ಸೀಮಿತವಾಗಿದೆಯೇ ಹೊರತು ಪೂರ್ವ ಪ್ರಾಥಮಿಕ ಭೌತಿಕ ತರಗತಿ ಚಟುವಟಿಕೆಗಳು ನಿರಂತರವಾಗಿ ನಡೆಸುತ್ತಿಲ್ಲ ಎಂಬ ದೂರು ಪೋಷಕರದ್ದಾಗಿದೆ.
ಲಸಿಕೆ ಕಾರ್ಯ: ಕೋವಿಡ್ ಲಸಿಕೆ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಬಳಸಿಕೊಳ್ಳುತ್ತಿರುವುದು ಕಾರಣ ನಿರಂತರ ಶಿಕ್ಷಣ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಅಂಗನವಾಡಿಗಳಲ್ಲಿ ತರಗತಿ ನಡೆಸಲು ಕಾರ್ಯಕರ್ತೆಯರ ಕೋವಿಡ್ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೆ ವಿವಿಧ ಯೋಜನೆಗಳ ಅನುಷ್ಠಾನ ಸಹ ಅಂಗನವಾಡಿ ಕಾರ್ಯಕರ್ತೆಯರ ಹೆಗಲ ಮೇಲಿದ್ದು ಮಕ್ಕಳಿಗೆ ಪೂರ್ವ ಪ್ರಾಥಮಿಕ ಭೌತಿಕ ಶಿಕ್ಷಣ ನಿರಂತರವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ಕೋವಿಡ್ ಮೊದಲ ಅಲೆ, ಎರಡನೇ ಅಲೆಯಿಂದಾಗಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಭೌತಿಕ ತರಗತಿ ಎಂಬುದು ಮರೀಚಿಕೆಯಾಗಿರುವ ನಡುವೆಯೇ, ಮೂರನೇ ಅಲೆಯ ಆತಂಕ ಎದುರಾಗಿದ್ದು, ಯಾವ ಸಮಯದಲ್ಲಿ ಮತ್ತೆ ಶಾಲೆಗಳು ಬಂದ್ ಆಗಲಿದೆಯೋ ಎಂಬ ಪ್ರಶ್ನೆಯ ನಡುವೆ ಅಂಗನವಾಡಿಗಳು ಆರಂಭವಾದರೂ ನಿರಂತರ ಶೈಕ್ಷಣಿಕ ಚಟುವಟಿಕೆ ನಡೆಸದೇ ಇರುವುದಕ್ಕೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….