ರಾಮನಗರ: ಜನವರಿ 9 ರಿಂದ ಕಾಂಗ್ರೆಸ್ ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ ರಾಜಕೀಯ ಪ್ರೇರಿತವಾದ ಕಾರ್ಯಕ್ರಮ. ನಿನ್ನೆ ಸಿದ್ಧರಾಮಯ್ಯ ಅವರು ತಮಿಳುನಾಡಿನಲ್ಲಿ ಬಿಜೆಪಿಯವರು ಪ್ರಚೋದನೆ ಮಾಡಿರುವುದಾಗಿ ದೂರಿದ್ದಾರೆ. ತಮಿಳುನಾಡಿನ ಕಾಂಗ್ರೆಸ್ ಪಕ್ಷದವರು ಇವರ ಪಾದಯಾತ್ರೆಗೆ ಬೆಂಬಲಿಸುತ್ತಾರೆಯೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಕನ್ನಡ ನಾಡು, ನೆಲ, ಜಲದ ವಿಷಯ ಬಂದಾಗ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮೇಕೆದಾಟು ಯೋಜನೆ ಡಿಪಿಆರ್ ಆಗಿದ್ದು, ಸಿಡಬ್ಲ್ಯೂಸಿ ಮುಂದಿದೆ. ಈ ಯೋಜನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಮನಗರ ಘಟನೆಗೆ ಆರ್ ಎಸ್ ಎಸ್ ಆಗಲಿ, ಭಾಜಪಗಾಗಲೀ ಯಾವುದೇ ಸಂಬಂಧವಿಲ್ಲ: ರಾಮನಗರದ ಘಟನೆಗೆ ಆರ್ ಎಸ್ ಎಸ್ ಆಗಲಿ, ಭಾಜಪಗಾಗಲೀ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಮನಗರದಲ್ಲಿ ನಡೆದ ಪ್ರತಿಮೆ ವಾಗ್ವಾದದ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಪೂರ್ವನಿಯೋಜಿತವಾಗಿದ್ದು, ಈ ಬಗ್ಗೆ ಸಾಕಷ್ಟು ಸಭೆಗಳು ನಡೆದಿವೆ. ಈ ವಾಗ್ವಾದವನ್ನು ಯಾರು ಹುಟ್ಟುಹಾಕಿದರು ಎಂಬುದಕ್ಕೆ ಮಾಧ್ಯಮಗಳೇ ಸಾಕ್ಷಿಯಾಗಿವೆ. ಈ ಬೆಳವಣಿಗೆ ಬಹಳ ದುರದೃಷ್ಟಕರ. ಈ ರೀತಿಯ ಘಟನೆ ಜಿಲ್ಲೆಗೆ ಶೋಭೆ ತರುವಂಥದ್ದಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….