Why I killed Gandhi…? ಚಿತ್ರದ ಬಗ್ಗೆ ಆತಂಕವೇಕೆ..! / ಬೆತ್ತಲೆ ಸತ್ಯ-ಸುಳ್ಳಿನ ಸೆರಗು

‘ಏಳು ದಶಕಗಳ ನಿಗಿಕೆಂಡದಂತಹ ಸತ್ಯವನ್ನು ತನ್ನೊಡಲೊಳಗಿಟ್ಟುಕೊಂಡು ನೇಣಿಗೇರಿ ಮೋಕ್ಷ ಸಿಗದೆ ಕರಿಮಣ್ಣಿನ ಕುಡಿಕೆಯೊಳಗೆ ಮಮ್ಮಲಮರುಗಿ ಅಖಂಡ ಭಾರತದ ಸಿಂಧೂ ನದಿಯಲ್ಲಿ ಲೀನವಾಗಲು  ಪರಿತಪಿಸುತ್ತಿರುವ  ಆ ಮಹಾನ್ ದೇಶಭಕ್ತನ ಚಿತಾಭಸ್ಮವನ್ನು ಈ ಸಿನಿಮಾದ ಮೂಲಕ ಮಾತನಾಡಿಸಲು ಹೊರಟಿದ್ದಾರೆಯೇ ನಿರ್ದೇಶಕ ಅಶೋಕ್ ತ್ಯಾಗಿ.’

ನಿರೀಕ್ಷೆಯಿತ್ತು………..!!! ಚಿತ್ರಕ್ಕೆ ಶೀರ್ಷಿಕೆ ಇಟ್ಟ ದಿನವೇ ಈ ಚಿತ್ರದ ಬಗೆಗಿನ ವರ್ತಮಾನದ ಬೆಳವಣಿಗೆಗಳನ್ನು ಊಹಿಸಲಾಗಿತ್ತು.

ಸುಳ್ಳಿನ ಬೂದಿಯಲ್ಲಿ ಹುದುಗಿರುವ ಕೆಂಡದಂತಹ ಸತ್ಯವನ್ನು ಬೆತ್ತಲೆಗೊಳಿಸುವ ಸಿನಿಮಾ ಇದಾದ ಕಾರಣ ದೇಶದ ಒಂದು ವರ್ಗ, ಅದರಲ್ಲೂ ‘ಗಾಂಧಿ’ ಎಂಬ ಹೆಸರಿನ ಮೇಲೆಯೇ ಆರೇಳು ದಶಕಗಳ ಕಾಲ ದೇಶದಲ್ಲಿ ರಾಜಕಾರಣ ಮಾಡಿ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ ಪಕ್ಷವಂತೂ ಈ ಸಿನಿಮಾದ ವಿರುದ್ಧ ತಿರುಗಿ ಬೀಳುತ್ತದೆ ಎಂಬ ನಿರೀಕ್ಷೆ ನಿಚ್ಚಳವಾಗಿತ್ತು. ಅಂತೆಯೇ  ಈ ಚಿತ್ರವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿನ ತಮ್ಮದೇ ಸಹಭಾಗಿತ್ವದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಆಗ್ರಹಿಸಿರುವುದಷ್ಟೇ ಅಲ್ಲದೇ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ.

ಹಾಗಾದರೆ ಯಾವುದು ಆ ಸಿನಿಮಾ…? ನಿಷೇಧ ಹೇರಲ್ಪಡುವಂಥದ್ದು ಅದರಲ್ಲಿ ಏನಿದೆ….? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಲು ಕಾರಣವಾಗಿದೆ.

‘Why I Killed Gandhi…?’ ಹೌದು.., ಇದೇ ಆ ಸಿನಿಮಾ. ಪ್ರಸ್ತುತ ಚಿತ್ರೀಕರಣ ಮತ್ತು ಬಿಡುಗಡೆ ಪೂರ್ವ ಕೆಲಸಗಳನ್ನೆಲ್ಲಾ ಮುಗಿಸಿ ಇದೇ ಜನವರಿ 30ರಂದು ( ಗಾಂಧಿ ಹತರಾದ ದಿನ)  ತೆರೆಗೆ ಬರಲು ಸಿದ್ಧವಾಗಿ ನಿಂತಿದೆ. ಚಿತ್ರಕ್ಕೆ ಕಲ್ಯಾಣಿ ಸಿಂಗ್ ಬಂಡವಾಳ ಮತ್ತು ಅಶೋಕ್ ತ್ಯಾಗಿ ನಿರ್ದೇಶನವಿದೆ. ದೇಶದ ಸಂವಿಧಾನವನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ವರ್ತಿಸುವ ಒಂದು ವರ್ಗಕ್ಕೆ ‘ನರಹಂತಕ’ನಂತೆ ಕಾಣಿಸಿ ಮತ್ತೊಂದು ವರ್ಗದ ದೃಷ್ಠಿಯಲ್ಲಿ ಮಹಾತ್ಮನಾಗಿ ನೆಲೆ ನಿಂತಿರುವ ವಿನಾಯಕ ನಾಥೂರಾಮ ಗೋಡ್ಸೆಯವರ ಪಾತ್ರವನ್ನು ಮಹಾರಾಷ್ಟ್ರ ಸರ್ಕಾರದ ಮಿತ್ರ ಪಕ್ಷವಾದ ಇಂಡಿಯನ್ ಎನ್.ಸಿ.ಪಿ ಯ ಸಂಸದ ಹಾಗೂ ಮೂಲತಃ ಕಲಾವಿದರಾದ ಅಮೋಲ್ ರಾಮ್ ಸಿಂಗ್ ಕೋಲ್ಹೆ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯಲ್ಲಿಯೇ ಚಿತ್ರದ ಕಥೆ ಅಡಗಿಸಿರುವ ನಿರ್ದೇಶಕರು ಚಿತ್ರದ ಬಗ್ಗೆ ಹೆಚ್ಚಿನ ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ‘ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಗೋಡ್ಸೆ ಎಂಬ ವ್ಯಕ್ತಿ ಗುಂಡಿಕ್ಕಿ ಹತ್ಯೆಗೈದನು’ ಎಂಬುದಾಗಿ ಸ್ವಾತಂತ್ರ್ಯಾನಂತರ ಭಾರತದ ಪಠ್ಯಪುಸ್ತಕಗಳಲ್ಲಿ ನಾವು ನೀವುಗಳೆಲ್ಲರೂ ಓದಿ ತಿಳಿದುಕೊಂಡಿರುವ ‘ಪಾಠದ ಒಳ ಸಾರಾಂಶ’ ಬಿಚ್ಚಿಡುವ ಪ್ರಯತ್ನ ಈ ಸಿನಿಮಾದ ಮೂಲಕ ಆಗಿದೆ. 

‘ಏಳು ದಶಕಗಳ ನಿಗಿಕೆಂಡದಂತಹ ಸತ್ಯವನ್ನು ತನ್ನೊಡಲೊಳಗಿಟ್ಟುಕೊಂಡು ನೇಣಿಗೇರಿ ಮೋಕ್ಷ ಸಿಗದೆ ಕರಿಮಣ್ಣಿನ ಕುಡಿಕೆಯೊಳಗೆ ಮಮ್ಮಲ ಮರುಗಿ ಅಖಂಡ ಭಾರತದ ಸಿಂಧೂ ನದಿಯಲ್ಲಿ ಲೀನವಾಗಲು  ಪರಿತಪಿಸುತ್ತಿರುವ  ಆ ಮಹಾನ್ ದೇಶಭಕ್ತನ ಚಿತಾಭಸ್ಮವನ್ನು ಈ ಸಿನಿಮಾದ ಮೂಲಕ ಮಾತನಾಡಿಸಲು ಹೊರಟಿದ್ದಾರೆ ನಿರ್ದೇಶಕ ಅಶೋಕ್ ತ್ಯಾಗಿ.’

ಗಾಂಧಿಯನ್ನು ಗೋಡ್ಸೆ ಕೊಂದದ್ದು ನಿಜವೇ(ಅದರಲ್ಲೂ ಕೆಲವು ಉತ್ತರ ಸಿಗದ ಪ್ರಶ್ನೆಗಳಿವೆ) ಆದರೂ…. ಗೋಡ್ಸೆಯವರ ಆ ಕಠಿಣ ನಿರ್ಧಾರದ ಹಿಂದೆ ಒಂದಷ್ಟು ಅಲ್ಲಗಳೆಯಲಾಗದ ಕಾರಣಗಳಿವೆ. ಕೆಂಪು ಆಂಗ್ಲರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ದಾಸ್ಯಮುಕ್ತಗೊಳಿಸಲು ಮುನ್ನೆಲೆಯಲ್ಲಿದ್ದ ಮೋಹನದಾಸ್ ಕರಮಚಂದ್ ಗಾಂಧಿ, ನೆಹರೂ, ಜಿನ್ನಾ ಮುಂತಾದವರ  ಲಾಠಿ-ಬೂಟಿನೇಟು ಅಥವಾ ಜೈಲುಶಿಕ್ಷೆಗಳಿಲ್ಲದ ‘ಶಾಂತಿಯುತ ಹೋರಾಟ’ ಒಂದೆಡೆಯಾದರೆ, ಬ್ರಿಟಿಷರಿಗೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುತ್ತಾ ಪರಂಗಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ನೇತಾಜಿ, ಲಾಲಾ ಲಜಪತರಾಯ್, ತಿಲಕ್, ಭಗತ್ ಸಿಂಗ್,ಆಜಾದ್, ವೀರ ಸಾವರ್ಕರ್ ಸೇರಿದಂತೆ ಈ ನೆಲಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಸಂಖ್ಯಾತ ಕ್ರಾಂತಿಕಾರಿಗಳ ಗುಂಪು ಇನ್ನೊಂದೆಡೆ ಇತ್ತು.  ಆ ಸಂದರ್ಭದಲ್ಲಿ Foreign Return  ಮೋಹನದಾಸ್ ಕರಮಚಂದ್ ಗಾಂಧಿಯವರ  ಪ್ರಭಾವ ದೇಶದ ಒಂದು ವರ್ಗದ ಮೇಲೆ ಸಾಕಷ್ಟಿತ್ತು. ಲಕ್ಷಾಂತರ ಕ್ರಾಂತಿಕಾರಿಗಳ ಜೀವವನ್ನು ಉಳಿಸುವ ಎಲ್ಲಾ ಸಾಮರ್ಥ್ಯದ ಜೊತೆಗೆ ಅವಕಾಶಗಳು ಇದ್ದರೂ ಸಹ ಶತಮಾನದ ಅಹಿಂಸಾವಾದಿಯ ಕಣ್ಣು,ಕಿವಿ,ಬಾಯಿಗಳು ಬಂದ್ ಆಗಿದ್ದವು. ಮೇಲೆ ಹೆಸರಿಸಿದ ಎರಡೂ ಗುಂಪುಗಳ ಹೋರಾಟದ ಫಲವಾಗಿ ‘ಕೆಂಪು ಆಂಗ್ಲರಿಂದ ಕಪ್ಪು ಆಂಗ್ಲರಿಗೆ ಅಧಿಕಾರ ಹಸ್ತಾಂತರವಾಯಿತು…!!?’.

ಇದಕ್ಕೂ ಮುನ್ನ ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೆಹಲಿ ಮತ್ತು ಕೊಲ್ಕತ್ತಾಗಳಲ್ಲಿ ಲಕ್ಷಾಂತರ ಹಿಂದೂಗಳ ಹತ್ಯೆಯಾಗಿತ್ತು. ಅದರಲ್ಲಿ ಅಸಂಖ್ಯಾತ ಹಿಂದೂ ಸಹೋದರಿಯರ ಅತ್ಯಾಚಾರಗಳೂ ಸಹ ಸೇರಿದ್ದವು. ಈ ಹತ್ಯಾಕಾಂಡ ನಡೆಸಿದ್ದು ಅದೇ so-called ಮತಾಂಧ ಮುಸ್ಲಿಮರು. ಅಮಾಯಕ ಹಿಂದೂಗಳ ರಕ್ತಪಾತ ನಡೆಸಿ ಮೂಲತಃ ಹಿಂದೂರಾಷ್ಟ್ರವಾಗಿದ್ದ ಭಾರತವನ್ನು ಒಡೆದು ಪೂರ್ವ-ಪಶ್ಚಿಮ ಭಾಗಗಳನ್ನು ಇಸ್ಲಾಮ್ ಆಧಾರಿತ ಪಾಕಿಸ್ತಾನವನ್ನಾಗಿಸಿ, ಹೇರಳವಾದ ನಗದು ಗಂಟಿನೊಂದಿಗೆ ಜಿನ್ನಾನನ್ನು ಪಟ್ಟಕ್ಕೇರಿಸಲಾಯಿತು. ಸರಿ ಅವರ ಆಸೆಯಂತೆಯೇ  ಅವರಿಗೆ ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನವನ್ನು ಮಾಡಿಕೊಟ್ಟ ಮೇಲೆ ಉಳಿದ ಭಾರತ ಹಿಂದೂರಾಷ್ಟ್ರವಾಗಬೇಕಲ್ಲವೇ…? ಬಾಬಾಸಾಹೇಬ್ ಅಂಬೇಡ್ಕರ್ ಸಹ ‘ಭಾರತದಲ್ಲಿನ ಕೊನೆಯ ಮುಸ್ಲಿಮ್ ವ್ಯಕ್ತಿ ಪಾಕಿಸ್ತಾನಕ್ಕೆ ಹೋಗುವವರೆಗೂ, ಪಾಕಿಸ್ತಾನ ಪ್ರಾಂತ್ಯದಲ್ಲಿನ ಕೊನೆಯ ಹಿಂದೂ ಉದ್ದೇಶಿತ ಭಾರತ ಪ್ರಾಂತ್ಯದೊಳಗೆ ಬರುವವರೆಗೂ ಸ್ವಾತಂತ್ರ್ಯ ಘೋಷಣೆ ಬೇಡ’ ಎಂದು ಹಠ ಹಿಡಿದಿದ್ದರು. ಆದರೆ ಅದಕ್ಕೆ ಅಡ್ಡಗಾಲು ಹಾಕಿದ್ದು ಮೋಹನದಾಸ್ ಕರಮಚಂದ್ ಗಾಂಧಿ ಎಂಬ ಆರೋಪವಿದೆ. ಬಹುತೇಕರಿಗೆ ತಿಳಿಯದ ವಿಷಯವೇನೆಂದರೆ, ಇದರ ಹಿಂದೆ ಇದ್ದ ಸೂತ್ರಧಾರ ನೆಹರೂ. ಸರ್ದಾರ್ ಪಟೇಲರನ್ನು, ನೇತಾಜಿಯವರನ್ನು ನೇಪಥ್ಯಕ್ಕೆ ಸರಿಸಿ ದಶಕಗಳ ಮಟ್ಟಿಗಾದರೂ ತಮ್ಮ ಕುಟುಂಬದ ಅಧೀನದಲ್ಲಿ ಭಾರತವನ್ನು ಇಟ್ಟುಕೊಳ್ಳಲು ಗಾಂಧಿಯನ್ನು ಬಳಸಿಕೊಂಡು ಹೆಣೆದ ತಂತ್ರಗಾರಿಕೆಯಲ್ಲಿ ನೆಹರೂ ಗೆದ್ದಿದ್ದರು ಎನ್ನಲಾಗುತ್ತಿದೆ.

ಸ್ವಾತಂತ್ರ್ಯದ ಕ್ರಾಂತಿಕಾರಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ವೀರ ಸಾವರ್ಕರ್ ರವರ ಗರಡಿಯಲ್ಲಿ ಪಳಗಿದ್ದ ಮಹಾನ್ ದೇಶಭಕ್ತ ವಿನಾಯಕ ನಾಥೂರಾಮ್ ಗೋಡ್ಸೆಯವರಲ್ಲಿ ಇಡೀ ಭಾರತೀಯರ ಪರವಾಗಿ ಒಂದೆರಡು ಪ್ರಶ್ನೆಗಳೆದ್ದಿದ್ದವು. 

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮಯೌವನದ ಹರೆಯದಲ್ಲಿಯೇ ಅಮೂಲ್ಯವಾದ ಜೀವಗಳನ್ನು ಬ್ರಿಟಿಷರ ಗುಂಡೇಟಿಗೆ, ನೇಣಿನ ಕುಣಿಕೆಗೆ ನೀಡಿದ ಸಹಸ್ರಾರು ಅದಮ್ಯ ಚೇತನಗಳನ್ನು ಉಳಿಸಿಕೊಳ್ಳಲಿಲ್ಲ ಗಾಂಧಿ.

ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಹೆಸರಿನಲ್ಲಿ ದೆಹಲಿ-ಬಂಗಾಳಗಳಲ್ಲಿ ನಡೆದ ಹತ್ಯಾಕಾಂಡದಲ್ಲಿ ತಮ್ಮ ಮಾನ-ಪ್ರಾಣಗಳನ್ನು ಕಳೆದುಕೊಂಡ ಲಕ್ಷಾಂತರ ಹಿಂದೂ ಸಹೋದರ-ಸಹೋದರಿಯರ ರಕ್ತಪಾತದ ಬಗ್ಗೆ ಚಕಾರವೆತ್ತಲಿಲ್ಲ ಗಾಂಧಿ.

ವಲಸೆ ಬಂದ ಮುಸ್ಲಿಮರಿಗಾಗಿ ತಾಯಿ ಭಾರತಿಯನ್ನು ಸೀಳಿ ಇಬ್ಭಾಗ ಮಾಡಿದ ಮೇಲೂ, ಅವರನ್ನು ನಮ್ಮ ದೇಶದಲ್ಲಿಯೇ ಉಳಿಯುವಂತೆ ಮಾಡಿ ಹಿಂದೂಸ್ತಾನವನ್ನು so-called secular ಭಾರತವನ್ನಾಗಿ ಮಾಡಿದ್ದೂ ಅಲ್ಲದೇ, ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದಲ್ಲಿಯೇ ಉಳಿದು ಅಲ್ಲಿನ ಮತಾಂಧರ ವಿಕೃತ ಕ್ರೌರ್ಯಕ್ಕೆ ನಲುಗಿ ನೆಲೆಯ ಜೊತೆಗೆ ಪ್ರಾಣವನ್ನೂ ಕಳೆದುಕೊಂಡ ಅಸಂಖ್ಯಾತ ಹಿಂದೂಗಳ ಆರ್ತನಾದವನ್ನು ಕೇಳಿಸಿಕೊಳ್ಳಲೇ ಇಲ್ಲ ಗಾಂಧಿ ಎಂಬ ಆಕ್ರೋಶವು ಇದೇ.

ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕಿ ಹೊರಟಿದ್ದ ವಿನಾಯಕ ನಾಥೂರಾಮ್ ಗೋಡ್ಸೆಯವರು 1948 ರ  ಜನವರಿ 30 ರಂದು ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ ಇತಿಹಾಸ.. ಅದೇ ಗಾಂಧಿ ಹತ್ಯೆ….!

ಗಾಂಧಿ ಹತ್ಯೆ ಗೋಡ್ಸೆಯವರೇ ಮಾಡಿದ್ದಾ …. ಅಥವಾ ಇದರ ಹಿಂದೆ ಮತ್ತಾರದ್ದಾದರೂ ಕೈವಾಡ ಇದೆಯಾ? ಈಗ ‘Why I Killed Gandhi’ ಚಿತ್ರ ಬಿಡುಗಡೆಯಾದರೆ ಎಲ್ಲಿ ಆ ‘ಕೈ’ವಾಡ ಬಯಲಾಗುತ್ತದೆಯೋ ಎಂಬ ಭಯ ಕಾಂಗ್ರೆಸ್ಸಿಗರನ್ನು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿಸಿದೆಯಾ ಎಂಬ  ಬಗ್ಗೆ ಹತ್ತು ಹಲವು ಗೊಂದಲದ ಪ್ರಶ್ನೆಗಳು ನನ್ನನ್ನೂ ಸೇರಿದಂತೆ ದೇಶವಾಸಿಗಳನ್ನು ಕಾಡುತ್ತಿದೆಯೇ. ಅಥವಾ ಅವನತಿಯ ಅಂಚಿನಲ್ಲಿರುವ ತಮ್ಮ ಪಕ್ಷಕ್ಕೆ ಮತ್ತೊಮ್ಮೆ ಗಾಂಧಿ ಎಂಬ ಟಾನಿಕ್ ಸಿಕ್ಕಿತು ಎಂಬ ಅಧಿಕಾರದ ಲಾಲಸೆಯಿಂದ ಒಂದು ನಿರ್ದಿಷ್ಟ ವರ್ಗದ ಓಲೈಕೆಗಾಗಿಯೂ ಕಾಂಗ್ರೆಸ್ ಈ ಚಿತ್ರವನ್ನು ವಿರೋಧಿಸುತ್ತಿರಬಹುದು.

ಚಿತ್ರ ಬಿಡುಗಡೆಯಾಗಿ ‘ಗಾಂಧಿ ಹತ್ಯೆಯ ಹಿಂದಿನ ಅಸಲಿ ಸತ್ಯ’ವನ್ನು ಜಗತ್ತಿನ ಮುಂದಿರಿಸಲಿ ಮತ್ತು ಸುಳ್ಳಿನ ಸೆರಗು ಹೊದ್ದು ಅವಿತಿರುವ ಸತ್ಯವನ್ನು ಬೆತ್ತಲೆ ಮಾಡಲಿ ಎಂಬ ಆಶಯದೊಂದಿಗೆ…………

ಇಂತಿ ನಿಮ್ಮವ…ಜಿ.ಎನ್.ಪ್ರದೀಪ್

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!