ಬೆಂಗಳೂರು, (ಸೆ.15): ಗುತ್ತಿಗೆದಾರರೊಬ್ಬರು ದೂರು ನೀಡಿದ್ದ ಹಿನ್ನೆ ಲೆಯಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರು ಮುನಿ ರತ್ನ ವಿರುದ್ದ ಜೀವ ಬೆದರಿಕೆ, ಶುಕ್ರವಾರ ದಾಖಲಿಸಿದ್ದರು. ದೂರು ದಾಖಲಾದ ಬಳಿಕ ತಲೆ ಮರೆಸಿಕೊಳ್ಳಲು ಪ್ರಯತ್ನಿಸಿದ್ದ ಮುನಿರತ್ನ ಅವರು ಕೋಲಾರ ಮಾರ್ಗವಾಗಿ ಆಂಧ್ರ ಪ್ರದೇ ಶದ ಚಿತ್ತೂರಿಗೆ ತೆರಳುತ್ತಿದ್ದರು. ಮುನಿರತ್ನ ಅವರ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿದ ಬೆಂಗಳೂರು ಪೊಲೀಸರು ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಎನ್ನುವ ಪ್ರದೇಶದ ಬಳಿ ಕೋಲಾರ ಎಸ್‌ಪಿ ಬಿ.ನಿಖಿಲ್ ಸಮ್ಮುಖದಲ್ಲಿ ಬಂಧಿಸಿ, ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
30 ಲಕ್ಷ ಬೇಡಿಕೆ ಆರೋಪ; ಚಲುವರಾಜು ಎಂಬುವವರಿಂದ 30 ಲಕ್ಷ ರು.ಗೆ ಬೇಡಿಕೆ ಇಟ್ಟು, ಜೀವ ಬೆದ ರಿಕೆ ಹಾಕಿರುವ ಆರೋಪದಲ್ಲಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಬೆಂಗಳೂ ರಿನಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಪಾಲಿಕೆ ಸದಸ್ಯ ವೇಲುನಾಯಕ್ ನೀಡಿರುವ ದೂರಿನಂತೆ ಶಾಸಕರ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಎರಡು ಜಾತಿಗಳ ನಿಂದನೆಗೆ ಸಿಲುಕಿರುವ ಮುನಿರತ್ನ; ಎರಡು ಸಮುದಾಯಗಳ ನಿಂದನೆಯಲ್ಲಿ ಶಾಸಕ ಮುನಿರತ್ನ ಸಿಲುಕಿದ್ದಾರೆ. ಒಕ್ಕಲಿಗ ಹಾಗೂ ದಲಿತ ಸಮುದಾಯಗಳ ” ನಿಂದನೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಮುನಿರತ್ನ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಶನಿವಾರ ಮಧ್ಯಾಹ್ನ ರಹಸ್ಯ ಸ್ಥಳದಲ್ಲಿ ತಮ್ಮ ವಕೀಲರ ಜತೆ ಮುನಿರತ್ನ ಚರ್ಚೆ ನಡೆಸಿ, ಸೋಮವಾರದವರೆಗೆ ತಲೆಮರೆಸಿಕೊಳ್ಳಲು ತೀರ್ಮಾನಿಸಿ ಆಂಧ್ರಪ್ರದೇಶದತ್ತ ಹೊರಟಿದರು.
ಆದರೆ ಮುನಿರತ್ನ ಬಂಧನಕ್ಕೆ ಸರಕಾರದಿಂದಲೂ ಒತ್ತಡ ಹೆಚ್ಚಿದ್ದರಿಂದ ಪೊಲೀಸರು ಮೊಬೈಲ್ ಲೊಕೇಷನ್ ಟ್ರಾಕ್ ಮಾಡಿ ಮುಳಬಾಗಲು ಬಳಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….