ಬೆಂಗಳೂರು, (ಸೆ.13); ಕರಕುಶಲ ಕರ್ಮಿಗಳು, ಪಾರಂಪರಿಕ ಕಸುಬು ದಾರರನ್ನು ಪ್ರೋತ್ಸಾಹಿಸುವ ಪ್ರಧಾನಮಂತ್ರಿ ವಿಶ್ವ ಕರ್ಮ ಯೋಜನೆಯಡಿ ರಾಜ್ಯದಲ್ಲಿ 4 ಲಕ್ಷ ಫಲಾನುಭವಿಗಳು ಆಯ್ಕೆಯಾಗಿದ್ದಾರೆ. 41,000 ಫಲಾನುಭವಿಗಳಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಒದಗಿ ಸಲಾಗಿದೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಮೂರು ದಿನಗಳ ‘ಪಿಎಂ ವಿಶ್ವಕರ್ಮ ಪ್ರದರ್ಶನ ಮತ್ತು ವ್ಯಾಪಾರ ಮೇಳ- 2024’ ಅನ್ನು ಗುರುವಾರ ನಗರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಈಯೋಜನೆ ಯಡಿ ದೇಶದಲ್ಲಿ ಒಟ್ಟು 20 ಲಕ್ಷ ಫಲಾನುಭವಿಗಳು ಆಯ್ಕೆಯಾಗಿದ್ದು, ಗರಿಷ್ಠ ಫಲಾನುಭವಿಗಳು ಕರ್ನಾಟಕವರಾಗಿದ್ದಾರೆ.
ಚಮ್ಮಾರ, ಬಡಗಿ, ಅಕ್ಕಸಾಲಿಗ, ಟೈಲರ್, ಶಿಲ್ಪಿಗಳು ಸೇರಿದಂತೆ 18 ಮಾದ ರಿಯ ಕುಶಲಕರ್ಮಿಗಳನ್ನು ಗುರುತಿಸಿ ಗುರುತಿನ ಚೀಟಿ ವಿತರಣೆ, ಕೌಶಲ್ಯ ವೃದ್ಧಿ ತರಬೇತಿ, ಅಗತ್ಯ ಸಲಕರಣಿಗಳನ್ನು ಒದಗಿಸುವುದು, ಸಾಲ ಸೌಲಭ್ಯ, ಪ್ರೋತ್ಸಾಹಧನ ಮತ್ತು ಮಾರುಕಟ್ಟೆ ವಿಸ್ತರಣೆ ನೆರವು ನೀಡಲಾಗುತ್ತಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….