ದೊಡ್ಡಬಳ್ಳಾಪುರ, (ಸೆ.19): ತಾಲೂಕಿನ ದಲಿತರ ಹೋರಾಟಗಾರ, ಮಾದರ ಚೆನ್ನಯ್ಯ ಮಹಾಸಭಾ ಹಿರಿಯ ಕೋರ್ ಕಮಿಟಿ ಸದಸ್ಯರಾದ ಶಿರವಾರದ ಟಿ.ವೀರಸ್ವಾಮಿ ಇಂದು ಮುಂಜಾನೆ ನಿಧನರಾಗಿದ್ದು, ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯುವುದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದಲಿತ ಚಳುವಳಿಯ ಭದ್ರ ಬುನಾದಿ ಹಾಕಿಕೊಟ್ಟ, ನಿಸ್ವಾರ್ಥ ಹೋರಾಟಗಾರರೆಂದೇ ಹೆಸರು ಮಾಡಿದವರು ಟಿ.ವೀರಸ್ವಾಮಿ, ರಾಜ್ಯದಲ್ಲಿ ದಲಿತ ಚಳುವಳಿಯ ಪ್ರಾರಂಭವಾದಾಗ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದಲಿತರ ಮುಖಂಡರಾಗಿ ಗುರುತಿಸಿಕೊಂಡಿದ್ದರು, ದಲಿತರ ಕೊಲೆಯಾದಾಗ, ದೌರ್ಜನ್ಯವಾದಾಗ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಮೃತರ ನಿಧನಕ್ಕೆ ತಾಲೂಕಿನ ದಲಿತರ ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾರೆ.