ನವದಹೆಲಿ; ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ವೇದಿಕೆಯ ಮೇಲೆ ದಿಢೀರ್ ಆಗಿ ಅಸ್ವಸ್ಥರಾದ ಘಟನೆ ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಭಾಷಣ ಮಾಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಧ್ವನಿಯು ತೀವ್ರವಾಗಿ ಕಟ್ಟಿಕೊಂಡಿದ್ದಲ್ಲದೇ, ಅವರಿಗೆ ಮಾತನಾಡಲೂ ಆಗದಷ್ಟು ಸುಸ್ತಾಗಿದ್ದಾರೆ.
#WATCH | Jammu and Kashmi: Congress President Mallikarjun Kharge became unwell while addressing a public gathering in Kathua. pic.twitter.com/OXOPFmiyUB
— ANI (@ANI) September 29, 2024
ಕೂಡಲೇ ವೇದಿಕೆ ಮೇಲಿದ್ದ ಕೆಲ ಕಾಂಗ್ರೆಸ್ ನಾಯಕರು ಹಾಗೂ ಖರ್ಗೆ ಅವರ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಬಂದು, ಕುಡಿಯಲು ನೀರು ಕೊಟ್ಟಿದ್ದಾರೆ.
ಬಳಿಕ ಕುಳಿತುಕೊಂಡು ಖರ್ಗೆ ಅವರು ಭಾಷಣ ಮಾಡಲು ಮುಂದಾದಾಗಲೂ ಅವರು ತೀವ್ರ ಆಯಾಸ ಅನುಭವಿಸಿದ್ದಾರೆ. ಸದ್ಯ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.