ದೊಡ್ಡಬಳ್ಳಾಪುರ; ತಾಲೂಕಿನ ಮಾಕಳಿ ಬೆಟ್ಟದ ಸಾಲಿನ ಹೊಸಹಳ್ಳಿ ರಸ್ತೆಯಲ್ಲಿ ಬೃಹತ್ ಹೆಬ್ಬಾವು ಹಾವು ( Snake )ರಸ್ತೆ ದಾಟಿದ್ದು, ವಾಹನ ಸವಾರರಿಗೆ ಕೆಲ ಕಾಲ ಆತಂಕವನ್ನು ಸೃಷ್ಟಿಸಿದೆ.
ಭಾನುವಾರ ಸಂಜೆ 7ರ ಸಮಯದಲ್ಲಿ ಹೊಸಹಳ್ಳಿ ದೊಡ್ಡಬಳ್ಳಾಪುರ ನಡುವಿನ ದೊಡ್ಡ ಹಳ್ಳದ ಸಮೀಪ ಸುಮಾರು 6ರಿಂದ 8 ಅಡಿ ಉದ್ದದ ಹೆಬ್ಬಾವು ರಸ್ತೆ ದಾಟುತ್ತಿರುವುದು ಕಂಡು ಬಂದಿದೆ.
ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ, ಹಾವು ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಹಾವು ತೆರಳಿದ ಬಳಿಕ ತೆರಳಿದ್ದಾರೆ.
Doddaballapura; ರಸ್ತೆ ದಾಟಿದ ಬೃಹತ್ ಹಾವು, ವಾಹನ ಸವಾರರು ಶಾಕ್..!#LatestUpdates #LatestNews #Doddaballapura pic.twitter.com/LGKM5GR6pC
— Harithalekhani (@harithalekhani) September 29, 2024
ಹಾವು ಸಾಗುತ್ತಿರುವ ವಿಡಿಯೋವನ್ನು ಇದೇ ದಾರಿಯಲ್ಲಿ ಕಾರಿನ ಮೂಲಕ ಸಾಗುತ್ತಿದ್ದ ಶಿಕ್ಷಕ ಗೋವಿಂದ ರಾಜ್ ಎನ್ನುವವರು ಸೆರೆಹಿಡಿದಿದ್ದಾರೆ.
ಮಾಕಳಿ ಬೆಟ್ಟದ ಸಾಲಿನಲ್ಲಿ ಅಪಾರ ವನ್ಯಜೀವಿಗಳಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಉಂಟಾಗುವ ಬೆಂಕಿ ಅವಘಡಗಳಿಂದ ಅಮೂಲ್ಯ ವನ್ಯ ಸಂಪತ್ತು ಕಾಣೆಯಾಗುತ್ತಿರುವುದು ಮಾತ್ರ ವಿಪರ್ಯಾಸ.