ದೊಡ್ಡಬಳ್ಳಾಪುರ; ನಗರದ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ಮಹಾತ್ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಸಂಸ್ಥಾಪಕರಾದ ಶ್ರೀ ಸುಬ್ರಮಣ್ಯರವರು, ಗಾಂಧೀಜಿ ಈ ಜಗತ್ತು ಕಂಡ ಮಹಾನ್ ಮಾನವತಾವಾದಿ. 200 ವರ್ಷಗಳ ಕಾಲ ಭಾರತವನ್ನು ಆಡಳಿತ ಮಾಡಿದ ಬ್ರಿಟಿಷರಿಗೆ ಮಹಾತ್ಮ ಗಾಂಧೀಜಿಯವರ ನಾಯಕತ್ವ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು.
ಪ್ರಪಂಚದ ಮಟ್ಟದಲ್ಲಿ ಗಾಂಧೀಜಿಯವರು ತೋರಿದ ನಾಯಕತದ ಗುಣಗಳನ್ನು ಯಾರೂ ಪ್ರದರ್ಶಿಸಲಾಗಲಿಲ್ಲ. ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯಂತಹ ಮಹಾನ್ ನೇತಾರರು ಈ ಪುಣ್ಯಭೂಮಿಯಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯ. ಇಂತಹ ಆದರ್ಶ ವ್ಯಕ್ತಿಗಳ ಸಿದ್ಧಾಂತಗಳಲ್ಲಿ ನಾವು ಜೀವಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ ಬಿ.ವಿ., ಉಪಪ್ರಾಂಶುಪಾಲರಾದ ಪ್ರತಿಮಾ ಪೈ ಸೇರಿದಂತೆ ಶಾಲೆಯ ಶಿಕ್ಷಕ / ಶಿಕ್ಷಕಿಯರ ಬಳಗ ರಘುಪತಿ ರಾಘವ ರಾಜಾ ರಾಮ ಪತಿತ ಪಾವನ ಸೀತಾರಾಮ್ ಭಜನೆ ಹಾಡಿದಿದರು.
ಕಾರ್ಯಕ್ರಮದ ಭಕ್ತಿಗೀತೆಗಳು, ಭಾಷಣ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾಜ ವಿಜ್ಞಾನದ ವಿಭಾಗದಿಂದ ರಸಪ್ರಶ್ನೆಯನ್ನು ಹಮ್ಮಿಕೊಳ್ಳಲಾಗಿತ್ತು.