ಹೊಟ್ಟೆಪಾಡಿಗೆ ಜೊತೆಗಿರುವವರ ವಿಷಕಾರಿ ಮಾತು ನಂಬಬೇಡಿ: ಶಾಸಕ ಧೀರಜ್ ಮುನಿರಾಜುಗೆ ಕಾಂಗ್ರೆಸ್ ಮುಖಂಡರ ಸಲಹೆ

ದೊಡ್ಡಬಳ್ಳಾಪುರ; ಬಿಜೆಪಿಯಿಂದ ನಗರಸಭೆಯಲ್ಲಿ ಎರಡು ಬಾರಿ ಸದಸ್ಯನಾಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷನಾಗಿ ಶ್ರಮವಹಿಸಿ ಪಕ್ಷವನ್ನು ಸಂಘಟಿಸಿದ್ದೇನೆ. ನಾವುಗಳು ಕಟ್ಟಿರುವ ಹುತ್ತದಲ್ಲಿ (ಮನೆಯಲ್ಲಿ) ಹಣ ಬಲದೊಂದಿಗೆ ಬಂದು ಸೇರಿಕೊಂಡು ಪಕ್ಷದಲ್ಲಿ ಹಾಗೂ ನಗರಸಭೆ ಸದಸ್ಯರಲ್ಲಿ ವಿಷ ಬೀಜ ಬಿತ್ತುವ ಮೂಲಕ ಶಾಸಕ ಧೀರಜ್ ಮುನಿರಾಜು ತಾರತಮ್ಯ ದೋರಣೆ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಎಚ್.ಎಸ್.ಶಿವಶಂಕರ್ ದೂರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಚುನಾವಣೆ ವೇಳೆ ಈಗಿನ ಬಿಜೆಪಿಯ ಶಾಸಕರು ಸೇರಿದಂತೆ ಘಟಾನುಘಟಿ ಮುಖಂಡರು ನನ್ನನ್ನು ಸೋಲಿಸಲು ಶ್ರಮವಹಿಸಿದರು. ಆದರೆ ಜನರ ವಿಶ್ವಾಸದಿಂದ ಎರಡು ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನಾವು ಎಂದಿಗೂ ವಿಷ ಇಟ್ಟಿಲ್ಲ. ಆದರೆ ಹೊಟ್ಟೆ ಪಾಡಿಗಾಗಿ ಮಾನ್ಯ ಶಾಸಕರ ಜೊತೆ ಸೇರಿರುವವರು ಇಲ್ಲ ಸಲ್ಲದ ವಿಷವನ್ನು ಹೇಳಿ ಶಾಸಕರ ದಾರಿ ತಪ್ಪಿಸುತ್ತಿದ್ದಾರೆ.

ಶಾಸಕರು ಆಯ್ಕೆಯಾಗಿ ಒಂದುವರೆ ವರ್ಷ ಕಳೆದರು ಸಹ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದಲ್ಲ.. ಕನಿಷ್ಠ ರಸ್ತೆಗಳಲ್ಲಿ ಬಿದ್ದಿರುವ ಒಂದು ಗುಂಡಿಯನ್ನು ಮುಚ್ಚಿಸಲು ಸಾಧ್ಯವಾಗಿಲ್ಲ.

ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ದಪಡಿಸುವಾಗ ಸ್ಥಳೀಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಸಕ ಧೀರಜ್ ಮುನಿರಾಜು ಅವರು ಕೆಲವರ ಮಾತು ಕೇಳಿ ಸರ್ವಾಧಿಕಾರಿಯಂತೆ ಏಕಪಕ್ಷೀಯವಾಗಿ ಕ್ರಿಯಾಯೋಜನೆಗಳನ್ನು ರೂಪಿಸುವ ಮೂಲಕ ಸದಸ್ಯರನ್ನು ಕಡೆಗಣಿಸಿ, ಬಿಜೆಪಿ, ಜೆಡಿಎಸ್ ಸದಸ್ಯರು ಇರುವ ವಾರ್ಡ್ಗಳಿಗೆ ಮಾತ್ರ ಅನುದಾನ ನೀಡಿದ್ದಾರೆ. ಶಾಸಕರು ಯುವಕರಿದ್ದೀರಿ, ಇನ್ನೂ ಅನೇಕ ವರ್ಷ ರಾಜಕಾರಣ ಮಾಡಬೇಕಿದೆ.. ವಾಸ್ತವ ತಿಳಿದುಕೊಳ್ಳಿ.

ಅಲ್ಪಸಂಖ್ಯಾತರು ವಾಸ ಮಾಡುವ ಪ್ರದೇಶದಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಲು ನೀಡಲಾಗಿದ್ದ ಅನುದಾನವನ್ನು ಶಾಸಕರು ಕೆಲವರ ಮಾತು ಕೇಳಿ ತಾರತಮ್ಯ ನೀತಿ ಅನುಸರಿಸುವ ಮೂಲಕ ತಮಗೆ ಇಷ್ಟ ಬಂದ ವಾರ್ಡ್ಗಳಲ್ಲಿ ಅಲ್ಪಸಂಖ್ಯಾತರು ಇಲ್ಲದೇ ಇರುವಲ್ಲೂ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಅಲ್ಪಸಂಖ್ಯಾತರ ವಾರ್ಡ್ಗಳಿಗು ಸಹ ಹಣ ನೀಡಿಲ್ಲ ಎಂದು ದೂರಿದರು.

ನಗರಸಭೆಯಿಂದ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಚಿತಾಗಾರವನ್ನು ರಿಯಲ್ ಎಸ್ಟೇಟ್ ಮಾಫಿಯಾಗೆ ಮಣಿದು ನಗರದಿಂದ ದೂರದ ಓಬದೇನಹಳ್ಳಿ ಬಳಿ ನಿರ್ಮಿಸಲು ಷಡ್ಯಂತ್ರ ನಡೆದಿದೆ ಇದಕ್ಕೆ ಕಾರಣ ಯಾರು..?

ಕಾಂಗ್ರೆಸ್ ಸರ್ಕಾರ ಬಿಜಿಪಿ ಶಾಸಕರು ಇರುವ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ‌. ಇದು ಶಾಸಕರದ್ದೇ ಮಾತು. ಆದರೆ ಕಾಂಗ್ರೆಸ್ ಸದಸ್ಯರು ಇರುವ ವಾರ್ಡ್ಗೆ ಅನುದಾನ ನೀಡದೆ ರಾಜಕೀಯ ಮಾಡ್ತಾ ಇರೋದು ಯಾರು‌‌..?

ನಗರಸಭೆಯಿಂದ ಅಳವಡಿಸಲು ಸಿದ್ದವಾಗಿದ್ದ ಹೋರ್ಡಿಂಗ್ ಬಿಚ್ಚಿಸಿದವರು ಯಾರು..? ಪ್ರತಿಭಟನೆ ವೇಳೆ ನಾವ್ ಮಾತಾಡಿದ್ ಏನು..? ನಮ್ಮ ಒತ್ತಾಯ ಏನು..? ಯಾರದೋ ಮಾತು ಕೇಳಿ ಸುದ್ದಿಗೋಷ್ಠಿ ಮಾಡಿ ಶಾಸಕರು ಆರೋಪಿಸಿದ್ ಏನು..? ಕಾಮಾಗಾರಿ ಆರಂಭಕ್ಕು ಮುನ್ನಾ ಶಿಷ್ಟಾಚಾರ ಪಾಲನೇ ಮಾಡಿ, ಕಾನೂನನಾತ್ಮಕವಾಗಿ ಕಾಮಗಾರಿ ಮಾಡಿ ಯುವಕರಿದ್ದೀರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ದೊಡ್ಡಬಳ್ಳಾಪುರ ಅಭಿವೃದ್ಧಿ ಮಾಡಿ ಎಂಬುದು ಅಭಿವೃದ್ಧಿಗೆ ಅಡ್ಡಿಯೇ..?

ಸರ್ವಾಧಿಕಾರಿ ಧೋರಣೆ ಬಿಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳಿ. ಹೊಟ್ಟೆ ಪಾಡಿಗಾಗಿ ನಿಮ್ ಸುತ್ತ ಸೇರಿರುವವರ ವಿಷದ ಮಾತು ನಂಬಬೇಡಿ. ನೀವು ಆಳವಾಗಿ ಇಳಿದರೆ. ನಾವು ಆಳವಾಗಿ ಹೋಗಲು ಸಿದ್ದರಿದ್ದೇವೆ ಎಂದು ಶಿವಶಂಕರ್ ಸವಾಲು ಎಸೆದರು.

ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಟಿ.ವೆಂಕಟರಣಯ್ಯ ಅವರ ಅವಧಿಯಲ್ಲಿ ನಡೆದಿರುವ ಕೆಲಸಗಳನ್ನು ಹೇಳಿಕೊಂಡು ಕ್ಷೇತ್ರದಲ್ಲಿ ಅಭಿವೃದ್ದಿಯಾಗಿದೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಒಂದುವರೆ ವರ್ಷದ ಇವರ ಸಾಧನೆ ಶೂನ್ಯವಾಗಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿರುವ 3 ಕೋಟಿ ಅನುದಾನದ ಕಾಮಗಾರಿಗಳಲ್ಲಿ ಸರ್ಕಾರದ ಎಲ್ಲಾ ನಿಯಮಗಳನ್ನು ಮೀರಲಾಗಿದೆ.

ಕಪ್ಪುಪಟ್ಟಿಯಲ್ಲಿರುವ ಕೆಆರ್ಡಿಎಲ್ ಸಂಸ್ಥೆ ವತಿಯಿಂದ ಕಾಮಗಾರಿ ಮಾಡಿಸಲಾಗುತ್ತಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮಾಡಿಸುತ್ತಿರುವ ಕಳಪೆ ಕೆಲಸಗಳನ್ನು ಪ್ರಶ್ನಿಸುವ ದಲಿತ ಸಮುದಾಯದ ಸದಸ್ಯರನ್ನೇ ನಿಂಧಿಸುವ ಕೆಲಸ ಮಾಡಿದ್ದಾರೆ. ಗುತ್ತಿಗೆದಾರ ಸದಸ್ಯರ ಪರವಾಗಿ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ದರೆ ಎಸ್ಸಿ,ಎಸ್ಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪ್ರಾರಂಭಿಸಲಾದ 100 ಹಾಸಿಗೆ ಸಾಮರ್ಥ್ಯದ ಇಎಸ್ಐ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಕ್ತಾಯವಾಗಿ ಒಂದುವರೆ ವರ್ಷಗಳು ಕಳೆದಿದ್ದರು ಉದ್ಘಾಟನೆ ಮಾಡಿಸಿಲ್ಲ. ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುವ ಈ ಆಸ್ಪತ್ರೆಯನ್ನು ಉದ್ಘಾಟಿಸಿ ಕಾರ್ಮಿಕರ ಸೇವೆ ಲಭ್ಯವಾಗುವಂತೆ ಮಾಡುವಲ್ಲಿ ಕ್ಷೇತ್ರದ ಬಿಜೆಪಿ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಮಾತನಾಡಿ, ಶಾಸಕರಾಗಿ ಅಭಿವೃದ್ಧಿ ಮಾಡಲಾಗದೆ ಮತ್ತೊಬ್ಬರ ಬಗ್ಗೆ ಆರೋಪ ಮಾಡ್ತಾ ಇದ್ದಾರೆ. ಚುನಾವಣೆಯಲ್ಲಿ ತಾಲೂಕಿನ ಜನರ ತೀರ್ಪನ್ನು ನಾವು ಒಪ್ಪಿದ್ದೇವೆ. ಅದರಂತೆ ನೂತನ ಶಾಸಕರು ಕಾರ್ಯನಿರ್ವಹಿಸಲಿ. ಅದು ಬಿಟ್ಟು ಅಭಿವೃದ್ಧಿ ಮಾಡಲಾಗದೆ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸಲ್ಲದು.

ತಾಲೂಕಿನ ಅಭಿವೃದ್ಧಿ ಮಾಡುವುದು ಶಾಸಕರ ಜವಾಬ್ದಾರಿ, ತಾಲೂಕಿಗೆ ಶಾಸಕರ ಕೊಡುಗೆ ಏನು..? ನಗರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ, ಎಸ್‌ಟಿಪಿ, ಟಿಎಸ್ಪಿ ಸೇರಿದಂತೆ ಯಾವ ಯೋಜನೆಯನ್ನು ತಾಲೂಕಿಗೆ ತಂದಿದ್ದೀರಿ ಹೇಳಿ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಪಿ ಜಗನಾಥ್, ಕೆಪಿಸಿಸಿ ಸದಸ್ಯ ಹೇಮಂತ್ ರಾಜ್, ನಗರಸಭೆ ಸದಸ್ಯರಾದ ಆನಂದ್ ಕುಮಾರ್, ಅಲ್ತಾಪ್, ಶಿವಣ್ಣ, ರೂಪಿಣಿ ಮಂಜುನಾಥ್, ಅಖಿಲೇಶ್, ನಾಗವೇಣಿ, ರಜಿನಿ ಸುಬ್ರಮಣಿ, ನಾಗರಾಜ್ ಮುಖಂಡರಾದ ಶ್ರೀನಿವಾಸ್, ಜನಪರ ಮಂಜು, ರಘುನಂದನ್ ಮತ್ತಿತರರಿದ್ದರು.

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ.. ಬಣ ಬಡಿದಾಟದ ವಿರುದ್ಧ ಆಕ್ರೋಶ..

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ.. ಬಣ ಬಡಿದಾಟದ ವಿರುದ್ಧ ಆಕ್ರೋಶ..

ಜೆಡಿಎಸ್ (JDS) ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಷ್ಟಾವಂತ ಕಾರ್ಯಕರ್ತರಿದ್ದರೆ ಚುನಾವಣೆಗಳನ್ನು ಗೆಲ್ಲುವುದು ಕಷ್ಟಸಾಧ್ಯವಲ್ಲ. ಈ ದಿಸೆಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪಕ್ಷ ಸಂಘಟನೆಯನ್ನು ಸಮರ್ಪಕವಾಗಿ ಮಾಡಬೇಕು. ಕಾರ್ಯಕರ್ತರೊಡಗೂಡಿ ಪಕ್ಷ ಸಂಘಟನೆಗೆ

[ccc_my_favorite_select_button post_id="118326"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್ ಕುಮಾರಸ್ವಾಮಿ

ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್

ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ (NDA) ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

[ccc_my_favorite_select_button post_id="118301"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ (Accident) ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ **** ಹಾಗೂ *** ನಡುವೆ ಸಂಭವಿಸಿದೆ.

[ccc_my_favorite_select_button post_id="118304"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!