ಅಮರಾವತಿ: ಆಂಧ್ರಪ್ರದೇಶದ ಎಳ್ಳೂರು ಪಟ್ಟಣದಲ್ಲಿ ಸ್ಕೂಟರ್‌ನಲ್ಲಿ ಪಟಾಕಿ ಸಾಗಿಸುತ್ತಿದ್ದಾಗ ಸ್ಪೋಟಗೊಂಡಿದ್ದು, ಸವಾರ ಮೃತಪಟ್ಟು, ಹಿಂಬದಿ ಸವಾರ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಳ್ಳೂರು ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ಬೆಳ್ಳುಳ್ಳಿ ಪಟಾಕಿ ಸೇರಿ ದಂತೆ ಹಲವಾರು ಬಗೆಯ ಪಟಾಕಿ ಗಳನ್ನು ಚೀಲ ದಲ್ಲಿ ಟ್ಟುಕೊಂಡು ಸ್ಕೂಟರ್‌ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದರು.
ಸ್ಕೂಟರ್ ಚಕ್ರ ರಸ್ತೆ ಹೊಂಡದಲ್ಲಿಳಿದು ಮೇಲೆ ಎಗರಿದ್ದರಿಂದ ಘರ್ಷಣೆ ಉಂಟಾಗಿ ಬೆಳ್ಳುಳ್ಳಿ ಪಟಾಕಿ ದಿಢೀರ್ ಸ್ಪೋಟಗೊಂಡಿವೆ. ಪರಿಣಾಮ ಸರಣಿ ಸ್ಪೋಟವಾಗಿದೆ. ಸ್ಕೂಟರ್ ಸವಾರ ಸುಧಾಕರ್ ಅವರ ದೇಹ ಛಿದ್ರವಾಗಿದೆ. ಹಿಂಬದಿ ಸವಾರ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟಾಕಿ ಚೀಲದಿಂದ ಉಂಟಾದ ಸ್ಪೋಟ ಬಹಳ ತೀವ್ರ ಸ್ವರೂಪ ದ್ದಾಗಿತ್ತು. ಪರಿಣಾಮ ಸ್ಕೂಟರ್ ಸವಾರನ ದೇಹ ಹಲವು ಚೂರಾಗಿದೆ. ಕಾಲುಗಳೂ ದೇಹದಿಂದ ಪ್ರತ್ಯೇಕ ಗೊಂಡಿವೆ.
ಈ ಸಂದರ್ಭದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಭಯಪಡಿಸುವಂತಿವೆ. ಸ್ಕೂಟರ್ ಚಕ್ರ ರಸ್ತೆ ಹೊಂಡಕ್ಕೆ ಬಿದ್ದು ಮೇಲೆ ಚಿಮ್ಮಿದ್ದರಿಂದಲೇ ಸ್ಫೋಟವಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.