ರಾಮನಗರ: ಚನ್ನಪಟ್ಟಣ ಉಪಚುನಾವಣೆ ಅಂತಿಂಮ ಹಂತದಲ್ಲಿ ಹೊಂಗನೂರು ಮತಗಟ್ಟೆಯಲ್ಲಿ ಎಡವಟ್ಟು ನಡೆದಿದೆ ಎಂಬ ಆರೋಪ ನಿಖಿಲ್ ಕುಮಾರಸ್ವಾಮಿ ಅವರದ್ದಾಗಿದೆ.
ಬೂತ್ ನಂಬರ್ 4ರಲ್ಲಿ ಇವಿಎಂ ಅದಲು ಬದಲು ಮಾಡಿ ಇಟ್ಟಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.
ವಿಚಾರ ತಿಳಿಯುತ್ತಲೇ ಮತಗಟ್ಟೆಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇವಿಎಂ ಯಂತ್ರ ಅದಲು ಬದಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಕೂಡಾ ಸಿಕ್ಕಿದೆ.
ಈ ವಿಚಾರ ಬೆಳಗ್ಗೆನೇ ಗೊತ್ತಾಗಿದೆ. ಇವಿಎಂ ಕ್ರಮಸಂಖ್ಯೆ ಪ್ರಕಾರ ಇಲ್ಲ. ಎರಡು, ಎರಡುವರೆ ಸಾವಿರ ಓಟಿದೆ ಇದರಿಂದ ನನಗೆ ಸ್ವಲ್ಪ ಆತಂಕ ಆಗಿದೆ. ಸಹಜವಾಗಿಯೇ ಅಭ್ಯರ್ಥಿಗೆ ಆತಂಕ ಆಗುತ್ತದೆ. ಇದರಿಂದ ಸಮಸ್ಯೆಯಾಗಬಹುದು ಎಂದು ಹೇಳಿದ್ದಾರೆ.
ಕೆಲವರು ಈ ಬಗ್ಗೆ ದೂರು ಕೂಡಾ ನೀಡಿದ್ದಾರೆ. ತಾವು ಹಾಕಿದ ಮತ ಬೇರೆ ಕಡೆ ಶಿಫ್ಟ್ ಆಗಿದೆ ಎಂದು ಆರೋಪಿಸಿದ್ದಾರೆ. ನಾನೀಗ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದೇನೆ. ಮುಂದೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕು ಎಂದಿದ್ದಾರೆ.